ಸ್ನೇಹಿತ ಲಕ್ಸುರಿ ಕಾರು ಖರೀದಿಸಿದ್ದಕ್ಕೆ ಮತ್ಸರ ! ಹಣ ಕೇಳಿ ಕೊಡದಿದ್ದಕ್ಕೆ ಕುತ್ತಿಗೆಯನ್ನೇ ಕೊಯ್ದ !

02-08-21 04:44 pm       Udupi Police   ಕ್ರೈಂ

ಫೈನಾನ್ಸ್ ಮಾಲಕ ಅಜೇಂದ್ರ ಶೆಟ್ಟಿ ಕೊಲೆಗೆ ಪಾಲುದಾರ ಅನೂಪ್ ಶೆಟ್ಟಿಯ ಮತ್ಸರವೇ ಕಾರಣವಾಗಿತ್ತು. ಮೂರು ತಿಂಗಳ ಹಿಂದೆಯೇ ಇವರ ನಡುವೆ ಪಾಲುದಾರಿಕೆ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು.

ಉಡುಪಿ, ಆಗಸ್ಟ್ 2: ಫೈನಾನ್ಸ್ ಮಾಲಕ ಅಜೇಂದ್ರ ಶೆಟ್ಟಿ ಕೊಲೆಗೆ ಪಾಲುದಾರ ಅನೂಪ್ ಶೆಟ್ಟಿಯ ಮತ್ಸರವೇ ಕಾರಣವಾಗಿತ್ತು. ಮೂರು ತಿಂಗಳ ಹಿಂದೆಯೇ ಇವರ ನಡುವೆ ಪಾಲುದಾರಿಕೆ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಆಬಳಿಕ ಪಾಲುದಾರಿಕೆ ವ್ಯವಹಾರವನ್ನು ಕಡಿದುಕೊಂಡಿದ್ದರು. ಆದರೆ, ಇದರ ನಡುವೆಯೇ ಅಜೇಂದ್ರ ಲಕ್ಸುರಿ ಕಾರು ಖರೀದಿಸಿದ್ದು ಅನೂಪ್ ಶೆಟ್ಟಿಯ ಮತ್ಸರಕ್ಕೆ ಕಾರಣವಾಗಿತ್ತು. ಇದೇ ದ್ವೇಷದಲ್ಲಿ ಕೊಲೆ ನಡೆಸಿದ್ದಾನೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಎಸ್ಪಿ ವಿಷ್ಣುವರ್ಧನ್, ಇಬ್ಬರ ನಡುವೆ ವೈಮನಸ್ಸು ಇದ್ದರೂ, ಅನೂಪ್ ಫೈನಾನ್ಸ್ ಕಚೇರಿಗೆ ಬರುತ್ತಿದ್ದ. ಆದರೆ, ಮೊನ್ನೆ ಶುಕ್ರವಾರ ಎಂದಿನಂತೆ ಬಂದಿರಲಿಲ್ಲ. 20 ಸಾವಿರ ಹಣ ಕೇಳುವುದು ಮತ್ತು ಹಣ ಕೊಡದೇ ಇದ್ದರೆ ಕೊಲೆ ಮಾಡುವ ಪ್ಲಾನ್ ಹಾಕಿದ್ದ. ಅದೇ ರೀತಿ 20 ಸಾವಿರ ಹಣ ಕೇಳಿದ್ದಕ್ಕೆ ಅಜೇಂದ್ರ ಶೆಟ್ಟಿ ನಿರಾಕರಿಸಿದ್ದ. ಅದೇ ದ್ವೇಷದಲ್ಲಿ ಅನೂಪ್, ಅಜೇಂದ್ರನ ಕುತ್ತಿಗೆಯನ್ನು ಹರಿತ ಆಯುಧದಿಂದ ಕೊಯ್ದು ಪರಾರಿಯಾಗಿದ್ದಾನೆ.

ಆದರೆ, ಇಲ್ಲಿಂದ ಪರಾರಿಯಾಗುವ ವೇಳೆ ಅಜೇಂದ್ರ ಶೆಟ್ಟಿ ಇತ್ತೀಚೆಗೆ ಖರೀದಿಸಿದ್ದ ಇನ್ನೂ ನಂಬರ್ ಪ್ಲೇಟ್ ಆಗಿರದ ಕಾರಿನಲ್ಲೇ ತೆರಳಿದ್ದಾನೆ. ಕಾರಿನಲ್ಲಿ ಭಟ್ಕಳ, ಕಾರವಾರದ ಮೂಲಕ ಪರಾರಿಯಾಗಿದ್ದು ಅಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕಂಡುಬಂದಿತ್ತು. ಕುಂದಾಪುರ ಮತ್ತು ಬೈಂದೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕೇವಲ 24 ಗಂಟೆಯಲ್ಲಿ ಗೋವಾದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೋವಾದ ಕೋಲ್ವಾ ಬೀಚ್ ನಲ್ಲಿ ಕಾರು ಸಹಿತ ಬಂಧಿಸಿದ್ದು ಕುಂದಾಪುರಕ್ಕೆ ಕರೆತಂದಿದ್ದಾರೆ.

ಗೋವಾದಲ್ಲಿ ತಲೆಮರೆಸಿಕೊಳ್ಳುವ ಉದ್ದೇಶದಿಂದ ಪರಾರಿಯಾಗಿದ್ದ. ಆದರೆ, ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆಗಸ್ಟ್ 9ರ ವರೆಗೆ ಕಸ್ಟಡಿಗೆ ಪಡೆಯಲಾಗಿದೆ. ಕೃತ್ಯವನ್ನು ಒಬ್ಬನೇ ಮಾಡಿದ್ದಾನೆಯೇ ಬೇರೆ ಯಾರಾದ್ರೂ ಸಹಕಾರ ನೀಡಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕಾಗಿದೆ. ಅಲ್ಲದೆ, ಕೃತ್ಯದ ಸಂದರ್ಭದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿದ್ದನೇ ಅನ್ನುವ ಬಗ್ಗೆಯೂ ತನಿಖೆಯಲ್ಲಿ ತಿಳಿದುಬರಬೇಕು ಎಂದು ಎಸ್ಪಿ ಮಾಹಿತಿ ನೀಡಿದರು.

ಕುಂದಾಪುರ ಇನ್ ಸ್ಪೆಕ್ಟರ್ ಗೋಪಿಕೃಷ್ಣ ಮತ್ತು ಬೈಂದೂರು ಇನ್ ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದರು.

ಜುಲೈ 30ರ ರಾತ್ರಿ ಕೋಟೇಶ್ವರದ ಬಳಿಯ ಕಾಳಾವರದಲ್ಲಿ ಫೈನಾನ್ಸ್ ಕಚೇರಿಯಲ್ಲೇ ಅಜೇಂದ್ರ ಶೆಟ್ಟಿ ಕೊಲೆ ನಡೆದಿತ್ತು. ಅಜೇಂದ್ರ ಮತ್ತು ಅನೂಪ್ ಸೇರಿ 2017ರಲ್ಲಿ ಫೈನಾನ್ಸ್ ಆರಂಭಿಸಿದ್ದರು. ವ್ಯವಹಾರ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದಾಗಲೇ ಇವರೊಳಗೆ ಮತ್ಸರ ಎದ್ದಿತ್ತು. ಮೂರು ತಿಂಗಳ ಹಿಂದೆ ಇವರೊಳಗೆ ವೈಮನಸ್ಸು ತಾರಕಕ್ಕೇರಿ, ಪಾಲುದಾರಿಕೆ ಕಡಿದುಕೊಳ್ಳಲು ನಿರ್ಧಾರಕ್ಕೆ ಬಂದಿದ್ದರು. ಆದರೆ, ಅದೇ ನೆಪ ಸ್ನೇಹಿತನ ಕೊಲೆಗೆ ಕಾರಣವಾಯ್ತು. 

ಕೋಟೇಶ್ವರ ; ಫೈನಾನ್ಸ್ ಕಚೇರಿಗೆ ನುಗ್ಗಿ ಯುವಕನ ಕಗ್ಗೊಲೆ, ಹಣಕಾಸು ದ್ವೇಷದಲ್ಲಿ ಕೃತ್ಯ 

ಸ್ನೇಹಿತನಿಂದಲೇ ಕೊಲೆಯಾದ್ನಾ ಫೈನಾನ್ಸ್ ಮಾಲಕ ! ಕೊಲೆಗೈದು ಆತನ ಕಾರಿನಲ್ಲೇ ಎಸ್ಕೇಪ್ ?

Police have arrested Anoop Shetty, partner of Dream Finance, from Goa, in connection with the murder of Ajendra Shetty, owner of the same firm as per the complaint filed by Mahendra Shetty, elder brother of victim. Kundapur police have cracked the murder case within 24 hours of the gruesome act. Ajendra, owner of Dream Finance of Kalavara was murdered in his office on Friday July 30 night. The family members of the victim suspected Anoop as the murderer as they had some differences of late.