ಬ್ರೇಕಿಂಗ್ ನ್ಯೂಸ್
03-01-22 12:26 pm HK Desk news ಕ್ರೈಂ
ನವದೆಹಲಿ, ಜ.3 : ಮುಸ್ಲಿಮ್ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬುಲ್ಲಿ ಬಾಯ್ ಏಪ್ ಸೃಷ್ಟಿಸಿದ ಖದೀಮರ ಪತ್ತೆಗೆ ದೆಹಲಿ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಬುಲ್ಲಿ ಬಾಯ್ ಏಪ್ ಸೃಷ್ಟಿಸಿದ ಬಗ್ಗೆ ಮೊದಲು ಟ್ವೀಟ್ ಮಾಡಿದ ವ್ಯಕ್ತಿಯ ಬಗ್ಗೆ ದೆಹಲಿ ಪೊಲೀಸರು ಟ್ವಿಟರ್ ಕಂಪನಿಯಿಂದ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಗಿಟ್ ಹಬ್ ಪ್ಲಾಟ್ ಫಾರಂ ನಿಂದ ಬುಲ್ಲಿ ಬಾಯ್ ಸೃಷ್ಟಿಕರ್ತನ ಬಗ್ಗೆಯೂ ಮಾಹಿತಿ ಕೇಳಿದ್ದಾರೆ.
ಆರು ತಿಂಗಳ ಹಿಂದೆ ಸುಳ್ಳಿ ಡೀಲ್ಸ್ ಹೆಸರಲ್ಲಿ ಇದೇ ರೀತಿ ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಅಪ್ಲೋಡ್ ಮಾಡಿ ಹರಾಜಿಗಿಡುವ ಯತ್ನ ನಡೆದಿತ್ತು. ಆನಂತರ, ಎರಡು ದಿನಗಳಲ್ಲಿ ಏಪ್ ಬ್ಲಾಕ್ ಆಗಿತ್ತು. ಇದೀಗ ಬುಲ್ಲಿ ಬಾಯ್ ಹೆಸರಲ್ಲಿ ಅದೇ ರೀತಿ ನೂರಕ್ಕೂ ಹೆಚ್ಚು ಮುಸ್ಲಿಮ್ ಮಹಿಳೆಯರ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಿಂದ ತೆಗೆದು, ಅವನ್ನು ಏಪ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಮಹಿಳೆಯರನ್ನು ಮಾರಾಟಕ್ಕಿಡಲಾಗಿದೆ ಎಂದು ಹೇಳಿ ಪೋಸ್ಟ್ ಮಾಡಿದ್ದು, ದೆಹಲಿಯಲ್ಲಿ ಭಾರೀ ವಿವಾದ ಸೃಷ್ಟಿಸಿದೆ.
ಇದೇ ವೇಳೆ, ಮುಂಬೈ ಮತ್ತು ಹೈದ್ರಾಬಾದ್ ಸೈಬರ್ ಕ್ರೈಮ್ ಪೊಲೀಸರು ಮುಸ್ಲಿಮ್ ಮಹಿಳೆಯರಿಗೆ ಆನ್ಲೈನ್ ಕಿರರುಕುಳ ನೀಡಿದ ವಿಚಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಟಿ ಮಿನಿಸ್ಟರ್ ಅಶ್ವಿನ್ ವೈಷ್ಣವ್, ಆರೋಪಿಗಳನ್ನು ಹೆಡೆಮುರಿ ಕಟ್ಟುವುದಾಗಿ ಟ್ವೀಟ್ ಮಾಡಿದ್ದಾರೆ.
ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಸಾರ್ವಜನಿಕ ಹರಾಜಿಗಿಟ್ಟ GitHub ; ದೆಹಲಿಯಲ್ಲಿ ಕಿಡಿ ಎಬ್ಬಿಸಿದ ಸೋಶಿಯಲ್ ಮೀಡಿಯಾ !
The NCW has written to the Delhi Police to expedite its action in the case against the 'Bulli Bai' app, floated for trolling and harassing the victims, to ensure that such crimes do not recur.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm