ಟಿಮ್ ಪೈನ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಟೀವ್ ವಾ

12-05-21 05:08 pm       MYKHEL: Madhukara Shetty   ಕ್ರೀಡೆ

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಸ್ಟೀವ್ ವಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನ್ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಸ್ಟೀವ್ ವಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪೈನ್ ಆಟದಲ್ಲಿ ಹೆಚ್ಚು ಸಹಜವಾಗಿದ್ದು ಭಿನ್ನ ರೀತಿಯಲ್ಲಿ ಯೋಚಿಸುವಂತಾಗಬೇಕೆಂದು ಸ್ಟೀವ್ ವಾ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಟೀವ್ ವಾ ಭಾರತದ ವಿರುದ್ಧದ ಸರಣಿ ಸೋಲಿನ ಸಂದರ್ಭವನ್ನು ಉಲ್ಲೇಖಿಸಿದ್ದಾರೆ. ಭಾರತದ ಪ್ರಮುಖ ಆಟಗಾರರ ಅಲಭ್ಯತೆಯ ಸಂದರ್ಭದಲ್ಲೂ ಭಾರತ 2-1 ಅಂತರದಿಂದ ಸೋಲಿಸುವಾಗ ಆಸ್ಟ್ರೇಲಿಯಾ ಬಳಿ ಪ್ಲಾನ್ ಬಿ ಅಥವಾ ಪ್ಲಾನ್ ಸಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ನಂತರ ಟೆಸ್ಟ್ ತಂಡದ ನಾಯಕ ಟಿವ್ ಪೈನ್ ಅವರ ಸ್ಥಾನ ಈಗ ತೂಗುಯ್ಯಾಲೆಯಲ್ಲಿದೆ. ಆದರೆ ತಂಡದ ಕೋಚ್ ಹಾಗೂ ಆಯ್ಕೆಗಾರರು ಟಿಮ್ ಪೈನ್ ಬೆಂಬಲಕ್ಕೆ ನಿಂತಿದ್ದು ಆಶಸ್‌ಗೂ ಟಿಮ್ ಪೈನ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡಸುವುದು ಬಹುತೇಕ ಖಚಿತವಾಗಿದೆ. "ಇತ್ತೀಚಿನ ದಿನಗಳಲ್ಲಿ ನೀವು ಸಾಕಷ್ಟು ಯೋಜನೆಗಳನ್ನು ಹೊಂದಿರುತ್ತೀರಿ. ಆದರೆ ಆ ಯೋಜನೆಗಳು ಫಲಿಸದಿದ್ದಾಗ ನೀವು ಪ್ಲಾನ್ 'ಬಿ' ಅಥವಾ ಪ್ಲಾನ್ 'ಸಿ'ಗಳನ್ನು ಹೊಂದಿರುವುದಿಲ್ಲ. ಅಲ್ಲದೆ ಸ್ವಲ್ಪ ಭಿನ್ನವಾಗಿ ಯೋಚಿಸುವುದೇ ಇಲ್ಲ. ಭಾರತದ ವಿರುದ್ಧ ಗೆಲ್ಲಲು ಸಾಧ್ಯವಾಗದ ಕೆಲ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇಂತವಿಗಳ ಅಗತ್ಯವಿತ್ತು" ಎಂದು ಸ್ಟೀವ್ ವಾ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(Kannada Copy of  Mykhel Kannada)