Bajpe Yedapadavu Crime, Mangalore: ಎಡಪದವು ಬಳಿ ಯುವಕನಿಗೆ ಚೂರಿ ಇರಿತ ; ಬೆಂಗ್ರೆಯ ನಾಲ್ವರಿದ್ದ ತಂಡದ ಕೃತ್ಯ, ಅಡ್ಡಹಾಕಿ ಮರು ದಾಳಿ ಯತ್ನ, ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

24-11-25 08:37 pm       Mangalore Correspondent   ಕ್ರೈಂ

ಒಂದೇ ಬೈಕಿನಲ್ಲಿ ನಾಲ್ವರು ಯುವಕರು ತಲ್ವಾರು ಹಿಡಿದು ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿದ್ದ ಯುವಕನೊಬ್ಬ ನೋಡಿ ವಿಡಿಯೋ ಮಾಡಲೆತ್ನಿಸಿದ್ದು ಇದನ್ನು ಪ್ರಶ್ನಿಸಿ ನಾಲ್ವರಿದ್ದ ತಂಡ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಎಡಪದವು ಬಳಿ ನಡೆದಿದೆ. 

ಮಂಗಳೂರು, ನ.24 : ಒಂದೇ ಬೈಕಿನಲ್ಲಿ ನಾಲ್ವರು ಯುವಕರು ತಲ್ವಾರು ಹಿಡಿದು ತೆರಳುತ್ತಿದ್ದಾಗ ಇನ್ನೊಂದು ಬೈಕಿನಲ್ಲಿದ್ದ ಯುವಕನೊಬ್ಬ ನೋಡಿ ವಿಡಿಯೋ ಮಾಡಲೆತ್ನಿಸಿದ್ದು ಇದನ್ನು ಪ್ರಶ್ನಿಸಿ ನಾಲ್ವರಿದ್ದ ತಂಡ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಎಡಪದವು ಬಳಿ ನಡೆದಿದೆ. 

ಎಡಪದವು ಬಳಿಯಲ್ಲಿ ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಸ್ಥಳೀಯರು ಬಳಿಕ ಅಡ್ಡಹಾಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರಿದ್ದ ಯುವಕರ ತಂಡವು ಮಿಜಾರು ನಿವಾಸಿ ಅಖಿಲೇಶ್ (27) ಎಂಬ ಯುವಕನಿಗೆ ಚೂರಿಯಿಂದ ಹಲ್ಲೆ ನಡೆಸಿದೆ. ಯುವಕನ ಕೈಗೆ ಚೂರಿಯಿಂದ ಇರಿತದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.  

ನಾಲ್ವರು ಒಂದೇ ಬೈಕಿನಲ್ಲಿ ಚೂರಿ ಹಿಡಿದುಕೊಂಡು ತೆರಳುತ್ತಿದ್ದರು. ಈ ವೇಳೆ, ಅಖಿಲೇಶ್ ಇದನ್ನು ಗಮನಿಸಿ ವಿಡಿಯೋ ಮಾಡಲೆತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ, ಬೇರೆಯವರಿಗೆ ಕರೆ ಮಾಡಿ ವಿಷಯ ಹೇಳುತ್ತಿದ್ದಾನೆಂದು ತಿಳಿದು ನಾಲ್ವರು ಅಡ್ಡಹಾಕಿ ಹಲ್ಲೆ ನಡೆಸಿದ್ದಾರೆ. ‌ನಾಲ್ವರು ಯುವಕರು ಮಂಗಳೂರಿನ ಬೆಂಗ್ರೆ ಮತ್ತು ಸುರತ್ಕಲ್ ಪರಿಸರದವರು ಎನ್ನಲಾಗುತ್ತಿದ್ದು ಒಂದೇ ಕೋಮಿನವರಾಗಿದ್ದಾರೆ. ಇದಕ್ಕೂ ಮುನ್ನ ಇವರು ಬಾರ್ ಒಂದರಿಂದ ಹೊರಗೆ ಬರುವುದನ್ನು ಕೆಲವರು ನೋಡಿದ್ದಾರೆ. ಹೀಗಾಗಿ ಮದ್ಯದ ಅಮಲಿನಲ್ಲಿ ದಾಳಿ ಕೃತ್ಯ ಮಾಡಿರುವ ಬಗ್ಗೆಯೂ ಪೊಲೀಸರು ಶಂಕಿಸಿದ್ದಾರೆ. 

ಆಬಳಿಕ ನಾಲ್ವರಿಗೆ ಎಡಪದವು ಬಳಿ ಮರು ದಾಳಿಗೆ ಯತ್ನ ನಡೆದಿದ್ದು ಈ ವೇಳೆ ಮೂವರು ಯುವಕರು ಬೈಕ್ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಒಬ್ಬಾತನನ್ನು ಸ್ಥಳೀಯರು ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾಲ್ವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಯಾವ ಉದ್ದೇಶದಿಂದ ಕೃತ್ಯ ನಡೆಸಿದ್ದಾರೆಂದು ತನಿಖೆ ನಡೆಸುತ್ತಿದ್ದಾರೆ. ‌

A shocking incident occurred near Edapadavu where a group of four youths riding on a single bike, armed with a talwar (sword), attacked another youth with a knife after he attempted to record a video of them.