ಕಡೆಗೂ ಬ್ಯಾಟ್ ಕೆಳಗಿಟ್ಟ ಎಬಿ ಡಿ ವಿಲಿಯರ್ಸ್ ! 360 ಡಿಗ್ರಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಹೊಡೆಬಡಿಯ ದಾಂಡಿಗ !

19-11-21 09:46 pm       H K News   ಕ್ರೀಡೆ

ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಕಂಡರಿಯದ ರೀತಿ, 360 ಡಿಗ್ರಿಯೂ ಬ್ಯಾಟ್ ತಿರುಗಿಸಿ ಮೈದಾನದ ಸುತ್ತಗಲಕ್ಕೂ ಚೆಂಡನ್ನು ಅಟ್ಟುತ್ತಿದ್ದ ಹೊಡೆಬಡಿಯ ದಾಂಡಿಗನಾಗಿ ಕೈಚಳಕ ತೋರುತ್ತಿದ್ದಾತ ಬ್ಯಾಟ್ ಕೆಳಗಿರಿಸಿದ್ದಾನೆ.

ನವದೆಹಲಿ, ನ.19: ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಕಂಡರಿಯದ ರೀತಿ, 360 ಡಿಗ್ರಿಯೂ ಬ್ಯಾಟ್ ತಿರುಗಿಸಿ ಮೈದಾನದ ಸುತ್ತಗಲಕ್ಕೂ ಚೆಂಡನ್ನು ಅಟ್ಟುತ್ತಿದ್ದ ಹೊಡೆಬಡಿಯ ದಾಂಡಿಗನಾಗಿ ಕೈಚಳಕ ತೋರುತ್ತಿದ್ದಾತ ಬ್ಯಾಟ್ ಕೆಳಗಿರಿಸಿದ್ದಾನೆ. ಹೌದು.. ಸೌತ್ ಆಫ್ರಿಕಾ ತಂಡವನ್ನು ಒಂದು ಕ್ಷಣ ತನ್ನತ್ತ  ಸೆಳೆಯುವಂತೆ ಮಾಡಿದ್ದ ದಾಂಡಿಗ ಎಬಿ ಡಿ ವಿಲಿಯರ್ಸ್ ಎಲ್ಲ ಪ್ರಕಾರದ ಕ್ರಿಕೆಟ್ ಆಟಕ್ಕೂ ವಿದಾಯ ಹೇಳಿದ್ದಾರೆ. 

17 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿಲಿಯರ್ಸ್ ಅಂತ್ಯ ಘೋಷಿಸಿದ್ದಾರೆ. 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ವಿದಾಯ ಹೇಳಿದ್ದ ಬ್ಯಾಟಿಂಗ್ ಮಾಂತ್ರಿಕ ಆಬಳಿಕ ಐಪಿಎಸ್ ಸೀಸನಲ್ಲಿ ಆರ್ ಸಿಬಿ ಬೆಂಗಳೂರು ತಂಡದಲ್ಲಿ ಆಟ ಮುಂದುವರಿಸಿದ್ದರು. ಇದೀಗ ತನ್ನ 37ರ ಇಳಿ ಹರೆಯದಲ್ಲಿ ಯಾರೂ ಊಹಿಸದ ರೀತಿ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 17 ವರ್ಷಗಳ ಆಟದಲ್ಲಿ 114 ಟೆಸ್ಟ್, 228 ಏಕದಿನ ಮತ್ತು 78 ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದರು. 

ಟ್ವಿಟರ್ ನಲ್ಲಿ ವಿದಾಯದ ಬಗ್ಗೆ ಹೇಳಿಕೊಂಡ ಎಬಿ ಡಿ ವಿಲಿಯರ್ಸ್, ನನ್ನ ಮಟ್ಟಿಗೆ ಕ್ರಿಕೆಟ್ ಜೀವನ ಅತ್ಯಂತ ರೋಮಾಂಚಕ ಕ್ಷಣಗಳಾಗಿದ್ದವು. ಆದರೆ ನನ್ನ ಆಟವನ್ನು ಇಲ್ಲಿಗೆ ಮುಗಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ನನ್ನ ಹಿರಿಯ ಆಟಗಾರರ ಜೊತೆಗೆ ಬಹಳಷ್ಟು ಆಟವಾಡಿದ್ದು ತುಂಬಾನೇ ಸಂತಸದ ಕ್ಷಣಗಳನ್ನು ಕಳೆದಿದ್ದೇನೆ. ಈಗ ನನಗೆ 37 ಆಗಿದೆ, ಇನ್ನೂ ಹೆಚ್ಚು ಕಾಲ ಅರಳುತ್ತಾ ಇರಲು ಸಾಧ್ಯವಿಲ್ಲ ಎನಿಸುತ್ತಿದೆ. ಮುಂದಿನ ಜೀವನದಲ್ಲಿ ಹೊಸ ಚಾಪ್ಟರ್ ಆರಂಭಿಸಲಿದ್ದೇನೆ ಎಂದಿದ್ದಾರೆ. 

ಕ್ರಿಕೆಟ್ ನನಗೆ ಎಲ್ಲವನ್ನೂ ಕೊಟ್ಟಿದೆ.‌ ಕ್ರಿಕೆಟಿನಲ್ಲಿ ಊಹಿಸಲಾಗದ ಅನುಭವ ಮತ್ತು ಅವಕಾಶಗಳನ್ನು ಪಡೆದಿದ್ದೇನೆ.‌ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದರೆ ರಿಯಾಲಿಟಿಯನ್ನು ಒಪ್ಪಿಕೊಳ್ಳಲೇಬೇಕು. ಕೆಲವರಿಗೆ ನನ್ನ ನಿರ್ಧಾರ ಅನಿರೀಕ್ಷಿತ ಎನಿಸಬಹುದು. ಇವತ್ತೇ ಯಾಕೆ ವಿದಾಯ ಘೋಷಿಸಿದ್ದು ಎನ್ನಬಹುದು. ಆದರೆ ನನ್ನ ಸಮಯ ಬಂದಿದೆ ಎಂದು ನನಗನಿಸುತ್ತಿದೆ ಎಂದು ಡಿ ವಿಲಿಯರ್ಸ್ ಮಾರ್ಮಿಕ ಮಾತುಗಳನ್ನು ಹೇಳಿಕೊಂಡಿದ್ದಾರೆ. 

ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿದ್ದರೂ, 2011 ರಲ್ಲಿ ಐಪಿಎಲ್ ಸೀಸನ್ ಬಂದು ಆರ್ ಸಿಬಿ ತಂಡದಲ್ಲಿ ಹೊಡೆಬಡಿಯ ದಾಂಡಿಗನಾಗಿ ಗಮನ ಸೆಳೆದಿದ್ದರು. ಹನ್ನೊಂದು ಸೀಸನಲ್ಲಿ ಆರ್ ಸಿಬಿ ಪರವಾಗಿ 156 ಪಂದ್ಯಗಳನ್ನು ಆಡಿದ್ದು 4491 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಎರಡನೇ ಮತ್ತು ಮೂರನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 2015 ರಲ್ಲಿ ಮುಂಬೈ ವಿರುದ್ಧ 133 ನಾಟೌಟ್, 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 129 ಅಜೇಯ ಆಟವಾಡಿದ್ದು ಐಪಿಎಲ್ ಹಿಸ್ಟರಿಯಲ್ಲಿ ದಾಖಲೆಯಾಗಿದೆ. 

2004 ರಲ್ಲಿ ಕ್ರಿಕೆಟ್ ಜೀವನ‌ ಆರಂಭಿಸಿದ್ದ ಅದ್ಭುತ ಆಲ್ ರೌಂಡರ್ ಆಗಿ ಮಿಂಚು ಹರಿಸಿದ್ದರು. ಏಕದಿನ ಮತ್ತು ಟಿ ಟ್ವೆಂಟಿ ಪಂದ್ಯಗಳಲ್ಲಿ 360 ಡಿಗ್ರಿ ಕೋನದಲ್ಲಿ ಬ್ಯಾಟ್ ಬೀಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದರು. 228 ಏಕದಿನ ಆಡಿದ್ದ ವಿಲಿಯರ್ಸ್, 9557 ರನ್ ಗಳಿಸಿದ್ದರು. 25 ಸೆಂಚುರಿ ಬಾರಿಸಿದ್ದು 176 ಅವರ ಅತ್ಯಧಿಕ ಮತ್ತು ಸ್ಟ್ರೈಕ್ ರೇಟ್ ನೂರಕ್ಕೂ ಹೆಚ್ಚಿದ ವೇಗದಲ್ಲಿ ರನ್ ಪೂರೈಸಿದ್ದು ದಾಖಲೆಯಾಗಿದೆ.

South African legend and former captain AB De Villiers on Friday announced retirement from all forms of cricket, bringing the curtains down on an illustrious career. The 37-year-old made the announcement on Twitter, ending a 17-year career, which saw him play in 114 Tests, 228 ODIs and 78 T20Is for the Proteas.