ಸುಳ್ಯ ; ಜುವೆಲ್ಲರಿಯಿಂದ ಚಿನ್ನಾಭರಣ ದೋಚಿದ್ದ ಅಂತಾರಾಜ್ಯ ಕಳ್ಳರ ಸೆರೆ

29-05-21 10:30 pm       Mangaluru Correspondent   ಕ್ರೈಂ

ಸುಳ್ಯ ಪೇಟೆಯ ಹಳೆ ಬಸ್ ನಿಲ್ದಾಣ ಬಳಿಯ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಸುಳ್ಯ, ಮೇ 29: ಸುಳ್ಯ ಪೇಟೆಯ ಹಳೆ ಬಸ್ ನಿಲ್ದಾಣ ಬಳಿಯ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಕಳೆದ ಮಾರ್ಚ್ 31ರಂದು ರಾತ್ರಿ ಜುವೆಲ್ಲರಿಗೆ ಕಳ್ಳರು ನುಗ್ಗಿ ನಾಲ್ಕು ಚಿನ್ನದ ಬಳೆ, ಒಂದು ಜೊತೆ ಬೆಂಡೋಲೆ, ಒಂದು ನೆಕ್ಲೇಸ್, ಎರಡು ಚಿನ್ನದ ನಾಣ್ಯ ಸೇರಿ ಒಟ್ಟು 180 ಗ್ರಾಮ್ ತೂಕದ 7.50 ಲಕ್ಷ ಮೌಲ್ಯದ ಚಿನ್ನಾಭರಣ, ಕ್ಯಾಶ್ ಡ್ರಾವರಿನಲ್ಲಿದ್ದ 50 ಸಾವಿರ ನಗದು ಕಳವು ಮಾಡಿಕೊಂಡು ಹೋಗಿದ್ದರು.

ಪ್ರಕರಣದ ಪತ್ತೆಗೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನಚಂದ್ರ ಜೋಗಿ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಪೊಲೀಸರು ಕೇರಳದ ಕಣ್ಣೂರು ಜಿಲ್ಲೆಯ ತಳಪರಂಬ ನಿವಾಸಿ ತಂಗಚ್ಚ ಮ್ಯಾಥ್ಯೂ ಅಲಿಯಾಸ್ ಮಹಮ್ಮದ್ ಬಶೀರ್ (50) ಮತ್ತು ತ್ರಿಶ್ಶೂರ್ ಜಿಲ್ಲೆಯ ಪೂಕೋಡ್ ಪಂಚಾಯತ್ ನಿವಾಸಿ ಶಿಬು (48) ಎಂಬವರನ್ನು ಬಂಧಿಸಿದ್ದಾರೆ. ಅವರಿಂದ 6.61 ಲಕ್ಷ ಮೌಲ್ಯದ 147 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 

Sullia and Puttur Jewellery Theft case DK Police arrest two