ಯುಎಸ್ ಓಪನ್ ಬಳಿಕ ಬರೋಬ್ಬರಿ 127 ರ್‍ಯಾಂಕ್‌ ಜಿಗಿದ ಎಮ್ಮಾ ರಡುಕ್ಯನು

14-09-21 11:16 am       Mykhel: Sadashiva   ಕ್ರೀಡೆ

ಬ್ರಿಟಿಷ್ ಟೀನೇಜ್ ಟೆನಿಸ್ ಆಟಗಾರ್ತಿ ಎಮ್ಮಾ ರಡುಕ್ಯನು ಮಹಿಳಾ ವಿಶ್ವ ಶ್ರೇಯಾಂಕದಲ್ಲಿ ಬರೋಬ್ಬರಿ 127 ಸ್ಥಾನ ಜಿಗಿತ ಕಂಡಿದ್ದಾರೆ.

ಪ್ಯಾರಿಸ್: ಬ್ರಿಟಿಷ್ ಟೀನೇಜ್ ಟೆನಿಸ್ ಆಟಗಾರ್ತಿ ಎಮ್ಮಾ ರಡುಕ್ಯನು ಮಹಿಳಾ ವಿಶ್ವ ಶ್ರೇಯಾಂಕದಲ್ಲಿ ಬರೋಬ್ಬರಿ 127 ಸ್ಥಾನ ಜಿಗಿತ ಕಂಡಿದ್ದಾರೆ. ಸೆಪ್ಟೆಂಬರ್‌ 13ರ ಸೋಮವಾರ ಪ್ರಕಟಿತ ವಿಶ್ವ ರ್‍ಯಾಂಕಿಂಗ್‌ನ ಮಹಿಳಾ ವಿಭಾಗದಲ್ಲಿ ಎಮ್ಮಾ 23ನೇ ಶ್ರೇಯಾಂಕದಲ್ಲಿದ್ದರು.

ಇತ್ತೀಚೆಗಷ್ಟೇ ಮುಕ್ತಾಯಗೊಂಡಿರುವ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಎಮ್ಮಾ ರಡುಕ್ಯನು ಅದ್ಭುತ ಗೆಲುವು ದಾಖಲಿಸಿದ್ದರು. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 18ರ ಹರೆಯದ ಎಮ್ಮಾ, 19ರ ಹರೆಯದ ಕೆನಡಾ ಆಟಗಾರ್ತಿ ಲೇಲಾ ಫೆರ್ನಾಂಡಿಸ್ ಅವರನ್ನು 6-4, 6-3 ಅಂತರದಿಂದ ಸೋಲಿಸಿ ಅಚ್ಚರಿ ರೀತಿಯಲ್ಲಿ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದ್ದರು.ಯುಎಸ್ ಓಪನ್‌ನಲ್ಲಿ ರಡುಕ್ಯನು ಅದ್ಭುತ ವಿಜಯ ಅವರನ್ನು ವಿಶ್ವ ಶ್ರೇಯಾಂಕದಲ್ಲಿ ಬಲು ಎತ್ತರಕ್ಕೆ ಏರಿಸಿದೆ. ಫೈನಲ್‌ಗೆ ಪ್ರವೇಶಿಸಿದ್ದ ಲೇಲಾ ಫೆರ್ನಾಂಡಿಸ್ ಕೂಡ ವಿಶ್ವ ಶ್ರೇಯಾಂಕದಲ್ಲಿ 45 ಸ್ಥಾನ ಜಿಗಿತ ಕಂಡಿದ್ದು ಸದ್ಯ 28ನೇ ಶ್ರೇಯಾಂಕದಲ್ಲಿದ್ದಾರೆ.

ವಿಶ್ವ ಶ್ರೇಯಾಂಕದಲ್ಲಿನ ಮಾಜಿ ನಂ.1 ಆಟಗಾರ್ತಿ ನವೋಮಿ ಒಸಾಕಾ ಅವರನ್ನೂ ಫೆರ್ನಾಂಡಿಸ್ ಅವರು ಫೈನಲ್‌ ಹಾದಿಯಲ್ಲಿ ಸೋಲಿಸಿದ್ದರು. ಒಸಾಕಾ ಕೊಂಚ ಕಾಲ ಟೆನಿಸ್‌ನಿಂದ ಕೊಂಚ ಕಾಲ ಬಿಡುವು ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಒಸಾಕಾ ಈಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮಹಿಳಾ ಟೆನಿಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 20ರೊಳಗೆ ಸ್ಥಾನ ಪಡೆದವರು

1. ಆಶ್ಲೇ ಬಾರ್ಟಿ (ಆಸ್ಟ್ರೇಲಿಯಾ) 10075 ಪಾಯಿಂಟ್ಸ್

2. ಆರೀನಾ ಸಬಲೆಂಕ (ಬೆಲಾರಸ್) 7720 ಪಾಯಿಂಟ್ಸ್

3. ಕರೋಲಿನಾ ಪ್ಲಿಸ್ಕೋವಾ (ಝೆಕ್) 5315 (+1) ಪಾಯಿಂಟ್ಸ್

4. ಎಲಿನಾ ಸ್ವಿಟೋಲಿನಾ (ಉಕ್ರೇನ್) 4860 (+1) ಪಾಯಿಂಟ್ಸ್

5. ನವೋಮಿ ಒಸಾಕಾ (ಜಪಾನ್) 4796 (-2) ಪಾಯಿಂಟ್ಸ್

6. ಸೋಫಿಯಾ ಕೆನಿನ್ (ಯುಎಸ್ಎ) 4692 ಪಾಯಿಂಟ್ಸ್

7. ಬಾರ್ಬೊರಾ ಕ್ರೆಜಿಕೋವಾ (ಝೆಕ್) 4668 (+2) ಪಾಯಿಂಟ್ಸ್

8. ಇಗಾ ಸ್ವಿಟೆಕ್ (ಪೋಲ್ಯಾಂಡ್) 4571 ಪಾಯಿಂಟ್ಸ್

9. ಗಾರ್ಬೈನ್ ಮುಗುರುಜಾ (ಸ್ಪೇನ್) 4380 (+1) ಪಾಯಿಂಟ್ಸ್

10. ಪೆಟ್ರಾ ಕ್ವಿಟೋವಾ (ಝೆಕ್) 4060 (+1) ಪಾಯಿಂಟ್ಸ್

11. ಸಿಮೋನಾ ಹಲೆಪ್ (ರೋಮ್) 4051 (+2) ಪಾಯಿಂಟ್ಸ್

12. ಬೆಲಿಂಡಾ ಬೆನ್ಸಿಕ್ (ಸ್ವಿಝರ್ಲ್ಯಾಂಡ್) 3820 ಪಾಯಿಂಟ್ಸ್

13. ಮರಿಯಾ ಸಕ್ಕರಿ (ಗ್ರೀಕ್) 3750 (+5) ಪಾಯಿಂಟ್ಸ್

14. ಅನಸ್ತಾಸಿಯಾ ಪಾವ್ಲ್ಯುಚೆಂಕೋವಾ (ರಷ್ಯಾ) 3590 (+1) ಪಾಯಿಂಟ್ಸ್

15. ಏಂಜೆಲಿಕ್ ಕೆರ್ಬರ್ (ಜರ್ಮನಿ) 3245 (+2) ಪಾಯಿಂಟ್ಸ್

16. ಎಲಿಸ್ ಮೆರ್ಟೆನ್ಸ್ (ಬಲ್ಗೇರಿಯನ್) 3140 ಪಾಯಿಂಟ್ಸ್

17. ಎಲೆನಾ ರೈಬಕಿನಾ (ಕಝಕ್) 3068 (+3) ಪಾಯಿಂಟ್ಸ್

18. ಆನ್ಸ್ ಜಬೇರ್ (ಟ್ಯುನೀಷಿಯಾ) 2975 (+3) ಪಾಯಿಂಟ್ಸ್

19. ಕೋರಿ ಗಾಫ್ (ಯುಎಸ್ಎ) 2815 (+4) ಪಾಯಿಂಟ್ಸ್

20. ಬಿಯಾಂಕಾ ಆಂಡ್ರೀಸ್ಕು (ಕೆನಡಾ) 2777 (-13) ಪಾಯಿಂಟ್ಸ್