ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕನಾಗುವುದು ಉತ್ತಮ ಎಂದ ಮಾಜಿ ಕ್ರಿಕೆಟಿಗ

11-05-21 04:42 pm       MYKHEL: Srinivasa A   ಕ್ರೀಡೆ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗುವ ಕಾರಣದಿಂದ ಈ ತಂಡಕ್ಕೆ ಯಾವ ಆಟಗಾರನನ್ನು ನಾಯಕನನ್ನಾಗಿ ನೇಮಿಸುತ್ತಾರೆ ಎಂಬ ಚರ್ಚೆಗಳು ಜೋರಾಗಿವೆ.

ಕೊರೊನಾವೈರಸ್ ಕಾರಣದಿಂದಾಗಿ ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಬಳಿಕ ಇದೀಗ ಕ್ರೀಡಾಭಿಮಾನಿಗಳ ಚಿತ್ತ ಜೂನ್ 18ರಿಂದ ಇಂಗ್ಲೆಂಡ್‌ನಲ್ಲಿ ಶುರುವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇನ್ನೂ ಹಲವು ಟೂರ್ನಿಗಳ ಮೇಲಿದೆ. ಬಿಸಿಸಿಐ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ 5ವಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ.

ಜೂನ್ 18ರಿಂದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನ್ಯೂಜಿಲೆಂಡ್ ವಿರುದ್ಧ ನಡೆದರೆ, ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಎರಡೂ ಕೂಡ ಇಂಗ್ಲೆಂಡ್‌ನಲ್ಲಿಯೇ ನಡೆಯಲಿದೆ. ಇದರ ನಡುವೆ ಜುಲೈ ತಿಂಗಳಿನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ. ಹೀಗಾಗಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಆಟಗಾರರ ಬದಲು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕೆಲವೊಂದಿಷ್ಟು ಭಾರತೀಯ ಆಟಗಾರರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಬಿಸಿಸಿಐ ಆಯ್ಕೆ ಮಾಡಲಿದೆ.

ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಭುವನೇಶ್ವರ್ ಕುಮಾರ್ ಹಾಗೂ ಸಂಜು ಸ್ಯಾಮ್ಸನ್ ಸೇರಿದಂತೆ ಇನ್ನೂ ಹಲವಾರು ಆಟಗಾರರನ್ನೊಳಗೊಂಡ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಬಿಸಿಸಿಐ ಕಳುಹಿಸಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗುವ ಕಾರಣದಿಂದ ಈ ತಂಡಕ್ಕೆ ಯಾವ ಆಟಗಾರನನ್ನು ನಾಯಕನನ್ನಾಗಿ ನೇಮಿಸುತ್ತಾರೆ ಎಂಬ ಚರ್ಚೆಗಳು ಜೋರಾಗಿವೆ. ಈ ಕುರಿತು ಮಾಜಿ ಕ್ರಿಕೆಟಿಗ ರೀತಿಂದರ್ ಸಿಂಗ್ ಸೋಧಿ ಪ್ರತಿಕ್ರಿಯಿಸಿದ್ದು ಹಾರ್ದಿಕ್ ಪಾಂಡ್ಯ ಅನುಭವಿ ಆಟಗಾರನಾಗಿದ್ದು ಅವರನ್ನೇ ಲಂಕಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ನಾಯಕನನ್ನಾಗಿ ನೇಮಿಸಬೇಕು ಎಂದಿದ್ದಾರೆ.

ಲಂಕಾ ವಿರುದ್ಧದ ಸರಣಿಗಳ ವಿವರ : ಭಾರತ ಮತ್ತು ಶ್ರೀಲಂಕಾ ನಡುವೆ 3 ಏಕದಿನ ಪಂದ್ಯಗಳು ಜುಲೈ 13, 16 ಹಾಗೂ 19ರಂದು ಮತ್ತು 3 ಟಿ ಟ್ವೆಂಟಿ ಪಂದ್ಯಗಳು ಜುಲೈ 22, 24 ಹಾಗೂ 27ರಂದು ನಡೆಯಲಿದ್ದು, ಎಲ್ಲಾ ಪಂದ್ಯಗಳು ಸಹ ಕೊಲಂಬೊನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.

(Kannada Copy of  Mykhel Kannada)