ಬ್ರೇಕಿಂಗ್ ನ್ಯೂಸ್
31-07-21 10:41 pm Udupi Correspondent ಕ್ರೈಂ
ಉಡುಪಿ, ಜುಲೈ 31: ಕೋಟೇಶ್ವರದ ಕಾಳಾವರದಲ್ಲಿ ಹತ್ಯೆಯಾದ ಅಜೇಂದ್ರ ಶೆಟ್ಟಿ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಆತನ ಸ್ನೇಹಿತನೇ ಕೊಲೆ ಮಾಡಿದ್ದಾನೆಯೇ ಎನ್ನುವ ಅನುಮಾನ ಎದ್ದಿದೆ.
ಅಜೇಂದ್ರ ಶೆಟ್ಟಿ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಡ್ರೀಮ್ ಫೈನಾನ್ಸ್ ಎನ್ನುವ ಹೆಸರಿನಲ್ಲಿ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯಲ್ಲಿ ಐದು ವರ್ಷಗಳಿಂದ ನಡೆಸುತ್ತಿದ್ದರು. ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಮನೆ ಸೇರುತ್ತಿದ್ದ ಅಜೇಂದ್ರ ನಿನ್ನೆ ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೆದರಿದ ಮನೆಯವರು, ಸ್ನೇಹಿತರು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆ, ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಷ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್’ಗೆ ಬಂದಾಗ ಎದುರಿನ ಶೆಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ನೋಡಿದಾಗ ಅಜೇಂದ್ರ ಶೆಟ್ಟಿ ಸೋಫಾದಲ್ಲಿ ಕುಳಿತ ಭಂಗಿಯಲ್ಲಿ ಕೊಲೆಯಾದ ಸ್ಥಿತಿಯಲ್ಲೇ ಪತ್ತೆಯಾಗಿದ್ದಾನೆ. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದ ಗಾಯಗಳಾಗಿದ್ದವು. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿತ್ತು.
ಕೊಲೆಯಾಗಿರುವ ಅಜೇಂದ್ರ ಶೆಟ್ಟಿ ಹಾಗೂ ಅನುಪ್ ಶೆಟ್ಟಿ ಶುಕ್ರವಾರ ರಾತ್ರಿ ಕಚೇರಿಯಲ್ಲಿ ಒಟ್ಟಿಗೇ ಇದ್ದರು. ಹಣಕಾಸು ವಿಚಾರದಲ್ಲಿ ಮನಸ್ತಾಪ ನಡೆದು ಅನುಪ್ ಶೆಟ್ಟಿಯೇ ಕೊಲೆ ಮಾಡಿರಬಹುದೆಂದು ಅನುಮಾನ ಕೇಳಿಬಂದಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಜೇಂದ್ರ ಸೋದರ ಮಹೇಂದ್ರ ಶೆಟ್ಟಿ, ಹಣಕಾಸಿನ ವಿಚಾರದ ಬಗ್ಗೆ ತಮ್ಮ ಹೇಳಿಕೊಂಡಿದ್ದ. ಆದರೆ ಸ್ನೇಹಿತನ ಜೊತೆ ಮನಸ್ತಾಪದ ಬಗ್ಗೆ ಹೇಳಿರಲಿಲ್ಲ. ಈಗ ಆತನ ಪಾರ್ಟ್ನರೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಅಜೇಂದ್ರ ಕಾರಿನಲ್ಲೇ ಎಸ್ಕೇಪ್ ಶಂಕೆ
ಅನೂಪ್ ಶೆಟ್ಟಿ ಬುಲ್ಲೆಟ್ ಬೈಕ್ ಫೈನಾನ್ಸ್ ಕಚೇರಿಯ ಎದುರಲ್ಲೇ ಇದೆ. ಆದರೆ ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರು ಕಾಣೆಯಾಗಿದ್ದು ಅನುಪ್ ಅದರಲ್ಲೇ ಎಸ್ಕೇಪ್ ಆಗಿರುವ ಬಗ್ಗೆ ಅನುಮಾನ ಮೂಡಿದೆ. ಅಲ್ಲದೆ ಅನೂಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಮೂಲಗಳ ಪ್ರಕಾರ ಉತ್ತರಕನ್ನಡ ಮಾರ್ಗವಾಗಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಫೋರೆನ್ಸಿಕ್ ತಜ್ಞರ ತಂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ.
ಕೋಟೇಶ್ವರ ; ಫೈನಾನ್ಸ್ ಕಚೇರಿಗೆ ನುಗ್ಗಿ ಯುವಕನ ಕಗ್ಗೊಲೆ, ಹಣಕಾಸು ದ್ವೇಷದಲ್ಲಿ ಕೃತ್ಯ
In a gruesome murder that took place at the Dream Finance company of Salvadi Kalavara near here on the night of July 30 the throat of company’s partner was slit. Ajendra Shetty (33), is the victim, who lost his life in this murder. As deceased Ajendra did not return home till late, his family members and friends started searching for him. When they came near the finance company, which the deceased used to run along with one more partner, the shutter of the office was closed.
01-04-25 10:45 pm
HK News Desk
Karnataka diesel price hike: ಹಾಲು, ಟೋಲ್, ಕರೆಂ...
01-04-25 09:35 pm
ರಾಜ್ಯ ಸರ್ಕಾರದಿಂದ ಯುಗಾದಿಗೆ ಬೆಲೆ ಏರಿಕೆ ಕೊಡುಗೆ ;...
01-04-25 03:49 pm
Karnataka toll hike, Milk: ರಾಜ್ಯದ ಜನತೆಗೆ ಎಪ್ರ...
01-04-25 12:26 pm
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
01-04-25 09:38 pm
Mangalore Correspondent
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
Belthangady Accident, Mangalore: ಯಕ್ಷಗಾನ ಮುಗಿ...
31-03-25 12:26 pm
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
01-04-25 11:07 pm
Mangalore Correspondent
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm
Mangalore Muda Commissioner, FIR, Noor Zahara...
31-03-25 09:29 pm
Mangalore Derlakatte Robbery attempt; ದೇರಳಕಟ್...
30-03-25 08:59 am