ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ; ಮುಂಬೈ ಪೊಲೀಸರಿಂದ ಯುವಕನ ಬಂಧನ

08-02-21 04:07 pm       Headline Karnataka News Network   ಕ್ರೈಂ

ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಟ್ವೀಟ್ ಮಾಡಿದ ಬನ್ವಾರಿ ಸಿಂಗ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ, ಫೆ.8 : ಮಲ್ಟಿಪ್ಲೆಕ್ಸ್ ಥಿಯೇಟರ್ ಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಟ್ವೀಟ್ ಮಾಡಿದ 19 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಬನ್ವಾರಿ ಸಿಂಗ್ ಎಂದು ಗುರುತಿಸಲಾಗಿದ್ದು, ಜನವರಿ 22ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಟ್ಯಾಗ್ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಕಮಾಂಡೋ ಸಿಂಗ್ ಎಂಬ ಹೆಸರಿನಲ್ಲಿರುವ ಟ್ವಿಟರ್ ಖಾತೆಯನ್ನು ಯುವಕ ಬಳಕೆ ಮಾಡುತ್ತಿದ್ದು, ಮುಂಬೈನ ಏಳು ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ. ಪೊಲೀಸರು ಕೂಡಲೇ ಮಲ್ಟಿಪ್ಲೆಕ್ಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದು ವಂಚಿಸಲು ಹಾಕಿರುವ ಟ್ವೀಟ್ ಎಂದು ಮನಗಂಡಿದ್ದಾರೆ. ಈ ಮಧ್ಯೆ ಆರೋಪಿ ತಾನು ಟ್ವೀಟ್ ಮಾಡಿದ್ದನ್ನು ಅಳಿಸಿ ಹಾಕಿದ್ದಾನೆ.

ಘಟನೆ ವಿಚಾರವಾಗಿ ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಿದ್ದು, ಆರೋಪಿ ಟ್ವೀಟ್ ಮಾಡಲು ಬಳಸಿದ್ದ ಮೊಬೈಲ್‍ ಅನ್ನು ವಶಪಡಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ರಶ್ಮಿ ಕರಂದಿಕರ್ ಹೇಳಿದ್ದಾರೆ.

Mumbai Police have arrested a 19- year-old youth from Haryana for allegedly posting a tweet about bomb blasts at some multiplexes in the city which later turned out to be a hoax, a police official said on Monday.