ಅಪ್ರಾಪ್ತ ಯುವತಿ ಗರ್ಭಿಣಿಯಾಗಿಸಿದ ಯುವಕ ಬಂಧನ 

30-09-20 09:36 pm       Mangaluru Correspondent   ಕ್ರೈಂ

ಅಪ್ರಾಪ್ತ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿದ್ದಾರೆ. 

ಪುತ್ತೂರು, ಸೆಪ್ಟಂಬರ್ 30: ಅಪ್ರಾಪ್ತ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ ಯುವಕನನ್ನು ಸುಳ್ಯ ಪೋಲೀಸರು ಬಂಧಿಸಿದ್ದಾರೆ. 

ಹುಬ್ಬಳ್ಳಿ ಮೂಲದ ಮುತ್ತಪ್ಪ ಬಂಧಿತ ಯುವಕ. ಕಳೆದ ಕೆಲ ವರ್ಷಗಳಿಂದ ಸುಳ್ಯದ ಕಲ್ಲುಮುಟ್ಲು ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಮುತ್ತಪ್ಪ ಅಲ್ಲಿಂದ ಕೆಲಸಕ್ಕೆ ಹೋಗುತ್ತಿದ್ದ. ಮುತ್ತಪ್ಪನಿಗೆ ಸ್ಥಳೀಯ 15 ವರ್ಷ ಪ್ರಾಯದ ಯುವತಿಯ ಪರಿಚಯವಾಗಿತ್ತು. ಬಳಿಕ ಪ್ರೀತಿ ಬೆಳೆದು ಇವರಿಬ್ಬರೂ ಜತೆಗೆ ವಾಸಿಸುತ್ತಿದ್ದು ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಗೆ ತಿಳಿದು ಅವರು ಸುಳ್ಯ ಸಿಡಿಪಿಒಗೆ ವಿಷಯ ತಿಳಿಸಿದ್ದಾರೆ.

ಸಿಡಿಪಿಒ ದೂರಿನ ಮೇರೆಗೆ ಪೊಲೀಸರು ಆ ಯುವಕನ್ನು ಬಂಧಿಸಿದ್ದು, ಅಪ್ರಾಪ್ತೆಯ ವಿರುದ್ಧ ಅತ್ಯಾಚಾರ ಕೇಸು ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.