ಬ್ರೇಕಿಂಗ್ ನ್ಯೂಸ್
20-09-22 07:24 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಮೊಬೈಲ್ ಬ್ರ್ಯಾಂಡ್ ಲಾವಾ ದೇಶದಲ್ಲಿಂದು ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವಂತಹ ವಿನೂತನ ಲಾವಾ ಬ್ಲೇಜ್ ಪ್ರೊ (Lava Blaze Pro) ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಹುಡುಕುತ್ತಿರುವ ಗ್ರಾಹಕರಿಗಾಗಿ ಈ ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, 90Hz ರಿಫ್ರೆಶ್ ರೇಟ್‌ನೊಂದಿಗೆ 6.5-ಇಂಚಿನ IPS ಡಿಸ್‌ಪ್ಲೇ, MediaTek Helio G37 ಪ್ರೊಸೆಸರ್ ಮತ್ತು AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾದರೆ, ನೂತನ ಲಾವಾ ಬ್ಲೇಜ್ ಪ್ರೊ (Lava Blaze Pro) ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನಿನಲ್ಲಿ HD+ (720x1,600 ಪಿಕ್ಸೆಲ್‌ಗಳು) ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ 2.5D ಕರ್ವಡ್ IPS ಡಿಸ್‌ಪ್ಲೇಯನ್ನು ನೀಡಲಾಗಿದೆ. ವಾಟರ್‌ಡ್ರಾಪ್-ಶೈಲಿಯ ನಾಚ್ ವಿನ್ಯಾಸದಲ್ಲಿರುವ ಈ ಡಿಸ್‌ಪ್ಲೇಯು 20:9 ಆಕಾರ ಅಸನುಪಾತದಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ.
ಹುಡ್ ಅಡಿಯಲ್ಲಿ, ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ MediaTek Helio G37 SoC ನಿಂದ ಚಾಲಿತವಾಗಿದ್ದು, ಇದನ್ನು 4GB RAM ಮತ್ತು 64GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಇಷ್ಟೇ ಅಲ್ಲದೇ, ಈ ಫೋನ್ 3GB ವರ್ಚುವಲ್ RAM ಪಡೆಯುತ್ತದೆ ಮತ್ತು ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು 256GB ವರೆಗೆ ವಿಸ್ತರಿಸಬಹುದು ಎಂದು ಕಂಪೆನಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನಿನಲ್ಲಿ LED ಫ್ಲ್ಯಾಷ್‌ನೊಂದಿಗೆ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ರಿಯರ್ AI ಕ್ಯಾಮೆರಾ ಸೆಟಪ್ ಇದೆ. ಇದು ಮ್ಯಾಕ್ರೋ ಮತ್ತು ಪೋಟ್ರೇಟ್ ಕ್ಯಾಮೆರಾ ಸಂವೇದಕಗಳನ್ನು ಹೊಂದಿದ್ದು, ಹಿಂದಿನ ಕ್ಯಾಬ್ಯೂಟಿ ಮೋಡ್, HDR ಮೋಡ್, ನೈಟ್ ಮೋಡ್, ಪನೋರಮಾ ಮೋಡ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇನ್ನು ಈ ಕ್ಯಾಮೆರಾದಲ್ಲಿ ಬಳಕೆದಾರರು QR ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿಗಳಿಗಾಗಿ, ಮುಂಭಾಗದಲ್ಲಿ ಫ್ಲ್ಯಾಷ್ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 4G LTE, Bluetooth v5.0, Wi-Fi, OTG, 3.5mm ಆಡಿಯೊ ಜ್ಯಾಕ್ ಮತ್ತು GPS ವೈಶಿಷ್ಟ್ಯಗಳಿವೆ. ಈ ಸ್ಮಾರ್ಟ್‌ಫೋನಿನ ಸುರಕ್ಷತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಎರಡೂ ವೈಶಿಷ್ಟ್ಯವನ್ನು ತರಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನ್ 5,00mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, USB ಟೈಪ್-C ಪೋರ್ಟ್ ಚಾರ್ಜರ್ ಕನೆಕ್ಟಿವಿಟಿ ಹೊಂದಿದೆ.
ಭಾರತದಲ್ಲಿ ಲಾವಾ ಬ್ಲೇಜ್ ಪ್ರೊ ಬೆಲೆ
ಭಾರತದಲ್ಲಿ 4GB RAM + 64GB ಸ್ಟೋರೇಜ್ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿರುವ ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನನ್ನು 10,499 ರೂ.ಬೆಲೆಯಲ್ಲಿ ಪರಿಚಯಿಸಲಾಗಿದೆ. ಗ್ಲಾಸ್ ಬ್ಲೂ, ಗ್ಲಾಸ್ ಗ್ರೀನ್ ಗೋಲ್ಡ್, ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಗೊಂಡಿರುವ ಈ ಸ್ಮಾರ್ಟ್‌ಫೋನ್ ಮಾರಾಟದ ದಿನಾಂಕವನ್ನು ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಗ್ರಾಹಕರಿಗೆ ಇದೇ ಮೊದಲ ಬಾರಿಗೆ 'ಮನೆಯಲ್ಲಿಯೇ ಉಚಿತ ಸೇವೆ' ಆರಂಭಿಸುವುದಾಗಿ ಮಾತ್ರ ತಿಳಿಸಿದೆ.
ಮಾರುಕಟ್ಟೆಗೆ ಲಾವಾ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿರುವ ಲಾವಾದ ಉತ್ಪನ್ನ ವಿಭಾಗದ ಮುಖ್ಯಸ್ಥ ತೇಜಿಂದರ್ ಸಿಂಗ್, ‘ದೇಶದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ತ್ವರಿತವಾಗಿ ವಿಸ್ತರಿಸಿರುವುದರಿಂದ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಗ್ರಾಹಕರು ಹೊಸ, ಹೊಸ ಅನುಭವಗಳ ಹುಡುಕಾಟದಲ್ಲಿ ಇದ್ದಾರೆ. ಲಾವಾ ಇತ್ತೀಚೆಗೆ ಪ್ರಾರಂಭಿಸಿರುವ ಬ್ಲೇಜ್ ಸರಣಿಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಮ್ಮ ಬಳಕೆದಾರರ ನಿರಂತರ ಬೆಂಬಲದೊಂದಿಗೆ ಈ ಸ್ಮಾರ್ಟ್‌ಫೋನ್‌ಗಳ ವಿಭಾಗ ವಿಸ್ತರಿಸುವುದನ್ನು ಮುಂದುವರಿಸಲು ಇದು ನಮಗೆ ಅನುವು ಮಾಡಿಕೊಟ್ಟಿದೆ. ಲಾವಾ ಬ್ಲೇಜ್ ಪ್ರೊ ನಿರ್ದಿಷ್ಟವಾಗಿ ಹೆಚ್ಚಿನ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ಗುಣಮಟ್ಟ ಮತ್ತು ಶ್ರೇಷ್ಠ ದರ್ಜೆಯ ಪ್ರೀಮಿಯಂ ಭಾವನೆಯನ್ನು ಬಯಸುತ್ತಿರುವ ಗ್ರಾಹಕರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
ದೇಶಿ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ ಪ್ರೊ (Lava Blaze Pro) ಪರಿಚಯಿಸುವ ಸಂದರ್ಭದಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳ ಪ್ರಚಾರಕ್ಕೆ ಯುವ ಸೂಪರ್‌ಸ್ಟಾರ್ ಕಾರ್ತಿಕ್ ಆರ್ಯನ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ದೇಶಿ ಫೋನ್ ತಯಾರಿಕಾ ಸಂಸ್ಥೆ ಲಾವಾ ಇಂಟರ್‌ನ್ಯಾಷನಲ್ ಲಿಮಿಟೆಡ್ ಇಂದು ಪ್ರಕಟಿಸಿದೆ. ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿರುವ ಕಾರ್ತಿಕ್ ಆರ್ಯನ್, ಸ್ವಂತ ಬಲದ ಮೇಲೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡ ಬಾಲಿವುಡ್‌ನ ಜನಪ್ರಿಯ ನಟ. ಶಕ್ತಿ, ಚೈತನ್ಯ ಮತ್ತು ಬಹುಮುಖ ಪ್ರತಿಭೆಯುಳ್ಳವರು. ಪ್ರಗತಿಶೀಲ ಕಾರ್ಯಯೋಜನೆಗಳ ಜೊತೆಗೆ ಕಾರ್ತಿಕ್ ಆರ್ಯನ್ ಅವರ ಹೊಸತನದ ಹಾಗೂ ಚೈತನ್ಯಶೀಲ ವ್ಯಕ್ತಿತ್ವವು ಲಾವಾದ ಧ್ಯೇಯಗಳನ್ನು ಸೂಕ್ತವಾಗಿ ಅನುರಣಿಸುತ್ತದೆ ಎಂದು ಲಾವಾ ಕಂಪೆನಿ ತಿಳಿಸಿದೆ.
Lava Blaze Pro With 50 Megapixel Triple Rear Cameras Launched In India.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm