ಬ್ರೇಕಿಂಗ್ ನ್ಯೂಸ್
05-07-25 11:04 pm HK News Desk ಕ್ರೈಂ
ಪಾಟ್ನಾ, ಜು.5 : ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಗುಂಡಿನ ಸದ್ದು ಕೇಳಿದೆ. ಪಾಟ್ನಾದ ಬಿಜೆಪಿಯ ಪ್ರಮುಖ ನಾಯಕ ಹಾಗೂ ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಬಿಹಾರದ ಪಾಟ್ನಾದಲ್ಲಿರುವ ಅವರ ನಿವಾಸದ ಹೊರಗೆ ಅಪರಿಚಿತರು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಗೋಪಾಲ್ ಖೇಮ್ಕಾ ಬಿಹಾರದ ಅತ್ಯಂತ ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಂದಾದ ಮಗಧ ಆಸ್ಪತ್ರೆಯ ಮಾಲೀಕ ಮತ್ತು ಬಿಜೆಪಿಯಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡವರು. ಪನಾಚೆ ಹೋಟೆಲ್ ಪಕ್ಕದಲ್ಲಿರುವ 'ಟ್ವಿನ್ ಟವರ್' ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ತಮ್ಮ ನಿವಾಸದ ಸಮೀಪದಲ್ಲೇ ಫ್ಲಾಟ್ ಒಂದನ್ನ ಖರೀದಿ ಮಾಡಿದ್ದರು. ಅದೇ ಫ್ಲಾಟ್ ಗೆ ಹೋಗಲು ಹೊರಟವರು ಕಾರಿನಿಂದ ಇಳಿಯುತ್ತಿದ್ದಂತೆ ಅಡಗಿ ಕುಳಿತ್ತಿದ್ದ ಹಂತಕರು ಗೋಪಾಲ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಒಂದು ಗುಂಡು ಮತ್ತು ಶೆಲ್ ಕೇಸಿಂಗ್ ವಶಪಡಿಸಿಕೊಂಡಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳಿರುವಾಗ ಹತ್ಯೆ
ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಬಿಜೆಪಿ ನಾಯಕನೊಬ್ಬನನ್ನ ಹತ್ಯೆ ಮಾಡಿರುವುದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.
6 ವರ್ಷಗಳ ಹಿಂದೆ ಮಗನ ಹತ್ಯೆ
ವಿಚಿತ್ರವೆಂದರೆ 6 ವರ್ಷಗಳ ಹಿಂದೆ 2018ರಲ್ಲಿ ಗೋಪಾಲ್ ಖೇಮ್ಕಾ ಮಗ ಗುಂಜನ್ ಕೂಡ ಇದೇ ರೀತಿ ಗುಂಡಿನ ದಾಳಿಗೆ ಬಲಿಯಾಗಿದ್ದ. ಪಾಟ್ನಾದ ಹೊರವಲಯದ ವೈಶಾಲಿಯಲ್ಲಿರುವ ಹತ್ತಿ ಕಾರ್ಖಾನೆಯ ಮುಂದೆ ತನ್ನ ಕಾರಿನಿಂದ ಇಳಿಯುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಆತನನ್ನ ಹತ್ಯೆ ಮಾಡಿದ್ದರು. ಇದೀಗ ಅದೇ ರೀತಿಯಲ್ಲಿ ತಂದೆ ಗೋಪಾಲ್ ಕೂಡ ಪ್ರಾಣ ತೆತ್ತಿದ್ದಾರೆ.
Prominent businessman Gopal Khemka was shot dead by an unidentified bike-borne assailant in Patna, Bihar, six years after his son, Gunjan Khemka, was killed in a similar manner.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
30-08-25 06:44 pm
HK News Desk
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm