ಬ್ರೇಕಿಂಗ್ ನ್ಯೂಸ್
27-08-20 03:05 pm Bangalore Correspondant ಕ್ರೈಂ
ಬೆಂಗಳೂರು, ಆಗಸ್ಟ್ 27: ಸ್ಯಾಂಡಲ್‌ವುಡ್ ಸ್ಟಾರ್ ನಟ, ನಟಿಯರು, ಸಂಗೀತಗಾರರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ವಿತರಿಸುತ್ತಿರುವ ಬೃಹತ್ ಜಾಲ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಇದೇ ೨೧ ರಂದು ಕಲ್ಯಾಣನಗರದ ರಾಯಲ್ ಸೂಟ್ಸ್ ಅಪಾರ್ಟ್ ಮೆಂಟ್ ಮೇಲೆ ಸಿಸಿಬಿಯ ನಾರ್ಕೋಟಿಕ್ಸ್ ಬ್ಯೂರೋ ಪೊಲೀಸರು ದಾಳಿ ನಡೆಸಿದಾಗ ಅನಿಕಾ, ಅನೂಪ್, ರವೀಂದ್ರನ್ ಎಂಬುವವರು ಬಂಧಿತರಾಗಿದ್ದರು. ವಿಚಾರಣೆಯಲ್ಲಿ ಸ್ಯಾಂಡಲ್‌ವುಡ್‌ನ ಕೆಲ ತಾರೆಯರು ಇವರ ಖಾಯಂ ಗಿರಾಕಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಆಗಸ್ಟ್ ೨೧ ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 45 ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು ೨.೨೦ ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಕ್ಕೆ ಪಡೆದಿದ್ದಲ್ಲದೆ ಬೆಂಗಳೂರಿನ ನಿಕೊ ಹೌಸ್ನಲ್ಲಿ ೯೬ ಎಂಡಿಎಂಎ ಮಾತ್ರೆಗಳು ಮತ್ತು ೧೮೦ ಎಲ್ಎಸ್‌ಡಿ (ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಆಗಿದ್ದು ಆಕೆಗೆ ಕಿರುತೆರೆಯ ನಂಟು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಾರಣೆಯ ಸಂದರ್ಭದಲ್ಲಿ ಅನಿಕಾ ಕಿರುತೆರೆಯ ನಟರೊಂದಿಗೂ ಸಂಪರ್ಕ ಬೆಳೆಸಿದ್ದ ವಿಚಾರ ತಿಳಿದು ಬಂದಿದೆ. ಆಕೆ ಕೆಲ ಧಾರಾವಹಿಯಲ್ಲೂ ನಟಿಸಿದ್ದು ಹಲವು ನಟ, ನಟಿಯರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಈಕೆ ಡಾರ್ಕ್ವೆಬ್ ಮೂಲಕ ಜರ್ಮನಿ ಮತ್ತು ಬೆಲ್ಜಿಯನಿಂದ ಡ್ರಗ್ಸ್ಗಳನ್ನು ಆರ್ಡರ್ ಮಾಡುತ್ತಿದ್ದಳು ಎನ್ನಲಾಗಿದೆ.
ಒಟ್ಟು 2 ಕೋಟಿಗೂ ಹೆಚ್ಚು ವ್ಯವಹಾರ
ಕೋವಿಡ್ ೧೯ ಲಾಕ್ ಡೌನ್ ಅವಧಿಯಲ್ಲಿ ಮದ್ಯ ಮಾರಾಟವನ್ನು ನಿಷೇಧೀಸಿದ ಹಿನ್ನಲೆ ಡ್ರಗ್ಸ್ಗೆ ಬೇಡಿಕೆ ಹೆಚ್ಚಾಗಿತ್ತು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ತಂಡ ಲಾಕ್ ಡೌನ್ ಅವಧಿಯಲ್ಲಿ ಒಟ್ಟು ೩ ಕೋಟಿಗೂ ಹೆಚ್ಚು ವ್ಯವಹಾರ ನಡೆಸಿದ್ದಾರೆಂಬ ಎಂಬ ಶಂಕೆ ವ್ಯಕ್ತವಾಗಿದೆ. ಅನಿಕಾ ಹೇಳಿಕೆ ಆಧಾರಿಸಿ ನಟ, ನಟಿಯರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ. ರಾಜೇಶ್ ಮತ್ತು ಅನೂಪ್ ಮೊಬೈಲ್ ಪರಿಶೀಲಿಸಿದ ವೇಳೆ ಒಂದು ತಿಂಗಳಿಗೆ ೨ ಸಾವಿರ ಗ್ರಾಹಕರನ್ನು ಸಂಪರ್ಕಿಸಿರುವ ಸ್ಫೋಟಕ ಮಾಹಿತಿ ಸಿಕ್ಕಿದೆ.
ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್( ಎಲ್ಎಸ್‌ಡಿ) ಒಂದು ಮತ್ತು ಬರುವ ಮಾದಕ ವಸ್ತು. ಒಮ್ಮೆ ಇದನ್ನು ಸೇವಿಸಿದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ದೇಹದ ಉಷ್ಣಾಂಶ ಏರುತ್ತದೆ. ಅರ್ಧ ಗಂಟೆಯಲ್ಲಿ ಕಿಕ್ ಕೊಡಲು ಆರಂಭಿಸುತ್ತದೆ. ಈ ಮಾದಕ ವಸ್ತು ೧೨ ಗಂಟೆಗಳ ಮನುಷ್ಯ ದೇಹದಲ್ಲಿರುತ್ತದೆ. ನಾಲಿಗೆ ಮೂಲಕ ಎಲ್‌ಎಸ್‌ಡಿಯನ್ನು ಸೇವಿಸಬಹುದು. ಹಲವು ದೇಶಗಳಲ್ಲಿ ಎಲ್‌ಎಸ್ ಡಿ ಮಾದಕ ದ್ರವ್ಯವನ್ನು ನಿಷೇಧ ಮಾಡಲಾಗಿದೆ. ಡೆನ್ಮಾರ್ಕ್, ಬೆಲ್ಜಿಯಂ, ಜರ್ಮನಿಯಲ್ಲಿ ಎಲ್‌ಎಸ್‌ಡಿ(ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ವ್ಯವಹಾರ ಹೆಚ್ಚಾಗಿದ್ದು ಇದನ್ನು ಡಾರ್ಕ್ ವೆಬ್ ಮೂಲಕ ಬುಕ್ ಮಾಡಲಾಗುತ್ತದೆ. ಬೆಲ್ಜಿಯಂ, ಡೆನ್ಮಾರ್ಕ್ನಿಂದ ಕೊರಿಯರ್ ಮೂಲಕವಾಗಿ ಈ ವಸ್ತು ಡೀಲರ್‌ಗಳ ಕೈ ಸೇರುತ್ತದೆ. ವಿಮಾನದಲ್ಲಿ ಬರುವ ಕೊರಿಯರ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ. ಆದರೆ ಸರಿಯಾಗಿ ಪರಿಶೀಲನೆ ನಡೆಸದೇ ಒಳಗಡೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ಮೇಲೆಯೇ ಈಗ ಶಂಕೆ ವ್ಯಕ್ತವಾಗಿದೆ.
ಅಂಚೆ ಇಲಾಖೆಯಿಂದ ಡೀಲರ್ ಗೆ ಫೋನ್ ಹೋಗುತ್ತದೆ
ಡೆನ್ಮಾರ್ಕ್, ಬೆಲ್ಜಿಯಂನಿಂದ ಬಂದ ಬಾಕ್ಸ್ಗಳು ಅಂಚೆ ಇಲಾಖೆಯಿಂದಲೂ ವಿಲೇವಾರಿಯಾಗುತ್ತದೆ. ಯಾರಿಗೆ ಸೇರಬೇಕೋ ಅವರಿಗೆ ಅಂಚೆ ಇಲಾಖೆಯಿಂದ ಫೋನ್ ಹೋಗುತ್ತದೆ. ಫೋನ್ ಮಾಡಿ ಬಾಕ್ಸ್ ಸಂಗ್ರಹಿಸಲು ಗ್ರಾಹಕರನ್ನು ಕರೆಯುತ್ತಾರೆ. ಬಾಕ್ಸ್ನಲ್ಲಿ ಬಂದ ವಸ್ತುಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಆದರೆ ಸ್ಕ್ಯಾನ್ ಮಾಡದೇ ಅಂಚೆ ಇಲಾಖೆಯ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈಗ ಅವರ ಮೇಲೂ ಅನುಮಾನ ವ್ಯಕ್ತವಾಗಿದೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm