ಬ್ರೇಕಿಂಗ್ ನ್ಯೂಸ್
27-12-21 10:33 pm Mangalore Correspondent ಕ್ರೈಂ
ಮಂಗಳೂರು, ಡಿ.27 : ಕ್ರಿಸ್ತಿಯನ್ ಯುವತಿಯನ್ನು ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡುತ್ತಿದ್ದ ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ನಾಮ್ಕೆವಾಸ್ತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಬಳಿಯ ಕೃಷ್ಣಾಪುರದ ನಿವಾಸಿ, ಮಹಮ್ಮದ್ ಸಿದ್ದಿಕ್ (36) ಬಂಧಿತ. ಆರೋಪಿ ಸಿದ್ದಿಕ್ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ಯುತ್ತಿದ್ದು ಡ್ರಗ್ಸ್ ಕೊಟ್ಟು ನಿರಂತರ ಲೈಂಗಿಕವಾಗಿ ದೌರ್ಜನ್ಯ ನಡೆಸುತ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದರೆ ತನಗೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಜಿಗುಪ್ಸೆಗೊಳಗಾದ ತನ್ನ ಗಂಡ ತೀರಿಕೊಂಡಿದ್ದಾರೆ. ಆತನ ಬೆದರಿಕೆಯಿಂದಾಗಿ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಆತನಿಂದಾಗಿ ತನಗೆ ಜೀವ ಭಯವಿದೆ ಎಂಬುದಾಗಿ ಯುವತಿ ತಾಯಿ ದೂರಿನಲ್ಲಿ ತಿಳಿಸಿದ್ದರು. ಲೈಂಗಿಕ ದೌರ್ಜನ್ಯ ಎಸಗಿ, ನಿರಂತರ ಅತ್ಯಾಚಾರ ನಡೆಸುತ್ತಿರುವುದು ದೂರಿನಲ್ಲಿ ಉಲ್ಲೇಖ ಆಗಿದ್ದರೂ, ಪೊಲೀಸರು ಮಾನಹಾನಿ ಯತ್ನ ಎನ್ನುವಷ್ಟರ ಮಾತ್ರಕ್ಕೆ ಪ್ರಕರಣ ದಾಖಲಿಸಿರುವುದು ಅನುಮಾನ ಮೂಡಿಸಿದೆ.
ಐಪಿಸಿ 354 ಮತ್ತು 506 ಅಡಿ ಅತ್ಯಾಚಾರ ಯತ್ನ ಮತ್ತು ಜೀವ ಬೆದರಿಕೆ ಕೇಸು ಹಾಕಿ ಪೊಲೀಸರು ಆರೋಪಿಯ ಬಗ್ಗೆ ಮೃದು ಧೋರಣೆ ತಳೆದಿದ್ದಾರೆಯೇ ಅನ್ನುವ ಪ್ರಶ್ನೆ ಎದುರಾಗಿದೆ. ಆರೋಪಿ ಮಹಮ್ಮದ್ ಸಿದ್ದಿಕ್ ಈಗಾಗಲೇ ಮುಂಬೈ, ಗೋವಾ ಮತ್ತು ಮಂಗಳೂರಿನಲ್ಲಿ ಮೂವರು ಹೆಂಡತಿಯರನ್ನು ಹೊಂದಿದ್ದಾನೆ. ಅಲ್ಲದೆ, ಹಿಂದಿನಿಂದಲೂ ಡ್ರಗ್ ಪೆಡ್ಲರ್ ಆಗಿ ಗುರುತಿಸಿಕೊಂಡಿದ್ದು ಆತನ ವಿರುದ್ಧ ಹಲವು ಕಡೆ ಪ್ರಕರಣ ದಾಖಲಾಗಿದೆ.
ಕೆಲವು ಮೂಲಗಳ ಪ್ರಕಾರ, ಮಹಮ್ಮದ್ ಸಿದ್ದಿಕ್ ಸುರತ್ಕಲ್ ಭಾಗದಲ್ಲಿ 13 ಲಾರಿಗಳನ್ನು ಇಟ್ಟುಕೊಂಡಿದ್ದು, ರೈಲ್ವೇಯಲ್ಲಿ ರೋರೋ ಸರ್ವಿಸ್ ಮೂಲಕ ವಿವಿಧ ಕಡೆಗಳಿಗೆ ವಸ್ತುಗಳ ಸಾಗಾಟಕ್ಕೆ ಲಾರಿಯನ್ನು ಬಳಸುತ್ತಿದ್ದ. ಇದೇ ಲಾರಿಯಲ್ಲಿ ವಿವಿಧ ನಗರಗಳ ಮಧ್ಯೆ ಡ್ರಗ್ಸ್ ಸಾಗಾಟವನ್ನೂ ಗುಪ್ತವಾಗಿ ಮಾಡುತ್ತಿದ್ದ ಎನ್ನಲಾಗುತ್ತಿದೆ. ಇಂಥ ಕ್ರಿಮಿನಲ್ ಆಗಿರುವ ಮಹಮ್ಮದ್ ಸಿದ್ದಿಕ್, ಒಬ್ಬಳು ಅಮಾಯಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ನಾಲ್ಕು ವರ್ಷಗಳಿಂದ ಡ್ರಗ್ಸ್ ಕೊಟ್ಟು ಲೈಂಗಿಕವಾಗಿ ದೌರ್ಜನ್ಯ ನಡೆಸುತ್ತಿರುವುದು ಆಕೆಯ ತಾಯಿ ನೀಡಿರುವ ದೂರಿನಲ್ಲಿದೆ. ಆದರೆ, ಪೊಲೀಸರು ತಾಯಿ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸದೆ ಮಾನಹಾನಿ ಎಂದು ಬಿಂಬಿಸಿ ಆರೋಪಿಯನ್ನು ಬಚಾವ್ ಮಾಡಲು ನೋಡಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮತ್ತು ಪೂರೈಸುತ್ತಿದ್ದ ಬಗ್ಗೆಯೂ ಸುರತ್ಕಲ್ ಠಾಣೆಯಲ್ಲಿ ಸಿದ್ದಿಕ್ ವಿರುದ್ಧ ಎರಡು ಪ್ರಕರಣ ದಾಖಲಾಗಿತ್ತು.

ಇದಲ್ಲದೆ, ಸಂತ್ರಸ್ತ ಯುವತಿ ಮತ್ತು ಆಕೆಯ ತಾಯಿಯ ಮನೆ ಉರ್ವಾ ಠಾಣೆ ವ್ಯಾಪ್ತಿಯಲ್ಲಿದ್ದು, ಪೊಲೀಸರು ಸುರತ್ಕಲ್ ಠಾಣೆಯಲ್ಲಿ ಕರೆಸಿ ಕೇಸು ದಾಖಲಿಸಿದ್ದೇ ಅನುಮಾನ ಮೂಡಿಸಿದೆ. ಪೊಲೀಸರು ಮನಸ್ಸು ಮಾಡುತ್ತಿದ್ದರೆ ತಾಯಿ ಮತ್ತು ಯುವತಿಯಿಂದಲೇ ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಬಹುದಿತ್ತು. ಅತ್ಯಾಚಾರ, ಡ್ರಗ್ಸ್ ಕೊಟ್ಟು ಶೋಷಣೆ ಆರೋಪದಲ್ಲಿ ಗಂಭೀರ ಸೆಕ್ಷನ್ ದಾಖಲು ಮಾಡಬಹುದಿತ್ತು. ಡ್ರಗ್ಸ್ ಕೊಟ್ಟು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದುದರಿಂದ ಮತ್ತು ಮೂರ್ನಾಲ್ಕು ದಿನ ಯುವತಿಯನ್ನು ಕೂಡಿಹಾಕುತ್ತಿದ್ದರಿಂದ ಇತರ ಯುವಕರು ಕೂಡ ಸೇರಿಕೊಂಡು ಗ್ಯಾಂಗ್ ರೇಪ್ ನಡೆಸುತ್ತಿದ್ದರೇ ಎನ್ನುವ ಬಗ್ಗೆ ವಿಚಾರಣೆ ನಡೆಸಿ ಅದರ ಬಗ್ಗೆ ಹೆಚ್ಚುವರಿಯಾಗಿ ಕೇಸು ದಾಖಲು ಮಾಡಿಕೊಳ್ಳುವುದಕ್ಕೂ ಅವಕಾಶ ಇದೆ.
ಯುವತಿ ತಾಯಿ, ವಿಶ್ವ ಹಿಂದು ಪರಿಷತ್ ನಾಯಕರಲ್ಲಿ ನೀಡಿರುವ ಪ್ರಕಾರ ನಡುರಾತ್ರಿಯಲ್ಲಿ ನಾಲ್ಕೈದು ಮಂದಿ ಯುವಕರು ಬಂದು ಆಕೆಯನ್ನು ಕರೆದೊಯ್ಯುತ್ತಿದ್ದರು. ನಿರಂತರ ಅಮಲು ಪದಾರ್ಥ ಕೊಟ್ಟು ಆಕೆಯನ್ನು ಡ್ರಗ್ಸ್ ಚಟ ಹತ್ತಿಸಿಕೊಳ್ಳುವಂತೆ ಮಾಡಲಾಗಿತ್ತು ಎಂದಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿಲ್ಲ. ವಿಶೇಷ ಅಂದ್ರೆ, ಇಷ್ಟೊಂದು ಕ್ರೂರವಾಗಿ ನಡೆದುಕೊಂಡಿರುವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿ, ಪೊಲೀಸ್ ಕಸ್ಟಡಿಯನ್ನೇ ಪಡೆಯದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಮಹಮ್ಮದ್ ಸಿದ್ದಿಕ್ ಸುರತ್ಕಲ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಭಾವಿಯಾಗಿದ್ದು, ಡ್ರಗ್ಸ್ ಡೀಲರ್ ಅನ್ನುವುದು ಗೊತ್ತಿದ್ದರೂ, ಕಸ್ಟಡಿ ಪಡೆದು ವಿಚಾರಣೆ ನಡೆಸಲು ಮುಂದಾಗದಿರುವುದು ಪೊಲೀಸರ ನಡೆಯ ಬಗ್ಗೆ ಸಂಶಯಿಸುವಂತಾಗಿದೆ.
ಇತ್ತೀಚೆಗೆ ಕಾನೂನು ವಿದ್ಯಾರ್ಥಿನಿ ವಕೀಲನ ವಿರುದ್ಧ ನೀಡಿದ್ದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಪೊಲೀಸರು 354, 376, 511 ಹೀಗೆ ಗಂಭೀರ ಸೆಕ್ಷನ್ ಹಾಕಿದ್ದರು. ವಿದ್ಯಾರ್ಥಿನಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡದೇ ಇದ್ದರೂ, ಕೆಲವು ವಕೀಲರ ಪಿತೂರಿಯಿಂದಾಗಿ ಪೊಲೀಸರು ಉದ್ದೇಶಪೂರ್ವಕವಾಗಿ ಅತ್ಯಾಚಾರ ಕೇಸು ದಾಖಲಿಸಿದ್ದರು. ಆದರೆ ಇಲ್ಲೊಬ್ಬ ಹಳೆ ಕ್ರಿಮಿನಲ್ ಆಗಿರುವ ವ್ಯಕ್ತಿ, ಯುವತಿಯನ್ನು ಕರೆದೊಯ್ದು ನಿರಂತರ ಅತ್ಯಾಚಾರ ಎಸಗಿ ದುರ್ಬಳಕೆ ಮಾಡುತ್ತಿದ್ದರೂ, ಆಕೆಯ ತಾಯಿಗೆ ಜೀವ ಬೆದರಿಕೆ ಒಡ್ಡಿ ಮಾನಸಿಕ ಹಿಂಸೆ ನೀಡುತ್ತಿದ್ದರೂ, ಅದಕ್ಕೆ ಭಾರತದ ಕಾನೂನು ಸಂಹಿತೆಯಡಿ ಸೆಕ್ಷನ್ ಗಳೇ ಕಂಡುಬರದೇ ಇರುವುದು ವಿಪರ್ಯಾಸ.
Mangalore police show leniency in Christian girl being cheated of marriage after sex and drugs. A Catholic girl from bejai has been cheated of Marriage by a Muslim man from Surathkal. The girls mother has alleged that the accused has threatened of killing mother.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm