ಬ್ರೇಕಿಂಗ್ ನ್ಯೂಸ್
13-09-20 05:52 pm Bengaluru Crime Correspondent ಕ್ರೈಂ
ಬೆಂಗಳೂರು, ಸೆಪ್ಟೆಂಬರ್.13: ಕಳೆದ ಆಗಸ್ಟ್ ನಲ್ಲಿ ಅಡಿಕೆ ಉದ್ಯಮಿಯೋರ್ವರ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷ ಜ್ಞಾನ ಪ್ರಕಾಶ್ ಹಾಗು ಅವನಿಗೆ ಕುಮ್ಮಕ್ಕು ನೀಡುತಿದ್ದ ಎಸ್ ಜೆ ಪಾರ್ಕ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ ಬಂಧನವಾಗಿದ್ದರು. ಇದೀಗ ಇದೆ ಪ್ರಕರಣಕ್ಕೆ ಸಂಬಂಧಿಸಿ ಎಸ್ ಜೆ ಪಾರ್ಕ್ ಠಾಣೆಯ ವೃತ್ತ ನಿರೀಕ್ಷಕ ಯೋಗೀಶ್ ಕುಮಾರ್ ಕೂಡ ಶಾಮೀಲಾಗಿದ್ದು ಎಸ್.ಐ ರವರಿಂದ 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಪೊಲೀಸ್ ಕಮಿಷಿನರ್ ಕಮಲ್ ಪಂತ್ ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
ಮೂಲತಃ ಮಡಿಕೇರಿಯವರಾದ ಯೋಗೀಶ್ ಕುಮಾರ್ ಭ್ರಷ್ಟಾಚಾರ ನಿಗ್ರಹ ದಳದ ಮಂಗಳೂರು ಘಟಕದಲ್ಲಿ ಇನ್ಸ್ಪೆಕ್ಟರ್ ಆಗಿದ್ದರು, ಪುತ್ತೂರಿನ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್ ಸಹಿತ ಹಲವರನ್ನು ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಕೆಡವಿದ್ದ ಎಸಿಬಿ ತಂಡದಲ್ಲಿ ಇವರೂ ಒಬ್ಬರಾಗಿದ್ದರು.
ಪ್ರಕರಣದ ಮಾಸ್ಟರ್ ಮೈಂಡ್ ಜ್ಞಾನ ಪ್ರಕಾಶ್ ಮಾನವ ಹಕ್ಕು ಹೆಸರಲ್ಲಿ ಸಂಘಟನೆ ಕಟ್ಟಿಕೊಂಡು ಅಮಾಯಕರನ್ನು ನಂಬಿಸಿ ಹಣ ಪಡೆದು ಲೂಟಿ ಮಾಡುತ್ತಿದ್ದ. ಇವನ ಈ ಕೃತ್ಯಕ್ಕೆ ಸ್ವತಃ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಆತನ ಸಂಬಂಧಿಯೂ ಆಗಿದ್ದ ಜೀವನ್ ಕುಮಾರ್ ಸಾಥ್ ನೀಡುತ್ತಿದ್ದ. ಇದೀಗ ಎಸ್ ಜೆ ಪಾರ್ಕ್ ನ ವೃತ್ತ ನಿರೀಕ್ಷಕ ಯೋಗೀಶ್ ಕುಮಾರ್ ಕೂಡ ಶಾಮೀಲಾಗಿದ್ದನೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಕಂಡಕ್ಟರ್ ಕಂ ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿದ ಜ್ಞಾನಪ್ರಕಾಶ್ ಆಬಳಿಕ ನಿಯೋಜನೆ ಮೇಲೆ ವಿಧಾನಸೌಧದ ಹಣಕಾಸು ಇಲಾಖೆಯಲ್ಲೂ ಕೆಲ ಸಮಯ ಚಾಲಕನಾಗಿ ಕೆಲಸ ಮಾಡಿದ್ದ. ಸಚಿವರಾಗಿದ್ದ ಆರ್.ವಿ ದೇಶಪಾಂಡೆ, ಸದಾನಂದ ಗೌಡ, ಟಿಬಿ ಜಯಚಂದ್ರ ಸೇರಿ ಹಲವರ ಬಳಿ ಚಾಲಕನಾಗಿ ಕೆಲಸ ಮಾಡಿದ್ದಲ್ಲದೆ, ಆನಂತರ ಅದೇ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಜನಜಾಗೃತಿ ಸಮಿತಿ ಮಾಡಿಕೊಂಡು ಸದಸ್ಯರಾಗಿ ಬರುವ ಮಹಿಳೆಯರನ್ನೂ ಬ್ಲಾಕ್ ಮೇಲ್ ಕೂಪಕ್ಕೆ ತಳ್ಳುತ್ತಿದ್ದ. ನಂಬಿಸಿ ಮೋಸ ಮಾಡಿ ಅವರಿಂದಲೇ ಹಣ ಗಳಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಜ್ಞಾನ ಪ್ರಕಾಶ್ ಅರೆಸ್ಟ್ ಆದ ನಂತರ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಇವನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಹಿನ್ನಲೆ: ತುಮಕೂರಿನ ತೆಂಗು ಅಡಕೆ ವ್ಯಾಪಾರಿ ಮೋಹನ್ ಎಂಬುವರು ಚಿಕ್ಕಪೇಟೆ ಬಳಿ ಇರುವ ಅಂಗಡಿಯೊಂದಕ್ಕೆ ಅಡಕೆ ಮಾರಾಟ ಮಾಡಿದ್ದು, ಬಾಕಿ ಹಣ ತರುವಂತೆ ಕೆಲಸಗಾರರಿಗೆ ಸೂಚಿಸಿದ್ರು. ಆಗಸ್ಟ್ 19 ರಂದು ಹಣ ಪಡೆದು ಸಿಟಿ ಮಾರ್ಕೆಟ್ ಬಳಿ ಕಾರಿನಲ್ಲಿ ಬರುತ್ತಿದ್ದ ವೇಳೆ ಎಸ್ .ಜೆ. ಪಾರ್ಕ್ ಸಬ್ ಇನ್ಸ್ಪೆಕ್ಟರ್ ಜೀವನ್ ಕುಮಾರ್ ಹಾಗೂ ಜ್ಞಾನ ಪ್ರಕಾಶ್ ತಮಡ ಅವರನ್ನು ಅಡ್ಡಗಟ್ಟಿ ಕಿಡ್ನಾಪ್ ಮಾಡಿ 26 ಲಕ್ಷ ರೂ. ಹಣ ದೋಚಿದ್ದರು. ಈ ಕುರಿತು ಸಿ.ಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಿದ್ದರು. ನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ಸ್‌ಪೆಕ್ಟರ್ ಯೋಗೇಶ್ ಕೂಡ ಪಾಲುದಾರರಾಗಿರುವ ವಿಚಾರ ಬಯಲಾಗಿದೆ. ಸದ್ಯಕ್ಕೆ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಶೋಧ ಮುಂದುವರೆದಿದೆ.
ಇದನ್ನೂ ಓದಿ: ಮಾನವ ಹಕ್ಕು ಸಂಘಟನೆ ಹೆಸರಲ್ಲಿ ದೋಖಾ ; ಎಸ್ಐ ಜೊತೆ ಸೇರಿ ದರೋಡೆ, ಸಿಕ್ಕಿಬಿದ್ದ ಖದೀಮರು !!
14-02-25 10:48 pm
HK News Desk
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನವನ್ನು ಒದ್ದು ಕಿತ್ಕೋ...
14-02-25 06:16 pm
Praveen Subhash, Navy Jawan, Misfire: ಆಕಸ್ಮಿಕ...
14-02-25 05:45 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm