ಬ್ರೇಕಿಂಗ್ ನ್ಯೂಸ್
30-09-21 05:02 pm Headline Karnataka News Network ಕ್ರೈಂ
ಬೆಂಗಳೂರು, ಸೆ.30: ಇತ್ತೀಚೆಗೆ ಒಂದೇ ಕುಟುಂಬದ ಐವರು ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದ ಘಟನೆ ಭಾರೀ ಸಂಚಲನ ಸೃಷ್ಟಿಸಿತ್ತು. ಹೀಗೆ ಸಾವು ಕಂಡವರ ಪೈಕಿ, ಒಂಬತ್ತು ತಿಂಗಳ ಮಗುವೂ ಇತ್ತು. ಬೆಡ್ಡಿನಲ್ಲಿ ಮಲಗಿಯೇ ಇದ್ದ ಮಗುವಿನ ಸಾವಿನ ಬಗ್ಗೆ ಸಂಶಯವೂ ಹುಟ್ಟಿತ್ತು. ಮಗುವಿಗೆ ಆಹಾರ ಸಿಗದೆ ನಿತ್ರಾಣಗೊಂಡು ಸಾವನ್ನಪ್ಪಿದ್ದಾಗಿ ಸಂಶಯ ಪಡಲಾಗಿತ್ತು. ಆದರೆ, ಮಗುವಿನ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೇರೆಯದೇ ವರದಿ ಬಂದಿದೆ.
ಮಗು ಉಸಿರು ಕಟ್ಟಿ ಸಾವನ್ನಪ್ಪಿದ್ದಾಗಿ ಪೋಸ್ಟ್ ಮಾರ್ಟಂ ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಸಿಂಧೂರಾಣಿ ಸಾಯೋದಕ್ಕೂ ಮುನ್ನ ಮಗುವನ್ನು ನೇಣಿಗೆ ಹಾಕಿಸುವ ಪ್ರಯತ್ನ ಮಾಡಿದ್ದಾಳೆಯೇ ಎಂಬ ಶಂಕೆ ಮೂಡಿದೆ. ನೇಣಿಗೆ ಹಾಕಿಸಿ, ಆನಂತರ ಬೆಡ್ಡಿನಲ್ಲಿ ಮಲಗಿಸಿದ್ದಾಳೆಯೇ ಅಥವಾ ತಲೆದಿಂಬು ಮುಖಕ್ಕೆ ಇಟ್ಟು ಉಸಿರು ಕಟ್ಟಿಸಿ ಸಾಯಿಸಿದ್ದಾರೆಯೇ ಎಂಬ ಶಂಕೆಯೂ ಕೇಳಿಬಂದಿದೆ.
ಮಗು ಸಾಯೋದಕ್ಕೂ ಮುನ್ನ ಉಸಿರು ಕಟ್ಟಿಸಿದ ಬಗ್ಗೆ ವರದಿಯಿದ್ದು, ಪೊಲೀಸರು ಈ ಕುರಿತ ವರದಿ ಕೇಳಿ ಅಚ್ಚರಿಗೆ ಒಳಗಾಗಿದ್ದಾರೆ. ಸೆ.17ರಂದು ಬೆಂಗಳೂರಿನ ತಿಗಳರಪಾಳ್ಯದಲ್ಲಿ ಘಟನೆ ಬೆಳಕಿಗೆ ಬಂದಿತ್ತು. ಮನೆಯವರು ಸತ್ತು ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಸ್ಥಳೀಯ ಪತ್ರಿಕೆಯೊಂದರ ಸಂಪಾದಕನಾಗಿದ್ದ ಶಂಕರ್ ಎಂಬವರ ಮನೆಯಾಗಿದ್ದು, ಆತನ ಪತ್ನಿ, ಇಬ್ಬರು ಹೆಣ್ಮಕ್ಕಳು ಮತ್ತು ಒಬ್ಬ ಮಗ ನೇಣು ಬಿಗಿದು ಸಾವಿಗೆ ಶರಣಾಗಿದ್ದರು.
ಶಂಕರ್ ವಾರದ ಹಿಂದೆ ಮನೆಯಲ್ಲಿ ಕುಟುಂಬ ಕಲಹ ಉಂಟಾಗಿ ಮನೆ ಬಿಟ್ಟು ಹೋಗಿದ್ದ. ಆನಂತರ, ಅದೇ ಸಿಟ್ಟಿನಲ್ಲಿ ಮದುವೆಯಾಗಿದ್ದರೂ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದ ಇಬ್ಬರು ಹೆಣ್ಮಕ್ಕಳು ಮತ್ತು ಅವಿವಾಹಿತ ಮಗ ಸಾವಿಗೆ ಶರಣಾಗಿದ್ದರು. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಶಂಕರ್ ಅವರ ಅನೈತಿಕ ಸಂಬಂಧ ಮತ್ತು ಮನೆಯವರನ್ನು ನಿರ್ಲಕ್ಷ್ಯ ಮಾಡುತ್ತಿದ್ದ ಕಾರಣ ಸಾವಿಗೆ ಶರಣಾಗಿದ್ದೇವೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಈ ವೇಳೆ, ಮೂರು ವರ್ಷದ ಹೆಣ್ಣು ಮಗು ಮಾತ್ರ ಐದು ದಿನಗಳ ಕಾಲವೂ ಐದು ಶವಗಳ ನಡುವೆ ಬದುಕಿ ಉಳಿದಿದ್ದು, ಪವಾಡ ಎನ್ನುವಂತಾಗಿತ್ತು. ವಾರದ ನಂತರ ಶಂಕರ್, ಮರಳಿ ಮನೆಗೆ ಬಂದು ಲಾಕ್ ಆಗಿದ್ದ ಮನೆಯನ್ನು ಓಪನ್ ಮಾಡಿ ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.
Post mortem report into the death of five family members, including a 9-month-old, in Bengaluru, has revealed that the toddler was suffocated to death, police sources said on Thursday.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm