ಬ್ರೇಕಿಂಗ್ ನ್ಯೂಸ್
26-08-20 07:36 pm Mangalore Correspondant ಕ್ರೈಂ
ಮಂಗಳೂರು, ಆಗಸ್ಟ್ 26: ಲೇಡಿಸ್ ಪಿಜಿಗೆ ನುಗ್ಗಿ ಒಳ ಉಡುಪುಗಳನ್ನು ಕದಿಯುತ್ತಿದ್ದ ಕಾಮುಕನನ್ನು ಹಿಡಿದು ಯುವತಿಯರೇ ಸೇರಿ ಗೂಸಾ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಹಂಪನಕಟ್ಟೆಯ ಶರವು ದೇವಸ್ಥಾನದ ಬಳಿಯ ಪೇಯಿಂಗ್ ಗೆಸ್ಟ್ ನಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಪಿಜಿಗೆ ನುಗ್ಗಿದ್ದ ಯುವಕನನ್ನು ಹಿಡಿದು ಯುವತಿಯರು ಥಳಿಸಿದ್ದಾರೆ. ಬಳಿಕ ಬಂದರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಹಿಡಿದು ಜೈಲಿಗಟ್ಟುವ ಬದಲು ಯುವತಿಯರಿಗೇ ದಬಾಯಿಸಿದ್ದಾರೆ. ನೀವ್ಯಾಕೆ ಹೊಡೆಯಲು ಹೋಗಿದ್ದು..? ಆತನಿಗೆ ನೀವೇ ಚಿಕಿತ್ಸೆ ಕೊಡಿಸಿ ಎಂದು ಶರವು ಬಳಿಯಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದ್ದಾರೆ. ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಯುವತಿಯರಿಂದಲೇ ಮೂರು ಸಾವಿರ ರೂಪಾಯಿ ಬಿಲ್ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಪಿಜಿಗೆ ನುಗ್ಗಿ ಯುವತಿಯರಿಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಆಸ್ಪತ್ರೆಯಿಂದ ಬಿಟ್ಟುಬಿಡುವಂತೆ ಪೊಲೀಸರೇ ಸೂಚಿಸಿದ್ದಾರೆ. ಅದರಂತೆ, ಆಸ್ಪತ್ರೆಯವರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ರಾತ್ರಿಯೇ ಆತನನ್ನು ಹೊರಗೆ ಬಿಟ್ಟು ಕಳುಹಿಸಿದ್ದರು.
ಈ ಬಗ್ಗೆ ಮಾಧ್ಯಮದ ಜೊತೆ ಅಲವತ್ತುಕೊಂಡ ಪೇಯಿಂಗ್ ಗೆಸ್ಟ್ ನಲ್ಲಿರುವ ಯುವತಿಯರು, ಇದೇ ಆರೋಪಿ ಈ ಹಿಂದೆಯೂ ಪಿಜಿಗೆ ಬಂದು ಬಟ್ಟೆ ಕದಿಯುವ ಕೆಲಸ ಮಾಡಿದ್ದ. ನಾವು ಆತನನ್ನು ಹಿಡಿದು ಬಂದರು ಪೊಲೀಸರಿಗೆ ಕೊಟ್ಟಿದ್ದೆವು. ಆದರೆ, ಬಂದರು ಪೊಲೀಸರು ಆಕ್ಷನ್ ತಗೊಂಡಿಲ್ಲ. ನಿನ್ನೆ ರಾತ್ರಿ ಪಿಜಿಗೆ ಬಂದಿರುವುದು ನಾಲ್ಕನೇ ಬಾರಿ. ಎಲ್ಲರು ಸೇರಿ ಹಿಡಿದು ಎರಡೇಟು ಕೊಟ್ಟಿದ್ದೇವೆ. ಅಷ್ಟಕ್ಕೇ ಪೊಲೀಸರು ಆರೋಪಿಯನ್ನು ಬಂಧಿಸುವ ಬದಲು ನಮ್ಮಲ್ಲೇ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಸಾಮಾನ್ಯ ಜನರನ್ನು ಪಾಲನೆ ಮಾಡಬೇಕಾದ ಪೊಲೀಸರು ನಮ್ಮಿಂದಲೇ ಚಿಕಿತ್ಸೆ ಕೊಡಿಸಿದ್ದು ಎಷ್ಟು ಸರಿ ? ಅಷ್ಟೊಂದು ಗಾಯ ಆಗಿದ್ದರೆ ಆತನನ್ನು ಆಸ್ಪತ್ರೆಯಿಂದ ಬಿಟ್ಟುಕೊಟ್ಟಿದ್ಯಾಕೆ..? ಕಳ್ಳನನ್ನು ಹಿಡಿದು ನಾವೇ ಸನ್ಮಾನ ಮಾಡಿ ಕಳುಹಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಂದರು ಪೊಲೀಸ್ ಇನ್ಸ್ ಪೆಕ್ಟರಲ್ಲಿ ಕೇಳಿದ್ರೆ, ವಿಷ್ಯ ಆಗಿದ್ದು ಹೌದು.. ಅವರೇ ಆಸ್ಪತ್ರೆಗೆ ದಾಖಲು ಮಾಡಿ ಬಿಲ್ ಕೊಟ್ಟಿದ್ದಾರೆ. ನಮ್ಮ ಸಿಬಂದಿ ದಾಖಲು ಮಾಡಿದ್ದಲ್ಲ. ಆರೋಪಿ ಯುವಕ ಮಾನಸಿಕ ಅಸ್ವಸ್ಥ. ರೈಲ್ವೇ ಸ್ಟೇಶನ್ನಲ್ಲಿ ತಿರುಗಾಡುತ್ತಿರುತ್ತಾನೆ. ಪಿಜಿ ಓನರಲ್ಲಿ ಕಂಪ್ಲೇಂಟ್ ಕೊಡಿ ಅಂದ್ರೆ ದೂರು ಕೊಟ್ಟಿಲ್ಲ. ಈ ಹಿಂದೊಮ್ಮೆ ಆತನನ್ನು ಹಿಡಿದು ಎರಡು ದಿನ ಸ್ಟೇಶನ್ನಲ್ಲಿ ಇಟ್ಟಿದ್ದೆವು. ಈಗ ಕಂಪ್ಲೇಂಟ್ ಇಲ್ಲದೆ ನಾವು ಅರೆಸ್ಟ್ ಮಾಡಿಟ್ಟುಕೊಳ್ಳಲು ಆಗಲ್ಲ. ಇನ್ನು ಲೇಡಿಸ್ ಪಿಜಿಗೆ ಸೆಕ್ಯುರಿಟಿ ಗಾರ್ಡ್ ಇಟ್ಕೋಬೇಕು. ಈ ಪಿಜಿಯವರು ಯಾಕೆ ಸೆಕ್ಯುರಿಟಿ ಇಟ್ಟುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ, ಪಿಜಿ ಓನರಲ್ಲಿ ಕೇಳಿದರೆ ನಾವು ಸೆಕ್ಯುರಿಟಿ ಇಟ್ಕೊಂಡಿದ್ದೇವೆ. ಸೆಕ್ಯುರಿಟಿ ಅಲ್ಲಿಯೇ ಹೊರಗಡೆ ಮಲಗುತ್ತಾರೆ. ಪೊಲೀಸರು ಸೆಕ್ಯುರಿಟಿ ಇದ್ದಾರಾ ಅಂತ ನೋಡಲು ಬಂದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ನಾಳೆ ಕಮಿಷನರ್ ಕಚೇರಿಗೆ ಹೋಗಿ ಕಂಪ್ಲೇಂಟ್ ಕೊಡ್ತೀವಿ ಎಂದು ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಪಿಜಿ ನಡೆಸುವ ವಿಜಯಲಕ್ಷ್ಮಿ ಗಟ್ಟಿ ಹೇಳಿದ್ದಾರೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm