ಕೋವಿಡ್ ಎಫೆಕ್ಟ್ ; ಈ ಬಾರಿಯ ಐಪಿಎಲ್ ಕೂಟ ರದ್ದು

04-05-21 01:26 pm       Headline Karnataka News Network   ಕ್ರೀಡೆ

ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಹೊಸದಿಲ್ಲಿ,,ಮೇ 04: ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಗೆ ಕೋವಿಡ್-19 ಕಾರ್ಮೋಡ ಕವಿದಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಮುಂದೂಡಲ್ಪಟ್ಟಿತ್ತು. ಈಗ ಬುಧವಾರ (ಮೇ 4) ನಡೆಯಲಿದ್ದ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಕೂಡ ಮುಂದೂಡಬೇಕಾದ ಅನುವಾರ್ಯತೆ ನಿರ್ಮಾಣವಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದ್ದ ಹೈದರಾಬಾದ್ ಮತ್ತು ಮುಂಬೈ ನಡುವಿನ ಐಪಿಎಲ್ 31ನೇ ಪಂದ್ಯ ಮುಂದೂಡಲ್ಪಡುವುದರಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆದ್ದರಿಂದ ಮೇ 3ರಂದು ನಡೆಯಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮುಂದೂಡಲ್ಪಟ್ಟಿತ್ತು.

IPL suspended for the time being after SRH's Wriddhiman Saha and Amit Mishra Test positive for IPL 2021.