ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಟೆಡ್ ಡೆಕ್ಸ್ಟರ್ ನಿಧನ

26-08-21 02:08 pm       Mykhel: Sadashiva   ಕ್ರೀಡೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಟೆಡ್ ಡೆಕ್ಸ್ಟರ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಆಲ್ ರೌಂಡರ್ ಆಗಿದ್ದ ಡೆಕ್ಸ್ಟರ್ ಬಲಿಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮತ್ತು ಮಧ್ಯಮ ಕ್ರಮಾಂಕದ ವೇಗಿಯಾಗಿದ್ದರು.

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಟೆಡ್ ಡೆಕ್ಸ್ಟರ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಆಲ್ ರೌಂಡರ್ ಆಗಿದ್ದ ಡೆಕ್ಸ್ಟರ್ ಬಲಿಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮತ್ತು ಮಧ್ಯಮ ಕ್ರಮಾಂಕದ ವೇಗಿಯಾಗಿದ್ದರು. ಸುಮಾರು 30 ಟೆಸ್ಟ್‌ ಪಂದ್ಯಗಳಲ್ಲಿ ಡೆಕ್ಸ್ಟರ್ ಆಂಗ್ಲ ತಂಡವನ್ನು ಮುನ್ನಡೆಸಿದ್ದಾರೆ (ಚಿತ್ರಕೃಪೆ: ಐಸಿಸಿ).

62 ಟೆಸ್ಟ್ ಪಂದ್ಯಗಳನ್ನಾಡಿರುವ ಟೆಡ್ ಡೆಕ್ಸ್ಟರ್ 4502 ರನ್ ಮತ್ತು 66 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ಮೈದಾನದ ಹೊರಗಿಯೂ ಡೆಕ್ಸ್ಟರ್ ಉತ್ತಮ ಸ್ವಭಾವ, ಉತ್ತಮ ಗುಣದ ವ್ಯಕ್ತಿಯಾಗಿದ್ದರು. ಡೆಕ್ಸ್ಟರ್ ಜನಿಸಿದ್ದು ಇಟಲಿಯ ಮಿಲನ್‌ನಲ್ಲಿ 1935ರಲ್ಲಿ ಮೇ 15ರಂದು. 1958ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೆಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಟೆಡ್ ಅವರು 1956 ರಿಂದ 1968ರ ವರೆಗೆ ಆಡಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 21000ಕ್ಕೂ ಹೆಚ್ಚು ರನ್, 419 ವಿಕೆಟ್ ದಾಖಲೆ ಹೊಂದಿದ್ದಾರೆ. 1965ರಲ್ಲಿ ಒಮ್ಮೆ ಅಪಘಾತದಲ್ಲಿ ಟೆಡ್ ಕಾಲು ಮುರಿತಕ್ಕೊಳಗಾಗಿ ಸಮಸ್ಯೆ ಅನುಭವಿಸಿದ್ದರು. 

ಗಾಯದಿಂದ ಚೇತರಿಸಿಕೊಂಡು 1968ರಲ್ಲಿ ಮತ್ತೆ ಟೆಡ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಗಾಯ ಗುಣವಾದ ಬಳಿಕ ಆ್ಯಷಸ್‌ನಲ್ಲಿ ಡೆಕ್ಸ್ಟರ್ ಆಡಿದ್ದರು. ಆ ಬಳಿಕ ಸಂಡೆ ಲೀಗ್‌ ಗೇಮ್ಸ್‌ಗಳಲ್ಲಿ ಟೆಡ್ 1971 ರಿಂದ 1972ರ ವರೆಗೂ ಆಡಿದ್ದರು. 62 ಟೆಸ್ಟ್ ಪಂದ್ಯಗಳಲ್ಲಿ ಟೆಡ್ 47.89 ಸರಾಸರಿ ಹೊಂದಿದ್ದಾರೆ. 9 ಶತಕ, 1 ಅರ್ಧ ಶತಕ, 27 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

(Kannada Copy of Mykhel Kannada)