ಐಪಿಎಲ್ 2021: ಬೆನ್ ಸ್ಟೋಕ್ಸ್‌ಗೆ ಬದಲಿಯಾಗಿ ರಾಜಸ್ಥಾನ್ ರಾಯಲ್ಸ್‌ಗೆ ದಕ್ಷಿಣ ಆಫ್ರಿಕಾದ ಆಟಗಾರ ಸೇರ್ಪಡೆ

29-04-21 05:33 pm       Source: MYKHEL   ಕ್ರೀಡೆ

ಗಾಯದ ಕಾರಣದಿಂದಾಗಿ ಐಪಿಎಲ್‌ನಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅರ್ಧಕ್ಕೆ ವಾಪಾಸಾಗಿದ್ದಾರೆ. ಈ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ದಕ್ಷಿಣ ಆಫ್ರಿಕಾದ ಆಟಗಾರ ರಾಸ್ಸಿ ವ್ಯಾನ್‌ಡೆರ್ ಡಸೆನ್ ಅವರನ್ನು ಸೇರ್ಪಡೆಗೊಳಿಸಿದೆ.

ಗಾಯದ ಕಾರಣದಿಂದಾಗಿ ಐಪಿಎಲ್‌ನಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅರ್ಧಕ್ಕೆ ವಾಪಾಸಾಗಿದ್ದಾರೆ. ಈ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ದಕ್ಷಿಣ ಆಫ್ರಿಕಾದ ಆಟಗಾರ ರಾಸ್ಸಿ ವ್ಯಾನ್‌ಡೆರ್ ಡಸೆನ್ ಅವರನ್ನು ಸೇರ್ಪಡೆಗೊಳಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಬೆನ್ ಸ್ಟೋಕ್ಸ್ ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯುವ ವೇಳೆ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಬೆರಳಿನ ಮೂಳೆ ಮುರಿತಕ್ಕೊಳಗಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿದು ಇಂಗ್ಲೆಂಡ್‌ಗೆ ವಾಪಾಸಾಗಿದ್ದರು.

ಇನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ವಾನ್‌ಡರ್ ಡಸೆನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಅವರು 20 ಪಂದ್ಯಗಳಲ್ಲಿ ಭಾಗಿಯಾಗಿದ್ದು 628 ರನ್‌ಗಳನ್ನು ಬಾರಿಸಿದ್ದಾರೆ. 41.87ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವಿದೇಶಿ ಆಟಗಾರರು ಹೊರಗುಳಿದ ಕಾರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸದ್ಯ ನಾಲ್ವರು ವಿದೇಶಿ ಆಟಗಾರರು ಮಾತ್ರವೇ ಉಳಿದುಕೊಂಡಿದ್ದಾರೆ.

ಜೋಸ್ ಬಟ್ಲರ್, ಕ್ರಿಸ್ ಮೋರಿಸ್, ಮುಸ್ತಫಿಜುರ್ ರಹ್ಮಾನ್ ಮತ್ತು ಡೇಬಿಡ್ ವಾರ್ನರ್ ಸದ್ಯ ಆರ್‌ಆರ್ ತಂಡದಲ್ಲಿರುವ ವಿದೇಶಿ ಆಟಗಾರರಾಗಿದ್ದಾರೆ. ಗಾಯದ ಕಾರಣದಿಂದ ಬೆನ್ ಸ್ಟೋಕ್ಸ್ ಹಾಗು ಜೋಫ್ರಾ ಆರ್ಚರ್ ಹೊರಗುಳಿದಿದ್ದರೆ ಆಂಡ್ರೋ ಟೈ ಬಯೋಬಬಲ್ ಒತ್ತಡದ ಕಾರಣವನ್ನು ನೀಡಿ ತವರಿಗೆ ಮರಳಿದ್ದರು.

This News Article Is A Copy Of MYKHEL