ಎಂಎಸ್ ಧೋನಿ ಜನ್ಮದಿನ: ಮಾಜಿ ನಾಯಕನ ಹುಟ್ಟುಹಬ್ಬಕ್ಕೆ ಶುಭಕೋರಿದ ಕ್ರಿಕೆಟಿಗರು

07-07-21 01:19 pm       MYKHEL: Madhukara Shetty   ಕ್ರೀಡೆ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂದು 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್‌ನ ಸಾಕಷ್ಟು ಪ್ರಮುಖ ಆಟಗಾರರು ಮಾಜಿ ನಾಯಕ ಎಂಎಸ್ ಧೋನಿಗೆ ಶುಭಹಾರೈಸಿದ್ದಾರೆ.

ಎಂಎಸ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಳೆದ ವರ್ಷ ಆಗಸ್ಟ್ 15ರಂದು ನಿವೃತ್ತಿಯನ್ನು ಘೋಷಿಸಿದರು. ಅಲ್ಲಿಗೆ ಧೋನಿಯ ಸುದೀರ್ಘ ವರ್ಣರಂಜಿತ ಅಂತಾರಾಷ್ಟ್ರೀಯ ವೃತ್ತಿ ಬದುಕು ಅಂತ್ಯವಾಯಿತು. ಗಮನಾರ್ಹ ವಿಷಯವೆಂದರೆ 2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಘಾತಕಾರಿ ಸೋಲಿನ ನಂತರ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಂತರವನ್ನು ಕಾಯ್ದುಕೊಂಡಿದ್ದರು.



2007ರಲ್ಲಿ ಎಂಎಸ್ ಧೋನಿಗೆ ನಾಯಕತ್ವದ ಜವಾಬ್ಧಾರಿ ನೀಡಿದಾಗ ಎಲ್ಲರಿಗೂ ಅಚ್ಚರಿ ಮೂಡಿತ್ತು. ಆದರೆ ಮೊದಲ ಅವಕಾಶದಲ್ಲೇ ಧೋನಿ ತಾನೋರ್ವ ಅತ್ಯಂತ ಚಾಣಾಕ್ಷ ನಾಯಕ ಎಂದು ಸಾಬೀತುಪಡಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ ಯುವ ತಂಡವನ್ನು ಕಟ್ಟಿಕೊಂಡು ಧೋನಿ ಗೆದ್ದುಬೀಗಿದ್ದರು. 200 ಏಕದಿನ ಪಂದ್ಯಗಳಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿರುವ ಧೋನಿ 110 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದರು.

ತವರಿನಲ್ಲಿ ಆಡಿದ 73 ಪಂದ್ಯಗಳಲ್ಲಿ 43ರಲ್ಲಿ ಗೆಲುವು ಸಾಧಿಸಿದ್ದರು. ಧೋನಿ 90 ಟೆಸ್ಟ್, 348 ಏಕದಿನ ಹಾಗೂ 98 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 10,000ಕ್ಕೂ ಅಧೀಕ ರನ್‌ಗಳಿಸಿರುವ ಧೋನಿ ಟೆಸ್ಟ್ ಮಾದರಿಯಲ್ಲಿ 5 ಸಾವಿರಕ್ಕೂ ಅಧಿಕ ರನ್ ಸಾಧನೆಯನ್ನು ಮಾಡಿದ್ದಾರೆ. ಎಂಎಸ್ ಧೋನಿಯ 40ನೇ ಹುಟ್ಟುಹಬ್ಬಕ್ಕೆ ಭಾರತೀಯ ಕ್ರಿಕೆಟ್‌ನ ತಾರೆಗಳು ಶುಭಹಾರೈಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿ ಜೊತೆಗಿನ ಫೋಟೋವನ್ನು ಹಂಚಿಕೊಂಡು ಶುಭಹಾರೈಸಿದ್ದು ಸುರೇಶ್ ರೈಮಾ, ಹಾರ್ದಿಕ್ ಪಾಂಡ್ಯ ಇಶಾಂತ್ ಶರ್ಮಾ ಸಹಿತ ಸಾಕಷ್ಟು ಕ್ರಿಕೆಟಿಗರು ಧೋನಿಗೆ ಶುಭಾಶಯ ತಿಳಿಸಿದ್ದಾರೆ.

(Kannada Copy of Mykhel Kannada)