ಬ್ರೇಕಿಂಗ್ ನ್ಯೂಸ್
02-12-22 02:53 pm HK News Desk ಕ್ರೈಂ
ಯಾದಗಿರಿ, ಡಿ.2 : ಮಗು ಅಳುತ್ತಿದೆಯೆಂದು ಒಂಬತ್ತು ತಿಂಗಳ ಹಸುಗೂಸನ್ನು ಪಾಪಿ ತಂದೆಯೊಬ್ಬ ಕುಡಿದ ಅಮಲಿನಲ್ಲಿ ಕತ್ತು ಹಿಸುಕಿ ಕೊಂದು ಹಾಕಿದ ಅಮಾನುಷ ಕೃತ್ಯ ಗುರಮಠಕಲ್ ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ನಡೆದಿದೆ.
9 ತಿಂಗಳ ಮಗು ತನುಶ್ರೀ ಕೊಲೆಯಾದ ಕಂದಮ್ಮ. ಈ ಮಗುವಿನ ತಂದೆ ರಾಮು ಕೊಲೆಗೈದವನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಕುಡಿತದ ಚಟ ಹೊಂದಿದ್ದ ರಾಮು, ಎಂದಿನಂತೆ ಕುಡಿದುಕೊಂಡು ಮನೆಗೆ ಬಂದಿದ್ದ. ಮಗುವನ್ನು ನೋಡಿಕೊಳ್ಳುತ್ತೇನೆ, ನೀನು ಹತ್ತಿ ಬಿಡಿಸಲು ಹೋಗು ಎಂದು ಹೆಂಡತಿಯನ್ನು ಕಳಿಸಿದ್ದ. ಮಲಗಿದ್ದ ಮಗು ಎಚ್ಚರಗೊಂಡು ಜೋರಾಗಿ ಅಳತೊಡಗಿತ್ತು. ಈ ವೇಳೆ, ಮಗುವನ್ನು ಸಂತೈಸಲು ಪ್ರಯತ್ನಿಸಿದ್ದ. ಮಗು ಅಳು ನಿಲ್ಲಿಸದ ಕಾರಣ ಕುಡಿದ ನಶೆಯಲ್ಲಿ ಸಣ್ಣ ಹಗ್ಗವನ್ನ ಕೊರಳಿಗೆ ಬಿಗಿದು ನಿನ್ನ ಅಳು ನಾನೇ ನಿಲ್ಲಿಸುತ್ತೇನೆಂದು ಹೇಳಿ ಉಸಿರು ಕಟ್ಟಿಸಿದ್ದಾನೆ.
ನಂತರ ಮಗು ನಿದ್ದೆ ಮಾಡುತ್ತಿದೆ ಎಂದು ಹೇಳಿ ಪಕ್ಕದ ಮನೆಯ ಅಜ್ಜಿಯ ಕೈಯಲ್ಲಿ ಶವ ಕೊಟ್ಟು, ಜಮೀನಿನತ್ತ ಹೋಗಿದ್ದ. ಮಗು ಮಲಗಿದೆಯಾ? ಎಂದು ಪತ್ನಿ ಕೇಳಿದಾಗ, ತಾನು ಮಾಡಿದ ಕೃತ್ಯದ ಬಗ್ಗೆ ಪತ್ನಿಗೆ ವಿವರಿಸುತ್ತಾ, ಅಜ್ಜಿ ಕೈಗೆ ಕೊಟ್ಟು ಬಂದಿದ್ದಾಗಿ ತಿಳಿಸಿದ್ದಾನೆ.
ಇದರಿಂದ ದಿಗ್ಭ್ರಮೆಗೊಂಡ ಪತ್ನಿ, ಮನೆಗೆ ಓಡಿ ಹೋಗಿ ನೋಡಿದಾಗ ಮಗು ಸತ್ತಿರುವುದು ಗೊತ್ತಾಗಿದೆ. ಹೆಂಡತಿ ನೀಡಿದ ದೂರಿನ ಮೇರೆಗೆ ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last month in Andhra Pradesh, a sinful, cruel father killed a child (Son) for three months. A similar disturbing incident took place in Yadgiri, Karnataka. A father killed his 9-month-old daughter while drunk in Baddepalli village of Yadagiri taluk.He was angry that his daughter was crying while he was drinking alcohol. Later, in anger, he grabbed the string around his daughter's neck and lifted her up.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm