Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ್‌ಮೇಲ್, ಇನ್‌ಸ್ಟಾಗ್ರಾಮ್‌ನಲ್ಲಿ 19ರ ಯುವಕನಿಂದ ₹5.24 ಲಕ್ಷ ಸುಲಿಗೆ ; ಯುವತಿಯರಿಗೂ ಸೈಬರ್ ವಾರ್ನಿಂಗ್ !

15-09-26 12:55 pm       HK News Staffer   ಕ್ರೈಂ

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ 19 ವರ್ಷದ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋಗೆ ಮಾರ್ಫ್ ಮಾಡಿ, ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಜೊತೆ ಹಂಚಿಕೊಳ್ಳುವುದಾಗಿ ಬ್ಲ್ಯಾಕ್‌ಮೇಲ್ ನಡೆಸಿ ಬರೋಬ್ಬರಿ 5.24 ಲಕ್ಷಕ್ಕೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಮಂಗಳೂರು, ಸೆ 15: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ 19 ವರ್ಷದ ಯುವಕನ ಭಾವಚಿತ್ರವನ್ನು ಅಶ್ಲೀಲ ಫೋಟೋಗೆ ಮಾರ್ಫ್ ಮಾಡಿ, ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಜೊತೆ ಹಂಚಿಕೊಳ್ಳುವುದಾಗಿ ಬ್ಲ್ಯಾಕ್‌ಮೇಲ್ ನಡೆಸಿ ಬರೋಬ್ಬರಿ 5.24 ಲಕ್ಷಕ್ಕೂ ಅಧಿಕ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಈ ಸಂಬಂಧ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಪಿರ್ಯಾದಿದಾರ 19 ವರ್ಷದ ಯುವಕ ಇನ್‌ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದಾಗ 'ಜಮ್‌ಶೇದ್' ಎಂಬ ಹೆಸರಿನ ವ್ಯಕ್ತಿ ಕಮೆಂಟ್ ಬಾಕ್ಸ್ ಮೂಲಕ ಪರಿಚಯವಾಗಿದ್ದನು. ಆತ ವಾಟ್ಸಾಪ್‌ನಲ್ಲಿ ಚಾಟ್ ಮಾಡಲು ನಂಬರ್ ನೀಡಿದ್ದನು.
ಜೂನ್ 19, 2026 ರಂದು ಯುವಕ ಆ ನಂಬರ್‌ನಲ್ಲಿ ಚಾಟ್ ಮಾಡಲು ಆರಂಭಿಸಿದಾಗ, ಆರೋಪಿಯು ಮೊದಲು ರೂ. 300 ಹಣ ನೀಡುವಂತೆ ಬೇಡಿಕೆಯಿಟ್ಟಿದ್ದನು. ಆರಂಭದಲ್ಲಿ ಹಣ ನೀಡಲು ನಿರಾಕರಿಸಿದರೂ, ಪದೇ ಪದೇ ಫೋನ್ ಕರೆ ಮಾಡಿ ಗೋಗರೆದು ಬೇಡಿಕೊಂಡಿದ್ದರಿಂದ ಯುವಕ ಆತ ಕಳುಹಿಸಿದ ಸ್ಕ್ಯಾನರ್‌ಗೆ ರೂ. 300 ಫೋನ್‌ಪೇ ಮಾಡಿದ್ದನು.

300 ರೂ. ಪಡೆದ ಬಳಿಕ ಆರೋಪಿಯು ಮತ್ತೆ ಬೇರೆ ಬೇರೆ ವಾಟ್ಸಾಪ್ ನಂಬರ್‌ಗಳ ಮೂಲಕ ನಿರಂತರವಾಗಿ ಹೆಚ್ಚಿನ ಹಣ ನೀಡುವಂತೆ ಪೀಡಿಸಲು ಶುರುಮಾಡಿದನು. ಯುವಕ ಹಣ ನೀಡಲು ನಿರಾಕರಿಸಿದಾಗ, ಆತನ ಮುಖದ ಭಾವಚಿತ್ರವನ್ನು ಅಶ್ಲೀಲ ಫೋಟೋದೊಂದಿಗೆ ಮಾರ್ಫ್ (ಎಡಿಟ್) ಮಾಡಿ ಯುವಕನ ವಾಟ್ಸಾಪ್‌ಗೆ ಕಳುಹಿಸಿದ್ದಾನೆ. "ಹೇಳಿದಷ್ಟು ಹಣ ನೀಡದಿದ್ದರೆ ಈ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ನಿನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿರುವ ಎಲ್ಲಾ ಫಾಲೋವರ್ಸ್‌ಗೆ ಕಳುಹಿಸಿ ಮಾನ ಹರಾಜು ಹಾಕುತ್ತೇನೆ" ಎಂದು ತೀವ್ರ ಬೆದರಿಕೆ ಹಾಕಿದ್ದಾನೆ.

ಮಾನಹಾನಿಯ ಭಯಕ್ಕೆ ಬಿದ್ದ ಯುವಕ, ಜೂನ್ 19, 2026 ರಿಂದ ಜುಲೈ 23, 2026 ರವರೆಗೆ ವಂಚಕರು ನೀಡಿದ ವಿವಿಧ ಕ್ಯೂಆರ್ ಸ್ಕ್ಯಾನರ್‌ಗಳಿಗೆ ತಮ್ಮ ಬ್ಯಾಂಕ್ ಆಫ್ ಬರೋಡಾ ಉಳಿತಾಯ ಖಾತೆಯಿಂದ ಫೋನ್‌ಪೇ ಮೂಲಕ ಹಂತ ಹಂತವಾಗಿ ಒಟ್ಟು ರೂ. 5,24,712/- ಹಣವನ್ನು ವರ್ಗಾಯಿಸಿದ್ದಾರೆ.

ಇಷ್ಟೊಂದು ಹಣ ನೀಡಿದರೂ ಆರೋಪಿಗಳ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್ ಮುಂದುವರಿದ ಕಾರಣ, ಅಂತಿಮವಾಗಿ ಯುವಕ ಸಿಇಎನ್ (CEN) ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

What began with a demand for just ₹300 allegedly turned into a prolonged cyber blackmail ordeal, with a 19-year-old youth losing ₹5.24 lakh after cyber fraudsters allegedly morphed his photograph into an obscene image and threatened to circulate it among his Instagram followers.