Fraud, Mangalore, QR Scan; ಪೆಟ್ರೋಲ್ ಪಂಪ್ ನಲ್ಲಿ ವೈಯಕ್ತಿಕ ಸ್ಕ್ಯಾನರ್ ಬಳಸಿ ಉಂಡ ಮನೆಗೆ ದ್ರೋಹ ; ಬರೋಬ್ಬರಿ 58 ಲಕ್ಷ ಹಣ ಅಕ್ರಮ ವರ್ಗಾವಣೆ, ರಿಲಯನ್ಸ್ ಕಂಪನಿಗೆ ಮೋಸ 

08-01-25 10:57 pm       Mangalore Correspondent   ಕ್ರೈಂ

ಪೆಟ್ರೋಲ್ ಪಂಪ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗಾಗಿ ಸ್ಕ್ಯಾನರ್ ಇಡುವುದು, ಗ್ರಾಹಕರು ತಮ್ಮ ಮೊಬೈಲಿನಲ್ಲಿ ನೇರವಾಗಿ ಹಣ ಪಾವತಿ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ಪೆಟ್ರೋಲ್ ಪಂಪ್ ಸಿಬ್ಬಂದಿಯೊಬ್ಬ ಸಂಸ್ಥೆಯ ಕ್ಯೂಆರ್ ಕೋಡ್ ಬದಲಿಗೆ ತನ್ನದೇ ವೈಯಕ್ತಿಕ ಕ್ಯೂಆರ್ ಕೋಡನ್ನು ಗ್ರಾಹಕರ ಮುಂದಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಜ.8 : ಪೆಟ್ರೋಲ್ ಪಂಪ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗಾಗಿ ಸ್ಕ್ಯಾನರ್ ಇಡುವುದು, ಗ್ರಾಹಕರು ತಮ್ಮ ಮೊಬೈಲಿನಲ್ಲಿ ನೇರವಾಗಿ ಹಣ ಪಾವತಿ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ಪೆಟ್ರೋಲ್ ಪಂಪ್ ಸಿಬ್ಬಂದಿಯೊಬ್ಬ ಸಂಸ್ಥೆಯ ಕ್ಯೂಆರ್ ಕೋಡ್ ಬದಲಿಗೆ ತನ್ನದೇ ವೈಯಕ್ತಿಕ ಕ್ಯೂಆರ್ ಕೋಡನ್ನು ಗ್ರಾಹಕರ ಮುಂದಿಟ್ಟು ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ನಗರದ ಬಂಗ್ರಕೂಳೂರು ನಲ್ಲಿರುವ ರಿಯಲನ್ಸ್ ಔಟ್ ಲೆಟ್ ಮ್ಯಾನೇಜರ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಗ್ರಕೂಳೂರಿನ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್ ನಲ್ಲಿ ಸುಮಾರು 15 ವರ್ಷಗಳಿಂದ ಸೂಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಈ ಕೃತ್ಯ ಎಸಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಮೋಹನದಾಸ್ ಪೆಟ್ರೋಲ್ ಪಂಪ್ ನಲ್ಲಿ ಹಣಕಾಸು ವ್ಯವಹಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ. 2023ರ ಮಾರ್ಚ್ 1ರಿಂದ 2023 ಜುಲೈ 31ರ ವರೆಗೆ ಪೆಟ್ರೋಲ್ 
ಬಂಕ್ನಲ್ಲಿ ಅಧಿಕೃತ ಕ್ಯೂಆರ್ ಕೋಡ್ ಬದಲು, ತನ್ನ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಹಾಕಿದ್ದು ಗ್ರಾಹಕರು ಪೆಟ್ರೋಲ್ ಬಂಕ್ನದ್ದೇ ಎಂದು ನಂಬಿ ಹಣ ಪಾವತಿ ಮಾಡುತ್ತಿದ್ದರು. ಆಮೂಲಕ ಆರೋಪಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಯ ಬ್ಯಾಂಕ್ ಖಾತೆಗೆ ಒಟ್ಟು 58,85,333 ರೂ. ಹಣ ವರ್ಗಾವಣೆಯಾಗಿದ್ದು ಭಾರೀ ಮೋಸ ಎಸಗಿದ್ದಾನೆ. ಅಕ್ರಮವಾಗಿ ಹಣ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ರಿಲಯನ್ಸ್ ಔಟ್ ಲೆಟ್ನ ಮ್ಯಾನೇಜರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Mangalore petrol pump cashier replaces QR code at fuel pump, swindles money of 58 lakhs at Reliance fule pump. Case has been registered at the CEN police station against MohanDas.