ಮಿಥಾಲಿ ರಾಜ್, ಆರ್‌ ಅಶ್ವಿನ್ ಹೆಸರು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು

30-06-21 02:02 pm       MYKHEL: Sadashiva   ಕ್ರೀಡೆ

ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆರ್‌ ಅಶ್ವಿನ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೆಸರನ್ನು ಬಿಸಿಸಿಐ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಿದೆ.

ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆರ್‌ ಅಶ್ವಿನ್ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೆಸರನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು ಮಾಡಿದೆ.

ಆರ್ ಅಶ್ವಿನ್ ಮತ್ತು ಮಿಥಾಲಿ ರಾಜ್ ಇಬ್ಬರೂ ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾರೆ. ಅಶ್ವಿನ್‌ಗೆ ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಿದ್ದರೆ, ಮಿಥಾಲಿ ರಾಜ್‌ಗೆ ಇಂಗ್ಲೆಂಡ್ ವನಿತೆಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಿದೆ.



ಭಾರತೀಯ ಕ್ರಿಕೆಟ್ ತಂಡಗಳಿಗೆ ನೀಡಿರುವ ಕೊಡುಗೆಯನ್ನು ಗಮನಿಸಿ ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿಗೆ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಿದೆ. 34ರ ಹರೆಯದ ಬೌಲಿಂಗ್ ಆಲ್ ರೌಂಡರ್ ಅಶ್ವಿನ್ 79 ಟೆಸ್ಟ್‌ ಪಂದ್ಯಗಳಲ್ಲಿ 2685 ರನ್, 413 ವಿಕೆಟ್, 111 ಏಕದಿನ ಪಂದ್ಯಗಳಲ್ಲಿ 675 ರನ್, 150 ವಿಕೆಟ್ ಮತ್ತು 46 ಟಿ20ಐ ಪಂದ್ಯಗಳಲ್ಲಿ 123 ರನ್, 52 ವಿಕೆಟ್ ದಾಖಲೆ ಹೊಂದಿದ್ದಾರೆ.

38ರ ಹರೆಯದ ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್‌ ಅನ್ನು ವಿಶ್ವ ಮಟ್ಟದಲ್ಲಿ ಮಿನುಗುವಂತೆ ನೋಡಿಕೊಂಡವರು. 11 ಟೆಸ್ಟ್‌ ಪಂದ್ಯಗಳಲ್ಲಿ ಮಿಥಾಲಿ 669 ರನ್, 215 ಏಕದಿನ ಪಂದ್ಯಗಳಲ್ಲಿ 7170 ರನ್, 89 ಟಿ20ಐ ಪಂದ್ಯಗಳಲ್ಲಿ 2364 ರನ್ ದಾಖಲೆ ಹೊಂದಿದ್ದಾರೆ.

(Kannada Copy of Mykhel Kannada)