ಡೋಪಿಂಗ್‌ಗಾಗಿ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟ ಮೊದಲ ಮಹಿಳೆ ಅಂಶುಲಾ ರಾವ್

28-06-21 01:32 pm       MYKHEL: Sadashiva   ಕ್ರೀಡೆ

ಭಾರತದ ಮಹಿಳಾ ಕ್ರಿಕೆಟರ್ ಅಂಶುಲಾ ರಾವ್ ಕ್ರಿಕೆಟ್‌ನಿಂದ 4 ವರ್ಷ ನಿಷೇಧಿಸಲ್ಪಟ್ಟಿದ್ದಾರೆ. ಡೋಪಿಂಗ್ ಪ್ರಕಣದಲ್ಲಿ ಅಂಶುಲಾ ನಿಷೇಧಕ್ಕೀಡಾಗಿದ್ದಾರೆ.

ನವದೆಹಲಿ: ಭಾರತದ ಮಹಿಳಾ ಕ್ರಿಕೆಟರ್ ಅಂಶುಲಾ ರಾವ್ ಕ್ರಿಕೆಟ್‌ನಿಂದ 4 ವರ್ಷ ನಿಷೇಧಿಸಲ್ಪಟ್ಟಿದ್ದಾರೆ. ಡೋಪಿಂಗ್ ಪ್ರಕಣದಲ್ಲಿ ಅಂಶುಲಾ ನಿಷೇಧಕ್ಕೀಡಾಗಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಉದ್ದೀಪನ ಮದ್ದು ಸೇವನೆಗಾಗಿ ನಿಷೇಧಕ್ಕೀಡಾದ ಮೊದಲ ಮಹಿಳೆಯೆಂಬ ಕೆಟ್ಟ ದಾಖಲೆಗೆ ಅಂಶುಲಾ ಗುರುತಿಸಲ್ಪಟ್ಟಿದ್ದಾರೆ.

ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಆಲ್ ರೌಂಡರ್ ಅಂಶುಲಾ ರಾವ್ ವಿಫಲರಾಗಿದ್ದಾರೆ. ಹೀಗಾಗಿ ಅಂಶುಲಾ ಅವರನ್ನು ಕ್ರಿಕೆಟ್‌ನಿಂದ ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ. ಬೇರೆ ಬೇರೆ ಕ್ರಿಕೆಟ್ ಟೂರ್ನಿಗಳಲ್ಲಿ ಅಂಶುಲಾ ಪಾಲ್ಗೊಂಡಿದ್ದರು.

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಂಗ ಸಂಸ್ಥೆ ಆಗಿರುವ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (ಎಂಪಿಸಿಎ)ಯಲ್ಲಿ ನೋಂದಾಯಿಸಿಕೊಂಡಿರುವ ಅಂಶುಲಾ, 2019-20ರಲ್ಲಿ ಬಿಸಿಸಿಐಯ ಅಂಡರ್-23 ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ಮಾರ್ಚ್ 14ರಂದು ಬರೋಡಾದಲ್ಲಿ ನಡೆಸಲಾದ ಪರೀಕ್ಷೆಯ ವೇಳೆ ಅಂಶುಲಾ ಅವರು ನಿಷೇಧಿತ ಅನಾಬೊಲಿಕ್ ಸ್ಟಿರಾಯ್ಡ್ ಸೇವಿಸಿದ್ದು ಕಂಡು ಬಂದಿತ್ತು. ತನಗೆ ಗೊತ್ತಿಲ್ಲದೆ ಈ ಮದ್ದು ದೇಹದೊಳಕ್ಕೆ ಹೋಗಿದೆಯೆಂದು ಅಂಶುಲಾ ವಾದಿಸಿದ್ದರಾದರೂ, ಅದು ಉದ್ದೇಶಿತ ಸೇವನೆ ಅನ್ನೋದನ್ನು ನಾಡಾ ಹೇಳಿದೆ.

(Kannada Copy of Mykhel Kannada)