ಗೆದ್ದಿದ್ದ ಕಂಚಿನ ಪದಕ ಕಳೆದುಕೊಂಡ ಡಿಸ್ಕಸ್ ಥ್ರೋವರ್ ವಿನೋದ್ ಕುಮಾರ್!

30-08-21 05:00 pm       Mykhel: Sadashiva   ಕ್ರೀಡೆ

ಟೋಕಿಯೋ ಪ್ಯಾರಾಲಂಪಿಕ್ಸ್‌ ಪುರುಷರ ಡಿಸ್ಕಸ್ ಥ್ರೋ ಎಫ್‌-52 ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಗೆದ್ದಿರುವ ಕಂಚಿನ ಪದಕವನ್ನು ಮತ್ತೆ ಕಳೆದುಕೊಂಡಿದ್ದಾರೆ.

ಟೋಕಿಯೋ: ಟೋಕಿಯೋ ಪ್ಯಾರಾಲಂಪಿಕ್ಸ್‌ ಪುರುಷರ ಡಿಸ್ಕಸ್ ಥ್ರೋ ಎಫ್‌-52 ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಗೆದ್ದಿರುವ ಕಂಚಿನ ಪದಕವನ್ನು ಮತ್ತೆ ಕಳೆದುಕೊಂಡಿದ್ದಾರೆ. ಅಂಗ ವೈಕಲ್ಯ ವಿಭಾಗದಲ್ಲಿ ಸ್ಪರ್ಧಿಸಲು ಅವರು ಅನರ್ಹರೆಂದು ಘೋಷಿಸಲಾಗಿರುವುದರಿಂದ ವಿನೋದ್ ಜಯಿಸಿದ್ದ ಕಂಚಿನ ಪದಕ ಕೈ ತಪ್ಪಿದೆ. ಪ್ಯಾರಾಲಂಪಿಕ್ಸ್ ತಾಂತ್ರಿಕ ಪ್ರತಿನಿಧಿಗಳು ಪರೀಕ್ಷಿಸಿದ ಬಳಿಕ ಕುಮಾರ್ ಅವರನ್ನು ಅನರ್ಹ ಗೊಳಿಸಿದ್ದಾರೆ 

41ರ ಹರೆಯದ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ (ಬಿಎಸ್‌ಎಫ್‌) ಸದಸ್ಯರಾಗಿರುವ ವಿನೋದ್ ಕುಮಾರ್ ಅವರು 1971ರ ಇಂಡೋ-ಪಾಕ್‌ ಕದನದ ವೇಳೆ ಗಾಯಗೊಂಡಿದ್ದ ಸೈನಿಕನ ಮಗ. ಟೋಕಿಯೋ ಪ್ಯಾರಾಲಂಪಿಕ್ಸ್‌ ಡಿಸ್ಕಸ್ ಥ್ರೋನಲ್ಲಿ ವಿನೋದ್ 19.91 ಮೀಟರ್ ದೂರದೊಂದಿಗೆ ಕಂಚಿನ ಪದಕ ಗೆದ್ದಿದ್ದರು.

ಭಾನುವಾರ (ಆಗಸ್ಟ್ 29) ನಡೆದ ಪುರುಷರ ಎಫ್‌-52 ವಿಭಾಗದ ಡಿಸ್ಕಸ್ ಥ್ರೋನಲ್ಲಿ ಬಂಗಾರದ ಪದಕ ಪೋಲ್ಯಾಂಡ್‌ನ ಪಯೋಟರ್ ಕೊಸೆವಿಚ್ (20.02 ಮೀಟರ್) ಪಾಲಾಗಿತ್ತು. ಬೆಳ್ಳಿ ಪದಕ ಕ್ರೊವೇಷಿಯಾದ ವೆಲಿಮಿರ್ ಸ್ಯಾಂಡರ್ (19.98 ಮೀಟರ್) ಜಯಿಸಿದ್ದರು.