ಓವಲ್ ಟೆಸ್ಟ್: ಪಂದ್ಯದ ವೇಳೆ ಕೊಹ್ಲಿಗೆ ಬೂಮ್ರಾ ನೀಡಿದ ಈ ಉಪಾಯ 2 ಪ್ರಮುಖ ವಿಕೆಟ್ ಬೀಳಿಸಿದವು!

07-09-21 02:38 pm       MyKhel Kannada   ಕ್ರೀಡೆ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿಯಾಗಿ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ.

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿಯಾಗಿ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ. ಅದರಲ್ಲಿಯೂ ಇತ್ತೀಚಿಗಷ್ಟೆ ಮುಗಿದಿರುವ ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪಂದ್ಯ ನಡೆಯುವಾಗ ಸಾಕಷ್ಟು ಕುತೂಹಲ ಮತ್ತು ಚರ್ಚೆಗಳಿಗೆ ಕಾರಣವಾಗಿತ್ತು, ಇದೀಗ ಪಂದ್ಯ ಮುಗಿದ ನಂತರವೂ ಕ್ರಿಕೆಟ್ ಜಗತ್ತಿನಲ್ಲಿ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಕಷ್ಟದ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಯಾವ ರೀತಿ ಜಯವನ್ನು ಸಾಧಿಸಿತು ಎಂಬುದರ ಕುರಿತು ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ.

ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ವಿರಾಟ್ ಕೊಹ್ಲಿ ಪಡೆ ಸೋಲಿಸುವುದು ತೀರಾ ಕಷ್ಟದ ಕೆಲಸ, 50 ವರ್ಷಗಳಿಂದ ಓವೆಲ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸದ ಟೀಮ್ ಇಂಡಿಯಾ ಈ ಬಾರಿಯೂ ಸಹ ಸೋಲುವುದು ಖಚಿತ ಎಂಬ ಟೀಕೆಗಳು ಪಂದ್ಯ ಆರಂಭವಾಗುವ ಮುನ್ನ ಸಾಕಷ್ಟು ಕೇಳಿ ಬಂದಿದ್ದವು. ಆದರೆ ಈ ಟೀಕೆಗಳಿಗೆಲ್ಲ ಸರಿಯಾದ ಉತ್ತರ ನೀಡಿರುವ ಕೊಹ್ಲಿ ಪಡೆ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸುವುದರ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿದೆ.



ಹೀಗೆ ಓವಲ್ ಕ್ರೀಡಾಂಗಣದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ ನಂತರ ಪಂದ್ಯದ ಕುರಿತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಎಲ್ಲಾ ಆಟಗಾರರ ಹೆಸರನ್ನು ಉಲ್ಲೇಖಿಸಿ ಶ್ಲಾಘಿಸಿದ ವಿರಾಟ್ ಕೊಹ್ಲಿ ಗೆಲುವಿಗೆ ಎಲ್ಲಾ ಆಟಗಾರರು ನೀಡಿದ ಅತ್ಯುತ್ತಮ ಪ್ರದರ್ಶನವೇ ಕಾರಣ ಎಂದು ತಮ್ಮ ತಂಡದ ಆಟಗಾರರ ಪ್ರದರ್ಶನವನ್ನು ಕೊಂಡಾಡಿದರು. ಹೀಗೆ ಓವಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಬುಮ್ರಾ ನೀಡಿದ ಒಂದು ವಿಶೇಷ ಉಪಾಯದ ಕುರಿತು ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಓವಲ್ ಟೆಸ್ಟ್ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ತನಗೆ ನೀಡಿದ ಅಮೂಲ್ಯವಾದ ಉಪಾಯದ ಕುರಿತು ಕೊಹ್ಲಿ ಈ ಕೆಳಕಂಡಂತೆ ಮಾತನಾಡಿದ್ದಾರೆ.

ಚೆಂಡು ಉಲ್ಟಾ ತಿರುಗಲಾರಂಭಿಸಿದ ಕೂಡಲೇ ಬೌಲಿಂಗ್ ಕೇಳಿದ್ದ ಬುಮ್ರಾ! ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೆಂಡು ಉಲ್ಟಾ ತಿರುಗಲು ಆರಂಭಿಸಿದ ಕೂಡಲೇ ವಿರಾಟ್ ಕೊಹ್ಲಿ ಬಳಿ ಬಂದ ಜಸ್ಪ್ರೀತ್ ಬುಮ್ರಾ ತನಗೆ ಬೌಲಿಂಗ್ ಮಾಡಲು ಅವಕಾಶ ನೀಡುವಂತೆ ಮನವಿಯನ್ನು ಮಾಡಿದ್ದರು. ಜಸ್ಪ್ರೀತ್ ಬುಮ್ರಾ ಮನವಿಗೆ ಸ್ಪಂದಿಸಿದ ವಿರಾಟ್ ಕೊಹ್ಲಿ ಕೂಡಲೇ ಆತನ ಕೈಗೆ ಚೆಂಡನ್ನು ಎಸೆದರು. ಹೀಗೆ ಕೊಹ್ಲಿ ಬಳಿ ಮನವಿ ಮಾಡಿ ಬೌಲಿಂಗ್ ಅವಕಾಶವನ್ನು ಪಡೆದ ಜಸ್ಪ್ರೀತ್ ಬುಮ್ರಾ ಓಲ್ಲಿ ಪೋಪ್ ಮತ್ತು ಜಾನಿ ಬೈರ್‌ಸ್ಟೋ ಇಬ್ಬರ ವಿಕೆಟ್ ಪಡೆಯುವುದರ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ಸನಿಹಕ್ಕೆ ಮತ್ತಷ್ಟು ಎಳೆದೊಯ್ದರು. ಹೀಗೆ ಚೆಂಡು ಉಲ್ಟಾ ತಿರುಗಲಾರಂಭಿಸಿದ ಕೂಡಲೇ ಜಸ್ಪ್ರೀತ್ ಬುಮ್ರಾ ತನಗೆ ಬೌಲಿಂಗ್ ನೀಡುವಂತೆ ವಿರಾಟ್ ಕೊಹ್ಲಿಗೆ ಉಪಾಯವನ್ನು ನೀಡಿ 2 ಪ್ರಮುಖ ವಿಕೆಟ್ ಉರುಳುವಂತೆ ಮಾಡಿದರು.



ಶಾರ್ದೂಲ್ ಠಾಕೂರ್ ಮತ್ತು ರೋಹಿತ್ ಶರ್ಮಾರನ್ನು ಕೊಂಡಾಡಿದ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ರನ್‌ಗಳ ಆಕರ್ಷಕ ಶತಕವನ್ನು ಸಿಡಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಮತ್ತು ಮೊದಲನೇ ಇನ್ನಿಂಗ್ಸ್‌ನಲ್ಲಿ 57 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 60 ರನ್ ಬಾರಿಸಿದ ಶಾರ್ದೂಲ್ ಠಾಕೂರ್ ಪಂದ್ಯದಲ್ಲಿ ಒಟ್ಟು 3 ವಿಕೆಟ್‍ಗಳನ್ನೂ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಇಬ್ಬರ ಪ್ರದರ್ಶನವನ್ನು ಮನಸಾರೆ ಮೆಚ್ಚಿಕೊಂಡ ವಿರಾಟ್ ಕೊಹ್ಲಿ ಪಂದ್ಯ ಮುಗಿದ ನಂತರ ಇಬ್ಬರ ಆಟದ ಕುರಿತು ಹೊಗಳಿಕೆಯ ಮಾತುಗಳನ್ನಾಡಿದರು.

ಓವಲ್ ಪಂದ್ಯದ ಗೆಲುವಿನ ಮೂಲಕ ಇತಿಹಾಸ ಬರೆದ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ವಿರಾಟ್ ಕೊಹ್ಲಿ ಪಡೆ ಬರೋಬ್ಬರಿ 50 ವರ್ಷಗಳ ನಂತರ ಓವಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಇತಿಹಾಸವನ್ನು ನಿರ್ಮಿಸಿತು. ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ನೆಲದಲ್ಲಿ ಗೆಲ್ಲಿಸುವುದರ ಮೂಲಕ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಏಷ್ಯಾ ನಾಯಕ ಎಂಬ ದಾಖಲೆ ನಿರ್ಮಿಸಿದರು.

India vs England, Jasprit Bumrah told Virat Kohli to give him the ball in the middle of the match.