ಭಾರತದಲ್ಲಿ 200-MP ಕ್ಯಾಮೆರಾದೊಂದಿಗೆ Motorola Edge 30 Ultra ರಿಲೀಸ್!..ಬೆಲೆ ಎಷ್ಟು ಗೊತ್ತಾ?

13-09-22 07:39 pm       Source: Vijayakarnataka   ಡಿಜಿಟಲ್ ಟೆಕ್

ನೂತನ Motorola Edge 30 Ultra ಸ್ಮಾರ್ಟ್‌ಫೋನಿನಲ್ಲಿ 144Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.67-ಇಂಚಿನ ಫುಲ್‌ HD+ (1,080x2,400 ಪಿಕ್ಸೆಲ್‌ಗಳು) ಪೋಲ್ಡ್ ಕರ್ವ್ ಡಿಸ್‌ಪ್ಲೇ...

ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ 200-ಮೆಗಾಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯದ Motorola Edge 30 Ultra ಸ್ಮಾರ್ಟ್‌ಫೋನ್ ದೇಶದಲ್ಲಿಂದು ಬಿಡುಗಡೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದ್ದ ಅದೇ ವೈಶಿಷ್ಟ್ಯಗಳಲ್ಲಿ ದೇಶದಲ್ಲಿಯೂ Motorola Edge 30 Ultra ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, Qualcomm Snapdragon 8+ Gen 1 ಪ್ರೊಸೆಸರ್, 125W ಸಾಮರ್ಥ್ಯದ ಫಾಸ್ಟ್‌ಚಾರ್ಜರ್, 144Hz ರಿಫ್ರೆಶ್ ರೇಟ್ ಮತ್ತು IP52 ರೇಟಿಂಗ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ Motorola Edge 30 Ultra ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

Motorola Edge 30 Ultra ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Motorola Edge 30 Ultra ಸ್ಮಾರ್ಟ್‌ಫೋನಿನಲ್ಲಿ 144Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.67-ಇಂಚಿನ ಫುಲ್‌ HD+ (1,080x2,400 ಪಿಕ್ಸೆಲ್‌ಗಳು) ಪೋಲ್ಡ್ ಕರ್ವ್ ಡಿಸ್‌ಪ್ಲೇ ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು HDR10+, DCI-P3 ಕಲರ್ ಗ್ಯಾಮೆಟ್ ಮತ್ತು 1250nits ಬ್ರೈಟ್‌ನೆಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಪೋಲ್ಡ್ ಕರ್ವ್ ಡಿಸ್‌ಪ್ಲೇಯು ಎಡ್ಜ್ ಲೈಟಿಂಗ್ ಹೊಂದಿದ್ದು, ಇದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚುಗಳ ಮೂಲಕ ನೋಟಿಫಿಕೇಷನ್ ಮತ್ತು ಕರೆಗಳು ಬಂದಾಗ ಲೈಟ್ ಬ್ಲಿಂಕ್ ಮಾಡುತ್ತದೆ. ಹುಡ್ ಅಡಿಯಲ್ಲಿ, Motorola Edge 30 Ultra ಸ್ಮಾರ್ಟ್‌ಫೋನ್ 8GB LPDDR5 RAM ಮತ್ತು 128GB UFS 3.1 ಮೆಮೊರಿ ಜೊತೆಗೆ Qualcomm Snapdragon 8+ Gen 1 SoC ಪ್ರೊಸೆಸರ್ ಹೊಂದಿದೆ.

Motorola Edge 30 Fusion & Edge 30 Ultra: Thrilling 'The Next Edge'

Motorola Edge 30 Ultra ಸ್ಮಾರ್ಟ್‌ಫೋನಿನಲ್ಲಿ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸಂವೇದಕ ಇರುವ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು ಅಲ್ಟ್ರಾ-ವೈಡ್ ಆಂಗಲ್ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸಂವೇದಕ ಮತ್ತು ಟೆಲಿಫೋಟೋ 12-ಮೆಗಾಪಿಕ್ಸೆಲ್ ಸೋನಿ ಸಂವೇದಕಗಳೊಂದಿಗೆ ಜೋಡಿಯಾಗಿದೆ. 16 ಪಿಕ್ಸೆಲ್‌ಗಳನ್ನು ಒಂದು 2.56μm ಅಲ್ಟ್ರಾ ಪಿಕ್ಸೆಲ್‌ಗೆ ಸಂಯೋಜನೆ ಮೂಲಕ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ ಈ ಕ್ಯಾಮೆರಾವು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 114 ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮ್ಯಾಕ್ರೋ ವಿಷನ್, 2x ಜೂಮ್ ಮತ್ತು ಪೋರ್ಟ್ರೇಟ್ ಶಾಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ, 60-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Motorola Edge 30 Ultra With 200-Megapixel Camera, Motorola Edge 30 Fusion  Launched in India: Price, Specifications | Technology News

Motorola Edge 30 Ultra ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 5G (13 ಬ್ಯಾಂಡ್‌ಗಳು), 4G LTE, Wi-Fi 6E, ಬ್ಲೂಟೂತ್ v5.2, GPS/AGPS, NFC, ಡಿಸ್ಪ್ಲೇಪೋರ್ಟ್ 1.4, ಮತ್ತು USB ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳಿವೆ. ಅಂಡರ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ ಮತ್ತು ಫೇಸ್ ಅನ್ಲಾಕ್ ಎರಡೂ ಭದ್ರತಾ ವೈಶಿಷ್ಟ್ಯಗಳನ್ನು ತರಲಾಗಿದೆ. 4,610mAh ಬ್ಯಾಟರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ಹೊಂದಿದೆ. ಇನ್ನುಳಿದಂತೆ, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಲೀನಿಯರ್ x-ಆಕ್ಸಿಸ್ ವೈಬ್ರೇಶನ್, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಮತ್ತು ಮೊಬೈಲ್ಗಾಗಿ ಥಿಂಕ್‌ಶೀಲ್ಡ್ ನಂತಹ ವೈಶಿಷ್ಟ್ಯಗಳನ್ನು ನಾವು ನೋಡಬಹುದು.

Motorola Edge 30 Fusion: Motorola launches Edge 30 Ultra with 200 MP camera  at Rs 60K & Edge 30 Fusion at Rs 43K: Check out details - The Economic Times

Motorola Edge 30 Ultra ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Motorola Edge 30 Ultra ಸ್ಮಾರ್ಟ್‌ಫೋನನ್ನು ಇಂಟರ್ ಸ್ಟೆಲ್ಲರ್ ಬ್ಲ್ಯಾಕ್ ಮತ್ತು ಸ್ಟಾರ್ ಲೈಟ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಮತ್ತು ಏಕೈಕ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ 59,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಈ ಸ್ಮಾರ್ಟ್‌ಫೋನಿನ ಬಿಡುಗಡೆ ಕೊಡುಗೆಯಾಗಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್ ಮಾರಾಟದ ಸಮಯದಲ್ಲಿ 54,999 ರೂ. ಬೆಲೆಯಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಇಷ್ಟೇ ಅಲ್ಲದೇ, ಜಿಯೋ ಗ್ರಾಹಕರಿಗೆ 40 ರೀಚಾರ್ಜ್ ವೋಚರ್‌ಗಳ ರೂಪದಲ್ಲಿ 4,000 ಕ್ಯಾಶ್‌ಬ್ಯಾಕ್ ಅನ್ನು ಸಹ ಒದಗಿಸಲಾಗಿದೆ ಮತ್ತು Myntra, Zee5, OYO, Ixigo ಮತ್ತು Ferns & Petals ಮೂಲಕ 10,699ರೂ. ಮೌಲ್ಯದ ವೋಚರ್‌ಗಳನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿ ಹೇಳಿದೆ.

Motorola Edge 30 Ultra With 200 Megapixel Camera Launched In India Price, Specifications.