ಬ್ರೇಕಿಂಗ್ ನ್ಯೂಸ್
04-07-25 08:56 pm Bangalore Correspondent ಕ್ರೈಂ
ಬೆಂಗಳೂರು, ಜೂ 04 : ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನ ಆತನ ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ.
ಮೃತನನ್ನ ಸಾಫ್ಟ್‌ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಗಂಡ ಭಾಸ್ಕರ್ (41) ಎಂದು ಗುರುತಿಸಲಾಗಿದೆ.
ಪತಿಯ ಮುಖಕ್ಕೆ ಹಲ್ಲೆ ಮಾಡಿ, ಕೊಲೆ ಮಾಡಿದ ನಂತರ ಶವಕ್ಕೆ ಸ್ನಾನ ಮಾಡಿಸಿ ಮಲಗಿಸಿದ್ದಲ್ಲದೆ, ಬಾತ್ರೂಮ್ನಲ್ಲಿ ಜಾರಿ ಬಿದ್ದು ಏಟಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರ ಬಳಿ ಕತೆ ಕಟ್ಟಿದ್ದಾಳೆ.
ಅಸಹಜ ಸಾವು ಪ್ರಕರಣದ ಕಾರಣ ಭಾಸ್ಕರ್ ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಖ ಮತ್ತು ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಭಾಸ್ಕರ್ ಹೆಂಡತಿಯನ್ನ ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾಗ ಸತ್ಯ ಸತ್ಯತೆ ಹೊರಗೆ ಬಿದ್ದಿದೆ.
ಪತಿಯನ್ನು ಕೊಲೆ ಮಾಡಿದ ಬಳಿಕ ಕಥೆ ಕಟ್ಟುವುದಕ್ಕೆಂದೇ ಮೃತದೇಹವನ್ನು ಸ್ನಾನ ಮಾಡಿಸಿ ಮಲಗಿಸಿದ್ದ ವಿಚಾರವೂ ಬಹಿರಂಗವಾಗಿದೆ. ಇದೀಗ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮನೆ ಕೆಲಸದಾಕೆ ಜತೆ ಸಲುಗೆ ;
ಭಾಸ್ಕರ್ ಮನೆ ಕೆಲಸದಾಕೆ ಜತೆ ಸದಾ ಸಲುಗೆಯಿಂದ ಇರುತ್ತಿದ್ದರು. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಗಂಡ ಹೆಂಡತಿ ನಡುವೆ ಜಗಳವು ಆಗಿತ್ತು. ಎರಡು ದಿನಗಳ ಹಿಂದೆ ರಾತ್ರಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಗಲಾಟೆ ವೇಳೆ ಶ್ರುತಿ ಗಂಡನ ಮುಖಕ್ಕೆ ಕೋಪದಿಂದ ಬಲವಾಗಿ ಕೈಗೆ ಸಿಕ್ಕಿದ ವಸ್ತುವಿನಿಂದ ಬಲವಾಗಿ ಹೊಡೆದಿದ್ದಾಳೆ, ಪರಿಣಾಮ ಭಾಸ್ಕರ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ ಭಾಸ್ಕರ್ ಶ್ರುತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಶ್ರುತಿ ಕೋಪಕ್ಕೆ ಕಾರಣವಾಗಿತ್ತು. ಸಂಬಳ ಅಲ್ಲದೇ ಮನೆ ಬಾಡಿಗೆಯಿಂದಲೇ ತಿಂಗಳಿಗೆ 1.15 ಲಕ್ಷ ರೂ. ಆದಾಯ ಬರುತ್ತಿತ್ತು. ಬಂದ ಹಣವನ್ನು ಭಾಸ್ಕರ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಭಾಸ್ಕರ್ ನಿವಾಸಕ್ಕೆ ಬಾರದೇ ಸ್ನೇಹಿತೆಯ ಮನೆಯಲ್ಲೇ ಇರುತ್ತಿದ್ದರು. ಎರಡು ದಿನದ ಹಿಂದೆ ಮನೆಗೆ ಬಂದಾಗ ಪತ್ನಿ ಶ್ರುತಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಗೆ ತಿರುಗಿ ಶ್ರುತಿ ಪತಿಯನ್ನೇ ಹತ್ಯೆ ಮಾಡಿದ್ದಾಳೆ
ಗಂಡ ಮನೆಗೆ ಕುಡಿದು ಬಂದು ಬಾತ್ ರೂಮ್ನಲ್ಲಿ ಜಾರಿ ಬಿದ್ರು. ಹೀಗಾಗಿ ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ, ಆದ್ರೆ ನನ್ನ ಗಂಡ ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರಲ್ಲಿ ನಾಟಕವಾಡಲು ಹೋಗಿ ಜೈಲು ಪಾಲಾಗಿದ್ದಾಳೆ.
A shocking murder has come to light in the Suddguntepalya area of Bengaluru, where a woman allegedly killed her husband over his extramarital affair with their housemaid and attempted to cover up the crime by staging it as a bathroom accident. The deceased has been identified as Bhaskar (41).
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm