ಬ್ರೇಕಿಂಗ್ ನ್ಯೂಸ್
15-09-22 07:57 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದಲೂ ಸದ್ದು ಮಾಡುತ್ತಿರುವ ಬಹುನಿರೀಕ್ಷಿತ 'Vivo V25 5G' ಸ್ಮಾರ್ಟ್‌ಫೋನ್ ಇಂದು ದೇಶದಲ್ಲಿ ಬಿಡುಗಡೆಗೊಂಡಿದೆ. ಗುರುವಾರದಂದು Vivo ಕಂಪೆನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'Vivo V25 5G' ಸ್ಮಾರ್ಟ್‌ಫೋನನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದ್ದು, 90Hz ರಿಫ್ರೆಶ್, 50-ಮೆಗಾಪಿಕ್ಸೆಲ್ Eye AF ಸೆಲ್ಫಿ ಕ್ಯಾಮೆರಾ, 64-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, AMOLED ಡಿಸ್‌ಪ್ಲೇ ಮತ್ತು ಫ್ಲೋರೈಟ್ AG ಬ್ಯಾಕ್ ಪ್ಯಾನೆಲ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊತ್ತು ಅತ್ಯಂತ ಸೂಕ್ತ ಬೆಲೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಒನ್‌ಪ್ಲಸ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತೆ ಕಾಣುತ್ತಿರುವ ನೂತನ Vivo V25 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ನೋಡೋಣ ಬನ್ನಿ.
Vivo V25 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Vivo V25 5G ಸ್ಮಾರ್ಟ್‌ಫೋನಿನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರುವ 6.44-ಇಂಚಿನ ಫುಲ್ HD+ (1,080x2,404 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಬಣ್ಣವನ್ನು ಬದಲಾಯಿಸುವ ಬ್ಯಾಕ್ ಪ್ಯಾನೆಲ್ ಹಾಗೂ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ನೋಡಲು ಪ್ರೀಮಿಯಂ ಸಾಧನದಂತೆ ಕಾಣಿಸುತ್ತಿದೆ. ಹುಡ್ ಅಡಿಯಲ್ಲಿ, MediaTek Dimensity 900 ಪ್ರೊಸೆಸರ್ ನಿಂದ ಚಾಲಿತವಾಗಿರುವ ಈ Vivo V25 5G ಸ್ಮಾರ್ಟ್‌ಫೋನನ್ನು 12GB RAM ಮತ್ತು RAM 3.0 ವೈಶಿಷ್ಟ್ಯದೊಂದಿಗೆ ಜೋಡಿಸಲಾಗಿದೆ. ಇದರಲ್ಲಿನ RAM 3.0 ವೈಶಿಷ್ಟ್ಯವು ಸ್ಮಾರ್ಟ್‌ಫೋನಿನ ಮೆಮೊರಿಯನ್ನು ಬಳಸಿಕೊಂಡು RAM ಅನ್ನು ವಾಸ್ತವಿಕವಾಗಿ ಮತ್ತೆ 8GB RAM ಹೆಚ್ಚಿಸಲಿದೆ ಎಂದು Vivo ಕಂಪೆನಿ ಹೇಳಿಕೊಂಡಿದೆ.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ, ಹೊಸ Vivo V25 5G ಸ್ಮಾರ್ಟ್‌ಫೋನಿನಲ್ಲಿ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಾಮರ್ಥ್ಯದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಾಮರ್ಥ್ಯದ ಈ ಕ್ಯಾಮೆರಾದಲ್ಲಿ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸಾರ್ ಜೊತೆಗೆ f/2.2 ಅಪಾರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್ ಮತ್ತು f/2.4 ಅಪರ್ಚರ್ ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಗಳನ್ನು ಅಳವಡಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ ಐ ಆಟೋಫೋಕಸ್ ಮತ್ತು ಎಫ್/2.0 ಅಪರ್ಚರ್ ಲೆನ್ಸ್‌ನೊಂದಿಗೆ Eye AF 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ವೀಡಿಯೊ ಟೆಂಪ್ಲೇಟ್‌ಗಳೊಂದಿಗೆ ಬರುವ ವ್ಲಾಗ್ ಮೋಡ್ ಅನ್ನು ಸಹ ಪಡೆಯುತ್ತೀರಿ ಎಂದು ಕಂಪೆನಿ ತಿಳಿಸಿದೆ.

Vivo V25 5G ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ 5G, 4G LTE, Wi-Fi (2.4GHz ಮತ್ತು 5GHz), ಬ್ಲೂಟೂತ್ v5.2, GPS ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವೆ. ಇನ್ನುಳಿದಂತೆ, 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಸಾಮರ್ಥ್ಯದ ಬ್ಯಾಟರಿ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಹೈ-ರೆಸ್ ಆಡಿಯೊ ಬೆಂಬಲದೊಂದಿಗಿನ ಸ್ಪೀಕರ್, ಅಕ್ಸೆಲೆರೊಮೀಟರ್ ಮತ್ತು ಗೈರೊಸ್ಕೋಪ್ ಗೇಮ್ ಬೂಸ್ಟ್ ಮೋಡ್, ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು 4D ಗೇಮ್ ವೈಬ್ರೇಶನ್ ನಂತಹ ವೈಶಿಷ್ಟ್ಯಗಳನ್ನು ನಾವು Vivo V25 5G ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು. ಇನ್ನು 256GB ವರೆಗೆ ಮೊಮೊರಿ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ Funtouch OS 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು Vivo ಕಂಪೆನಿ ತಿಳಿಸಿದೆ.

ಭಾರತದಲ್ಲಿ Vivo V25 5G ಬೆಲೆ ಮತ್ತು ಲಭ್ಯತೆ ಮಾಹಿತಿ!
ಭಾರತದಲ್ಲಿ Vivo V25 5G ಸ್ಮಾರ್ಟ್‌ಪೋನ್ 8GB RAM + 128GB ಮತ್ತು 12GB RAM + 256GB ಸಾಮರ್ಥ್ಯದ ಎರಡು ಸ್ಟೋರೇಜ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಇವುಗಳಲ್ಲಿ 8GB RAM + 128GB ಮಾದರಿಯು 27,999 ರೂ.ಗಳಿಗೆ ಬಿಡುಗಡೆಯಾಗಿದ್ದರೆ, 12GB RAM + 256GB ಸ್ಟೋರೇಜ್ ಮಾದರಿಯು 31,999 ರೂ. ಬೆಲೆ ಹೊತ್ತು ಬಂದಿದೆ. ಆದರೆ, ಬಿಡುಗಡೆಯ ಕೊಡುಗೆಯಾಗಿ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ 2,500 ರೂ (ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ವಹಿವಾಟುಗಳಿಗೆ ಅನ್ವಯಿಸುತ್ತದೆ) ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಜೊತೆಗೆ 2,000 ರೂ.ವರೆಗಿನ ಹೆಚ್ಚುವರಿ ವಿನಿಮಯ ಬೋನಸ್ ಅನ್ನು ಒದಗಿಸಲಾಗಿದೆ ಎಂದು Vivo ಕಂಪೆನಿ ತಿಳಿಸಿದೆ. ಇನ್ನು ಇದೇ ಸೆಪ್ಟೆಂಬರ್ 20 ರಿಂದ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರಲಿರುವ ಈ ಸ್ಮಾರ್ಟ್‌ಫೋನನ್ನು ಕಪ್ಪು ಮತ್ತು ಸರ್ಫಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Vivo V25 5g With 50 Megapixel Selfie Camera Launched In India Price, Specifications.
01-12-25 10:59 pm
Bangalore Correspondent
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
Bangalore Suicide: ಎರಡು ವರ್ಷದ ಹಿಂದೆ ಗಂಡನ ಸಾವು...
01-12-25 08:18 pm
Honnavar, Mysuru Bus Accident, student death:...
01-12-25 03:03 pm
CM Siddaramaiah, DK Shivakumar: ನಾನು ಸಿಎಂ ಬ್ರ...
01-12-25 02:58 pm
01-12-25 10:18 pm
HK News Desk
ಡಿಜಿಟಲ್ ಅರೆಸ್ಟ್ ಪ್ರಕರಣ ಹೆಚ್ಚಳ ; ಗಂಭೀರ ಪರಿಗಣಿಸ...
01-12-25 09:28 pm
ಇಡುಕ್ಕಿ ಸ್ಕೈ ಡೈನ್ ವೈಫಲ್ಯ ; 120 ಅಡಿ ಎತ್ತರದಲ್ಲಿ...
30-11-25 10:59 pm
Puttur Honey Gains National Attention, PM Mod...
30-11-25 03:53 pm
WhatsApp, Telegram, Snapchat, ShareChat, Cybe...
30-11-25 03:37 pm
01-12-25 09:25 pm
Mangalore Correspondent
ಕ್ರಿಸ್ಮಸ್ ವೇಳೆಗೆ ಮಂಗಳೂರು- ಮುಂಬೈ ನಡುವೆ ವಾರದ ಎಲ...
01-12-25 03:08 pm
Kapu Accident, Udupi, Five Killed: ಕಾಪು ಬಳಿ...
30-11-25 06:03 pm
DK Trasnsport Mangalore, Joel: ಡಿಕೆ ಟ್ರಾನ್ಸ್...
29-11-25 10:01 pm
Moodushedde, Mangalore, Daughter Assaults Mot...
29-11-25 04:26 pm
01-12-25 04:50 pm
Udupi Correspondent
ಗಿಫ್ಟ್ ಕೊಡಲಿಕ್ಕಿದೆಯೆಂದು ಸ್ವರ್ಣ ಜುವೆಲ್ಲರಿಯಿಂದ...
29-11-25 10:57 pm
Davanagere, Police Steal Gold: ದಾವಣಗೆರೆಯಲ್ಲಿ...
28-11-25 06:23 pm
ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ ; ಪ್ರಮುಖ ಆರೋಪಿ ಪ...
28-11-25 02:16 pm
9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇ...
27-11-25 09:14 pm