ಬ್ರೇಕಿಂಗ್ ನ್ಯೂಸ್
09-01-22 08:14 pm HK Desk news ಕ್ರೈಂ
ನವದೆಹಲಿ, ಜ.9 : ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದ ಸುಳ್ಳಿ ಡೀಲ್ಸ್ ಏಪ್ಸ್ ಸೃಷ್ಟಿಕರ್ತ ಎನ್ನಲಾದ ವ್ಯಕ್ತಿಯನ್ನು ದೆಹಲಿ ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಿವಾಸಿ ಓಂಕಾರೇಶ್ವರ್ ಠಾಕೂರ್ (28) ಬಂಧಿತ. ಬಿಸಿಎ ಪದವೀಧರನಾಗಿದ್ದ ಓಂಕಾರೇಶ್ವರ್, ಟ್ವಿಟರ್ ನಲ್ಲಿ ಹೆಚ್ಚು ಸಕ್ರಿಯನಾಗಿದ್ದ. ಜಾಲತಾಣದಲ್ಲಿ ಟ್ರೇಡ್ ಗ್ರೂಪ್ ಮಾಡಿಕೊಂಡಿದ್ದ ಆತ, ಇದಕ್ಕೂ ಹಿಂದೆ ಮುಸ್ಲಿಂ ಯುವತಿಯರನ್ನು ಅಣಕಿಸುವ ರೀತಿಯ ಐಡಿಯಾ ಷೇರ್ ಮಾಡಿದ್ದ. ಗಿಟ್ ಹಬ್ ಪ್ಲಾಟ್ ಫಾರ್ಮ್ ನಲ್ಲಿ ಕೋಡ್ ಸೃಷ್ಟಿಸಿ, ಅದರಲ್ಲಿ ಎಲ್ಲರಿಗೂ ಕಮೆಂಟ್ ಮಾಡಲು ಅವಕಾಶ ನೀಡಿದ್ದ. ಗ್ರೂಪ್ ಸದಸ್ಯರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಜಾಲತಾಣದಿಂದ ತೆಗೆದು ಗ್ರೂಪ್ ನಲ್ಲಿ ಷೇರ್ ಮಾಡಿದ್ದರು.
ಆ ಫೋಟೋಗಳನ್ನು ತೆಗೆದು ಓಂಕಾರೇಶ್ವರ್ ತಾನು ಸೃಷ್ಟಿಸಿದ ಸುಳ್ಳಿ ಡೀಲ್ಸ್ ಏಪ್ ನಲ್ಲಿ ಅಪ್ಲೋಡ್ ಮಾಡಿದ್ದ. ಆನಂತರ, ತನ್ನ ಟ್ವಿಟರ್ ಖಾತೆಯಲ್ಲಿ ಸುಳ್ಳಿ ಏಪ್ಸ್ ಅನ್ನು ಮೊದಲ ಬಾರಿಗೆ ಷೇರ್ ಮಾಡಿದ್ದ ಎಂದು ದೆಹಲಿ ವಿಶೇಷ ಪೊಲೀಸ್ ತಂಡದ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.
ಇತ್ತೀಚೆಗೆ ಸುಳ್ಳಿ ಡೀಲ್ಸ್ ಮಾದರಿಯಲ್ಲೇ ಬುಲ್ಲಿ ಬಾಯ್ಸ್ ಎನ್ನುವ ಹೆಸರಲ್ಲಿ ಏಪ್ ಸೃಷ್ಟಿಸಿ ವಿವಾದ ಉಂಟಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ಅದರಲ್ಲಿ ಅಸ್ಸಾಂನಲ್ಲಿ ಬಂಧಿಸಲ್ಪಟ್ಟ 22 ವರ್ಷದ ನೀರಜ್ ಬಿಷ್ಣೋಯಿ ಪ್ರಮುಖನಾಗಿದ್ದು, ಆತನ ತನಿಖೆಯಲ್ಲಿ ಓಂಕಾರೇಶ್ವರ ಠಾಕೂರ್ ಮಾಹಿತಿ ತಿಳಿದುಬಂದಿತ್ತು. ಬುಲ್ಲಿ ಬಾಯ್ಸ್ ಜನವರಿ 1ರಂದು ಬೆಳಕಿಗೆ ಬಂದಿದ್ದರೆ, ಸುಳ್ಳಿ ಡೀಲ್ಸ್ ಆರು ತಿಂಗಳ ಹಿಂದೆ ಬಯಲಿಗೆ ಬಂದಿತ್ತು. ಎರಡೂ ಏಪ್ ಗಳಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರಿಗೆ ಅರಿವಿಲ್ಲದಂತೆ ಜಾಲತಾಣದಿಂದ ತೆಗೆದು ಹರಾಜಿಗೆ ಹಾಕಲಾಗಿತ್ತು.
ಮುಸ್ಲಿಂ ಮಹಿಳೆಯರ ಫೋಟೋ ಹರಾಜು ಪ್ರಕರಣ ; ಬೆಂಗಳೂರಿನ ಹುಡುಗ, ಉತ್ತರಾಖಂಡದ ಮಹಿಳೆ ಬಂಧನ
ಮುಸ್ಲಿಮ್ ಮಹಿಳೆಯರ ಹರಾಜು ಪ್ರಕರಣ ; ಬೆಂಗಳೂರಿನಲ್ಲಿ ಶಂಕಿತ ಆರೋಪಿ ವಶಕ್ಕೆ
ಮುಸ್ಲಿಂ ಮಹಿಳೆಯರ ಹರಾಜು ; ಬುಲ್ಲಿ ಬಾಯ್ ಬಗ್ಗೆ ಟ್ವಿಟರ್ ಬಳಿ ಮಾಹಿತಿ ಕೇಳಿದ ದೆಹಲಿ ಪೊಲೀಸರು
ಮುಸ್ಲಿಂ ಮಹಿಳೆಯರ ಫೋಟೋ ಕದ್ದು ಸಾರ್ವಜನಿಕ ಹರಾಜಿಗಿಟ್ಟ GitHub ; ದೆಹಲಿಯಲ್ಲಿ ಕಿಡಿ ಎಬ್ಬಿಸಿದ ಸೋಶಿಯಲ್ ಮೀಡಿಯಾ !
ಮುಸ್ಲಿಂ ಮಹಿಳೆಯರ ಬುಲ್ಲಿ ಬಾಯ್ ಬಳಿಕ ಹಿಂದು ಮಹಿಳೆಯರೇ ಟಾರ್ಗೆಟ್ ಆಗಿರುವ ಟೆಲಿಗ್ರಾಂ ಚಾನೆಲ್ ಪತ್ತೆ !
Delhi Police on Sunday arrested a man from Madhya Pradesh who is allegedly the creator of the application ‘Sulli Deals’ which listed Muslim women for ‘auction’ with photographs sourced without permission and doctored.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm