ಬ್ರೇಕಿಂಗ್ ನ್ಯೂಸ್
03-03-23 11:22 am Mangalore Correspondent ಕ್ರೈಂ
ಮಂಗಳೂರು, ಮಾ.3 : ದರೋಡೆ ಉದ್ದೇಶದಿಂದಲೇ ಜುವೆಲ್ಲರಿ ಉದ್ಯೋಗಿಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಶಿಫಾಸ್ ತಪ್ಪೊಪ್ಪಿಕೊಂಡಿದ್ದು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಾಹಿತಿ ನೀಡಿದ್ದು ಕಾಸರಗೋಡು, ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಶಿಫಾಸ್ ನನ್ನು ಸೆರೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋಜಿಕ್ಕೋಡ್ ಜಿಲ್ಲೆಯ ಚೆಮ್ಮಂಚೇರಿ ಪೂಕಾಡ್ ನಿವಾಸಿ ಶಿಫಾಸ್ ಬಂಧಿತ ಆರೋಪಿ. ಈ ಹಿಂದೆ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದ ಶಿಫಾಸ್, ಅಲ್ಲಿ ಬಿಇ ಕೋರ್ಸ್ ಪೂರೈಸದೆ ಎರಡು ವರ್ಷದಲ್ಲಿ ಕಾಲೇಜು ಬಿಟ್ಟು ಹೋಗಿದ್ದ. ಆನಂತರ, 2014ರಿಂದ 2019ರ ವರೆಗೆ ದುಬೈನಲ್ಲಿ ಕೆಲಸ ಮಾಡಿದ್ದ ಶಿಫಾಸ್ ಮತ್ತೆ ಊರಿಗೆ ಬಂದು ಎಸ್ಎನ್ಎನ್ ಗ್ಲೋಬಲ್ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ.
ಮಂಗಳೂರಿನಲ್ಲಿ ಫೆ.3ರಂದು ಜುವೆಲ್ಲರಿ ಉದ್ಯೋಗಿಯನ್ನು ಕೊಲೆಗೈದು ನಾಪತ್ತೆಯಾಗಿದ್ದ ಆರೋಪಿ, ಕೃತ್ಯದ ಬಳಿಕ ತನ್ನ ಊರು ಕೋಜಿಕ್ಕೋಡ್ ಜಿಲ್ಲೆಗೆ ತೆರಳಿ ತಲೆಮರೆಸಿಕೊಂಡಿದ್ದ. ಈ ನಡುವೆ, ಮಂಗಳೂರು ಪೊಲೀಸರು ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿ ಕಾಸರಗೋಡು ಮೂಲಕ ತೆರಳಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಚಲನವಲನದ ಬಗ್ಗೆ ಅಲ್ಲಿನ ಪೊಲೀಸರ ಸಹಾಯದಿಂದ ನಿಗಾ ಇಟ್ಟಿದ್ದರು. ಸಿಸಿಟಿವಿಯಲ್ಲಿ ದೊರೆತ ಚಿತ್ರಗಳನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಿ, ಈತನ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು.
ಗುರುವಾರ ಕೋಜಿಕ್ಕೋಡ್ ನಿಂದ ರೈಲು ಮೂಲಕ ಕಾಸರಗೋಡಿಗೆ ಬಂದಿದ್ದು ಎರಡೆರಡು ಶರ್ಟ್ ಧರಿಸಿದ್ದ. ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಹಿಂದಿನ ರೀತಿಯಲ್ಲೇ ದರೋಡೆ ಉದ್ದೇಶದಿಂದ ಸ್ಕೆಚ್ ಹಾಕುತ್ತಿದ್ದ. ಇದೇ ವೇಳೆ, ಕಾಸರಗೋಡು ಪೊಲೀಸರು ಆರೋಪಿಯನ್ನು ಸಂಶಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಶಿಫಾಸ್ ಕ್ಯಾಲಿಕಟ್ ನಲ್ಲಿ ತಂದೆ, ತಾಯಿ, ಪತ್ನಿ ಮತ್ತು ಒಬ್ಬಳು ಮಗಳ ಜೊತೆ ವಾಸ ಮಾಡುತ್ತಿದ್ದ. ಈತನ ಇಬ್ಬರು ಸೋದರರು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಯನ್ನು ಮಂಗಳೂರಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಕಸ್ಟಡಿಗೆ ಪಡೆಯಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಾಹಿತಿ ನೀಡಿದ್ದಾರೆ.
Mangalore Hampankatta jewellery shop staff murder Accused arrested from kerala, intention was robbery claims Police. The Kasargod police have arrested the prime suspect in the murder case at a jewellery shop in Hampankatta. The accused has been identified as 33-year-old Shifaz, a resident of Kozhikode.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 08:14 pm
Mangalore Correspondent
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
27-07-25 07:13 pm
HK News Desk
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm