ಬ್ರೇಕಿಂಗ್ ನ್ಯೂಸ್
03-01-22 10:34 pm Mangalore Correspondent ಕ್ರೈಂ
Photo credits : Headline Karnataka
ಮಂಗಳೂರು, ಜ.3 : ಐಸಿಸ್ ಉಗ್ರವಾದಿ ಗುಂಪಿನ ಜೊತೆಗೆ ನೆಟ್ವರ್ಕ್ ಹೊಂದಿರುವ ಆರೋಪದಲ್ಲಿ ಎನ್ಐಎ ಅಧಿಕಾರಿಗಳು ಉಳ್ಳಾಲದ ಮಹಿಳೆ ದೀಪ್ತಿ ಮರಿಯಂ ಎಂಬವಳನ್ನು ಬಂಧಿಸಿದ್ದು, ಮಂಗಳೂರಿನ 7ನೇ ಜೆಎಂಎಫ್ ಕೋರ್ಟಿನಲ್ಲಿ ಹಾಜರುಪಡಿಸಿದ್ದಾರೆ.
ಕೋರ್ಟ್ ನಲ್ಲಿ ಹಾಜರು ಪಡಿಸಿ ಟ್ರಾನ್ಸಿಟ್ ವಾರೆಂಟ್ ಪಡೆದ ಅಧಿಕಾರಿಗಳು, ಮಂಗಳೂರಿನಿಂದ ದೆಹಲಿಗೆ ಕರೆದೊಯ್ಯಲು ಅನುಮತಿ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಮಹಿಳೆಯನ್ನು ದೆಹಲಿಗೆ ಒಯ್ಯುತ್ತಿರುವುದಾಗಿ ಹೇಳಿರುವ ಅಧಿಕಾರಿಗಳು, ಆಕೆಯ ವಿರುದ್ಧ ಸಂಗ್ರಹಿಸಿರುವ ಇಲೆಕ್ಟ್ರಾನಿಕ್ ಸಾಕ್ಷ್ಯಗಳ ಬಗ್ಗೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದಾರೆ.



ಎನ್ಐಎ ದೆಹಲಿ ವಿಭಾಗದ ಎಎಸ್ಪಿ ಕೃಷ್ಣಕುಮಾರ್ ನೇತೃತ್ವದ ಮೂವರು ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಪುತ್ರ ಅಬ್ದುರ್ರಹ್ಮಾನ್ ಬಾಷಾ ಮನೆಗೆ ಆಗಮಿಸಿತ್ತು. ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಇದೇ ಮನೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುರ್ ರಹ್ಮಾನ್ ಎಂಬಾತನನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ಅದೇ ಮನೆಯಲ್ಲಿದ್ದ ಬಾಷಾ ಅವರ ಇನ್ನೊಬ್ಬ ಪುತ್ರ ಅನಾಸ್ ಎಂಬಾತನ ಪತ್ನಿ ದೀಪ್ತಿ ಅಲಿಯಾಸ್ ಮರಿಯಂಳನ್ನು ವಿಚಾರಣೆ ನಡೆಸಿದ್ದರು. ಅಲ್ಲದೆ, ಆಕೆ ಬಳಸುತ್ತಿದ್ದ ಲ್ಯಾಪ್ಟಾಪ್, ಮೊಬೈಲ್ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿದ್ದರು.




ಮೊಬೈಲ್ ಸಂಪರ್ಕ ಮತ್ತಿತರ ಇಲೆಕ್ಟ್ರಾನಿಕ್ ಸಾಕ್ಷ್ಯಗಳ ಬಗ್ಗೆ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ಆಕೆಯ ಬಗ್ಗೆ ಸಂಶಯ ಕಂಡುಬಂದಿದ್ದರಿಂದ ಮತ್ತೆ ಉಳ್ಳಾಲಕ್ಕೆ ಬಂದು ಮರಿಯಂಳನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನದ ವರೆಗೂ ಆಕೆಯನ್ನು ಮನೆಯಲ್ಲೇ ವಿಚಾರಣೆ ನಡೆಸಿದ ಅಧಿಕಾರಿಗಳು, ವಶಕ್ಕೆ ಪಡೆದಿರುವ ಇಲೆಕ್ಟ್ರಾನಿಕ್ ಡಾಟಾ ಮತ್ತು ಆಕೆ ನೀಡಿರುವ ಮಾಹಿತಿ ತಾಳೆಯಾಗಿದ್ದರಿಂದ ಬಂಧಿಸಿದ್ದಾರೆ ಎನ್ನುವ ಮಾಹಿತಿಗಳಿವೆ. ದೀಪ್ತಿ ಮರಿಯಂ ಒಂದು ವರ್ಷದ ಸಣ್ಣ ಮಗು ಮತ್ತು ಇನ್ನೊಂದು ದೊಡ್ಡ ಮಗುವನ್ನು ಹೊಂದಿದ್ದು, ಮಕ್ಕಳನ್ನು ಗಂಡನ ವಶಕ್ಕೊಪ್ಪಿಸಿ ಎನ್ಐಎ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೊರಟಿದ್ದಾಳೆ.


ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬೆಂಗಳೂರು, ಮಂಗಳೂರು, ಜಮ್ಮು ಕಾಶ್ಮೀರದ ನಾಲ್ಕು ಕಡೆ ಏಕಕಾಲದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಬೆಂಗಳೂರು, ಮಂಗಳೂರಿನಲ್ಲಿ ತಲಾ ಒಬ್ಬ ಮತ್ತು ಜಮ್ಮು ಕಾಶ್ಮೀರದಲ್ಲಿ ಇತರ ಮೂವರನ್ನು ಬಂಧಿಸಲಾಗಿತ್ತು. ಬಂಧಿತರ ನಡುವೆ ಉಗ್ರವಾದಕ್ಕೆ ಸಂಬಂಧಿಸಿ ಇಂಟರ್ ಲಿಂಕ್ ಇತ್ತು ಅನ್ನೋದು ತಿಳಿದುಬಂದಿತ್ತು.
NIA raids in Ullal Mangalore Deepthi Marla arrested by NIA taken to custody to Delhi. NIA officials have raided the house of B M Basha, son of former MLA of Ullal B M Idinabba once again. Krisha Kumar, DSP assistant investigating officer, NIA Delhi along with Ajay Singh PI and Monika Dhikwal arrested Basha’s daughter-in-law Deepthi Marla alias Mariyam on Monday January 3.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm