ಬ್ರೇಕಿಂಗ್ ನ್ಯೂಸ್
04-12-21 10:48 pm HK Desk news ಕ್ರೀಡೆ
ಮುಂಬೈ, ಡಿ.4: ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ಇತಿಹಾಸ ದಾಖಲಾಗಿದೆ. ನ್ಯೂಜಿಲಂಡಿನ ಅಜಾಜ್ ಪಟೇಲ್ ಒಂದು ಇನ್ನಿಂಗ್ಸಿನಲ್ಲಿ ಎಲ್ಲ ಹತ್ತು ವಿಕೆಟ್ ಗಳನ್ನು ಕಿತ್ತು ಹೊಸ ದಾಖಲೆ ಬರೆದಿದ್ದಾರೆ. ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ಭಾರತ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಾಟದಲ್ಲಿ ಅಜಾಜ್ ಪಟೇಲ್ ಭಾರತದ ಎಲ್ಲ ಹತ್ತು ವಿಕೆಟ್ ಗಳನ್ನು ಕಿತ್ತಿದ್ದು, ಈ ಸಾಧನೆ ಮಾಡಿದ ಜಗತ್ತಿನ ಮೂರನೇ ಬೌಲರ್ ಎಂಬ ಗರಿಮೆಗೆ ಪಾತ್ರವಾಗಿದ್ದಾರೆ.
ಅಜಾಜ್ ಪಟೇಲ್ 119 ರನ್ ಕೊಟ್ಟು 10 ವಿಕೆಟ್ ಪಡೆದಿದ್ದರೆ, ಈ ಹಿಂದೆ ಭಾರತದ ಅನಿಲ್ ಕುಂಬ್ಳೆ 1999ರಲ್ಲಿ ಮತ್ತು ಇಂಗ್ಲೆಂಡಿನ ಜಿಮ್ ಲೇಕರ್ 1956ರಲ್ಲಿ ಈ ಸಾಧನೆ ಮಾಡಿ ದಾಖಲೆ ಬರೆದಿದ್ದರು. ಜಿಮ್ ಲೇಕರ್, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 53 ರನ್ನಿಗೆ 10 ವಿಕೆಟ್ ಪಡೆದಿದ್ದರೆ, ಅನಿಲ್ ಕುಂಬ್ಳೆ ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ 74 ರನ್ನಿಗೆ ಹತ್ತು ವಿಕೆಟ್ ಪಡೆದು ದಾಖಲೆ ಸೇರಿದ್ದರು. ಜಿಮ್ ಲೇಕರ್ ಹತ್ತು ವಿಕೆಟ್ ಸಾಧನೆ ಮಾಡಲು 51.2 ಓವರ್ ತೆಗೆದುಕೊಂಡಿದ್ದರೆ, ಅನಿಲ್ ಕುಂಬ್ಳೆ ಕೇವಲ 26.3 ಓವರ್ ಬೌಲಿಂಗ್ ಮಾಡಿದ್ದರು. ಅಜಾಜ್ ಪಟೇಲ್ 47.5 ಓವರ್ ಗಳನ್ನು ಹತ್ತು ವಿಕೆಟ್ ಪಡೆಯಲು ತೆಗೆದುಕೊಂಡಿದ್ದಾರೆ.
ಭಾರತ ಮೂಲದ ಅಜಾಜ್ ಪಟೇಲ್ ಮುಂಬೈನಲ್ಲಿ ಹುಟ್ಟಿದ್ದು, ಅವರಿಗೆ ಎಂಟು ವರ್ಷ ಆಗಿದ್ದಾಗ ಹೆತ್ತವರು ನ್ಯೂಜಿಲಂಡಿನ ಆಕ್ಲೆಂಡ್ ನಗರಕ್ಕೆ ವಲಸೆ ಹೋಗಿದ್ದರು. ರಾಷ್ಟ್ರೀಯ ತಂಡಕ್ಕೆ ನೇಮಕ ಆಗೋದಕ್ಕೂ ಮುನ್ನ ದೇಸೀ ಕ್ರಿಕೆಟಿನಲ್ಲಿ ಆಕ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದರು. 33 ವರ್ಷದ ಅಜಾಜ್ ಪಟೇಲ್ ಇದೀಗ ತಾನು ಹುಟ್ಟಿ ಬೆಳೆದ ಮುಂಬೈನಲ್ಲಿ ವಿಶ್ವ ಶ್ರೇಷ್ಠ ಬೌಲಿಂಗ್ ಮೆರೆದಿದ್ದು, ದಾಖಲೆಯ ಪುಟಕ್ಕೆ ಸೇರಿದ್ದಾರೆ.
Shifting base got him into cricket, switching to spin made it all possible for Ajaz. If shifting from India to New Zealand saw him fall in love with cricket, switching to spin from fast bowling paved the way for Ajaz Patel’s entry into the game’s top-flight.
13-12-25 04:00 pm
Bangalore Correspondent
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm