ಬ್ರೇಕಿಂಗ್ ನ್ಯೂಸ್
19-02-21 01:48 pm Mangalore Correspondent ಕ್ರೈಂ
ಮಂಗಳೂರು, ಫೆ.19: ಎರಡು ವರ್ಷಗಳ ಹಿಂದೆ ನಡೆದ ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ ಮುಂಚೂಣಿಗೆ ಬಂದಿದೆ. ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಹಮ್ಮದ್ ನವಾಜ್ ಯಾನೆ ಪಿಂಕಿ ನವಾಜ್ ಮೇಲೆ ಫೆ.10ರಂದು ದಾಳಿ ನಡೆದಿತ್ತು. ಇದೀಗ ಆತನ ಮೇಲಿನ ಟಾರ್ಗೆಟ್ ದೃಢಪಟ್ಟಿದೆ. ದೀಪಕ್ ರಾವ್ ಕೊಲೆಯ ಪ್ರತೀಕಾರ ಮತ್ತು ಶಾಕೀಬ್ ಎಂಬಾತನ ವೈಯಕ್ತಿಕ ದ್ವೇಷದಿಂದ ಅಟ್ಯಾಕ್ ನಡೆದಿತ್ತು ಎನ್ನೋದನ್ನು ಪೊಲೀಸರು ದೃಢಪಡಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಮಂಗಳೂರಿನ ಸಿಸಿಬಿ ಮತ್ತು ಸುರತ್ಕಲ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ 9 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಕಾಟಿಪಳ್ಳ ನಿವಾಸಿಗಳಾಗ ಪ್ರಶಾಂತ್ ಭಂಡಾರಿ @ ಪಚ್ಚು, ಶಾಕೀಬ್ @ ಶಬ್ಬು (29), ಶೈಲೇಶ್ ಪೂಜಾರಿ(19), ಹನೀಫ್ @ ಹಂಪು(20) ಇವರಿಗೆ ಸಹಕಾರ ನೀಡಿದ ಆರೋಪದಲ್ಲಿ ಹೆಜಮಾಡಿಯ ಸುವಿನ್ ಕಾಂಚನ್ @ ಮುನ್ನ (23), ಲಕ್ಷ್ಮೀಶ ಉಳ್ಳಾಲ(26), ಅಹ್ಮದ್ ಸಾದಿಕ್(23), ನಿಸಾರ್ ಹುಸೇನ್(29), ರಂಜನ್ ಶೆಟ್ಟಿ (24) ಪಂಜ ಮುಗಪಾಡಿ ಎಂಬವರನ್ನು ಬಂಧಿಸಲಾಗಿದೆ. ಸ್ವಿಪ್ಟ್ ಕಾರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಕಾಟಿಪಳ್ಳ 2ನೇ ಬ್ಲಾಕ್ ನಲ್ಲಿ ಫೆ.10ರಂದು ಸಂಜೆ ರಸ್ತೆ ಬದಿ ನಿಂತುಕೊಂಡಿದ್ದ ಪಿಂಕಿ ನವಾಜ್ ಮೇಲೆ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ನಾಲ್ವರು ಅಟ್ಯಾಕ್ ಮಾಡಿದ್ದರು. ಆದರೆ, ಶಾಕೀಬ್ ನನ್ನು ನೋಡಿದ ಕೂಡಲೇ, ಇವರ ಸ್ಕೆಚ್ ಗೊತ್ತಾಗಿ ಪಿಂಕಿ ನವಾಜ್ ಸ್ಥಳದಿಂದ ಓಡಿದ್ದಾನೆ. ತಲವಾರು ಹಿಡಿದು ಹಿಂದಿನಿಂದಲೇ ಅಟ್ಟಿಸಿಕೊಂಡು ಬಂದಿದ್ದ ಆಗಂತುಕರು ಪಿಂಕಿ ನವಾಜ್ ಬೆನ್ನು, ಕೈಗೆ, ತಲೆಗೆ ತಲವಾರು ದಾಳಿ ನಡೆಸಿದ್ದಾರೆ. ಆದರೆ, ಈ ರೀತಿಯ ದಾಳಿ, ಪ್ರತಿದಾಳಿಯಲ್ಲಿ ನಿಷ್ಣಾತನಾಗಿದ್ದ ಪಿಂಕಿ, ಅಪಾಯದಿಂದ ಪಾರಾಗಿದ್ದಾನೆ. ಬಳಿಕ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿ, ಈಗ ಚೇತರಿಸುತ್ತಿದ್ದಾನೆ.
ಆಸ್ಪತ್ರೆಗೆ ದಾಖಲಾಗಿದ್ದ ಪಿಂಕಿ ನವಾಜ್ ನನ್ನು ಪೊಲೀಸ್ ಕಮಿಷನರ್ ಭೇಂಟಿಯಾಗಿ ವಿಚಾರಿಸಿದಾಗ, ಅಂದೇ ಶಾಕಿಬ್ ಹೆಸರು ಹೇಳಿದ್ದ. ಅಲ್ಲದೆ, ಶಾಕೀಬ್ ಗೆ ತನ್ನ ಮೇಲೆ ವೈಯಕ್ತಿಕ ದ್ವೇಷ ಇರುವುದನ್ನೂ ಹೇಳಿಕೊಂಡಿದ್ದ. ಹಾಗಾಗಿ ಶಾಕೀಬ್, ದಾಳಿಯ ರೂವಾರಿ ಅನ್ನೋದನ್ನು ಪೊಲೀಸರು ಆವತ್ತೇ ಖಾತರಿ ಪಡಿಸಿದ್ದರು. ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ ತಂಡವನ್ನು ಎರಡು – ಮೂರು ದಿನಗಳ ಬಳಿಕ ವಶಕ್ಕೆ ಪಡೆದಿದ್ದ ಪೊಲೀಸರು, ಆರೋಪಿಗಳು ಹೂಡಿದ್ದ ಸಂಚನ್ನು ಭೇದಿಸಿದ್ದಾರೆ. ಶಾಕೀಬ್ ಗೆ ವೈಯಕ್ತಿಕ ದ್ವೇಷ ಇದ್ದರೆ, ಇದೇ ಸಂದರ್ಭದಲ್ಲಿ ಆತನ ಜೊತೆಯಾಗಿದ್ದ ದೀಪಕ್ ರಾವ್ ಸ್ನೇಹಿತನಾಗಿದ್ದ ಪ್ರಶಾಂತ್ ಭಂಡಾರಿ ಪಿಂಕಿ ನವಾಜ್ ಮೇಲೆ ದ್ವೇಷ ಇಟ್ಟುಕೊಂಡಿದ್ದು ತಿಳಿದಿತ್ತು. ಇಬ್ಬರ ಶತ್ರು ಒಂದೇ ಅನ್ನೋದು ಖಾತರಿಯಾಗುತ್ತಲೇ, ಪಿಂಕಿ ನವಾಜ್ ಹತ್ಯೆಗೆ ಸ್ಕೆಚ್ ರೆಡಿ ಮಾಡುತ್ತಾರೆ. ದೀಪಕ್ ರಾವ್ ಕೊಲೆಗೆ ಪ್ರತೀಕಾರ ತೀರಿಸಬೇಕೆಂದುಕೊಂಡಿದ್ದ ಹುಡುಗರ ಸಾಥ್ ಪಡೆದ ಪ್ರಶಾಂತ್ ಭಂಡಾರಿ ಅಲಿಯಾಸ್ ಪಚ್ಚು ಶಾಕೀಬ್ ಜೊತೆ ಸೇರಿ ತಲವಾರು ಬೀಸಲು ಬಂದಿದ್ದರು.
2018ರ ಜ.3 ರಂದು ಹಾಡುಹಗಲೇ ಹತ್ಯೆಯಾಗಿದ್ದ ದೀಪಕ್ ರಾವ್, ಬಜರಂಗದಳ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕಾರ್ಯಕರ್ತನಾಗಿದ್ದ ಅದೇ ಕಾರಣಕ್ಕೆ ಆತನ ಕೊಲೆ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತಲ್ಲದೆ, ಬಿಜೆಪಿ ನಾಯಕರಿಗೆ ಚುನಾವಣೆ ವೇಳೆಗೆ ಇದೇ ಇಶ್ಯು ಪ್ಲಸ್ ಪಾಯಿಂಟ್ ಆಗಿತ್ತು. ಆದರೆ, ಈಗ ಹಗೆ ತೀರಿಸಿಕೊಳ್ಳಲು ಮುಂದಾಗಿರುವ ಪ್ರಶಾಂತ್ ಭಂಡಾರಿ ಹಾಗೇನೂ ಹಿಂದು ಸಂಘಟನೆಯಾಗಲೀ, ಬಿಜೆಪಿಯಲ್ಲಾಗಲೀ ಗುರುತಿಸಿಕೊಂಡಿಲ್ಲ ಎನ್ನುತ್ತಾರೆ ಪೊಲೀಸರು.
ಆದರೆ, ದೀಪಕ್ ರಾವ್ ಆಪ್ತನಾಗಿದ್ದ ಪ್ರಶಾಂತ್ ಭಂಡಾರಿಯನ್ನೇ ಸದ್ರಿ ಪ್ರಕರಣದಲ್ಲಿ ಎ ವನ್ ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ. ಪಣಂಬೂರು, ಸುರತ್ಕಲ್, ಮಂಗಳೂರು, ವಿಟ್ಲದಲ್ಲಿ ಕೊಲೆ, ಕೊಲೆಯತ್ನ, ಎನ್ ಡಿಪಿಎಸ್ ಆಕ್ಟ್ ಸೇರಿ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ವಿಟ್ಲದಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದ. ಉಳಿದವರಲ್ಲಿ ಶಾಕೀಬ್ ಮತ್ತು ಸಾದಿಕ್ ಒಂದಷ್ಟು ಅಪರಾಧ ಹಿನ್ನೆಲೆ ಹೊಂದಿದ್ದಾರೆ, ಅಷ್ಟೇ.. ಉಳಿದವರೆಲ್ಲ ಗಾಂಜಾ ಗಿರಾಕಿಗಳಾಗಿದ್ದು, ಹೊಸತಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read: ಕಾಟಿಪಳ್ಳದಲ್ಲಿ ಮತ್ತೆ ತಲವಾರು ದಾಳಿ ; ದೀಪಕ್ ರಾವ್ ಕೊಲೆ ಆರೋಪಿಯ ಅಟ್ಟಾಡಿಸಿದ ದುಷ್ಕರ್ಮಿಗಳು !!
Suratkal police along with CCB arrested nine people in connection with the assault on rowdy-sheeter Pinky Nawaz at surathkal who was the prime accused in Deepak Rao Murder case.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm