ಭಾರತದಲ್ಲಿ 5G ಸೇವೆ ಆರಂಭದ ದಿನಾಂಕ ಫಿಕ್ಸ್!..ಪ್ರಧಾನಿಯವರ ಅಮೃತ ಹಸ್ತದಿಂದ ಚಾಲನೆ!

26-09-22 07:27 pm       Source: Vijayakarnataka   ಡಿಜಿಟಲ್ ಟೆಕ್

ದೇಶದಲ್ಲಿ 5G ಸೇವೆಗಳು ಆರಂಭವಾಗುವ ಬಗ್ಗೆ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ (IMC) ಅಧಿಕೃತ ಟ್ವಿಟ್ಟರ್.

ಅಕ್ಟೋಬರ್ 1 ರಂದು ನವದೆಹಲಿಯಲ್ಲಿ ಆಯೋಜನೆಯಾಗಿರುವ IMC 2022 (ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ನಲ್ಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ ಎಂಬ ಭರ್ಜರಿ ಸಿಹಿಸುದ್ದಿ ದೊರೆತಿದೆ. ದೇಶದಲ್ಲಿ 5G ಸೇವೆಗಳು ಆರಂಭವಾಗುವ ಬಗ್ಗೆ ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ (IMC) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಒದಗಿಸಲಾಗಿದ್ದು, ಭಾರತದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಧಾನಿ ಮೋದಿಯವರು ಇದೇ ಅಕ್ಟೋಬರ್ 1 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ದೂರಸಂಪರ್ಕ ಇಲಾಖೆ (DoT) ಹಾಗೂ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಸಂಸ್ಥೆಗಳು ಜಂಟಿಯಾಗಿ ಅಕ್ಟೋಬರ್ 1 ರಿಂದ 4ನೇ ತಾರೀಖಿನವರೆಗೆ IMC 2022 ಕಾರ್ಯಕ್ರಮವನ್ನು ಆಯೋಜಿಸಿವೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾರತದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಆರ್‌ಐಎಲ್‌ನ ಮುಖೇಶ್ ಅಂಬಾನಿ, ಏರ್‌ಟೆಲ್‌ನ ಸುನಿಲ್ ಮಿತ್ತಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಯ ಭಾರತದ ಮುಖ್ಯಸ್ಥ ರವೀಂದರ್ ಟಕ್ಕರ್ ಅವರು ಪಿಎಂ ಮೋದಿ ಅವರ ಜೊತೆ ಉಪಸ್ಥಿತರಿರುವುದು ಖಾತ್ರಿಯಾಗಿದೆ ಎಂದು ಪ್ರಮುಖ ಮಾಧ್ಯಮ ವರದಿಗಳು ತಿಳಿಸಿವೆ. ಇದರಿಂದ ದೇಶದಲ್ಲಿ ಅಕ್ಟೋಬರ್ 1 ರಂದು 5G ಸೇವೆಗಳ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

Breaking! 5G services set to launch in India on October 1st at India Mobile  Congress – 91mobiles.com

ದೇಶದಲ್ಲಿ ಈಗಾಗಲೇ 5G ತರಂಗಾಂತರ ಮಂಜೂರಾತಿ, ಹಂಚಿಕೆ ಸೇರಿದಂತೆ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡಿದೆ. ದೇಶದಲ್ಲಿ 5G ಸೇವೆ ಆರಂಭವಾಗಬೇಕು ಎಂಬ ದೃಷ್ಟಿಯಲ್ಲಿ ಟೆಲಿಕಾಂ ಇಲಾಖೆಯು ಕಳೆದ ಆಗಸ್ಟ್ 10 ರಂದೇ 5G ಸ್ಪೆಕ್ಟ್ರಮ್‌ಗಳನ್ನು ಹಂಚಿಕೆ ಮಾಡಿದೆ. ಇದಾದ ನಂತರ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಈಗಾಗಲೇ ಯಶಸ್ವಿಯಾಗಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸಹ ಯಶಸ್ವಿಯಾಗಿ ನಿರ್ವಹಿಸಿವೆ. ಇದೀಗ ಅಕ್ಟೋಬರ್ 1 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದ್ದು, ದೇಶದಲ್ಲಿ 5G ಸೇವೆಗಳ ಅಧಿಕೃತ ಬಿಡುಗಡೆಯೊಂದೆ ಭಾಕಿ ಇದೆ. ಮತ್ತು ಅಂದಿನಿಂದಲೇ ಭಾರತದಲ್ಲಿ ವಾಣಿಜ್ಯ 5G ಸೇವೆಗಳು ಆರಂಭವಾಗಲಿದೆ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ ವೇಳೆಗೆ 5G ಸೇವೆಗಳನ್ನು ಬಿಡುಗಡೆ ಮಾಡಲು ಭಾರತ ಸಜ್ಜಾಗುತ್ತಿದೆ ಎಂದು ಹೇಳಿದ್ದರು. ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚಿನ ಭಾರತೀಯ ನಗರಗಳು ಮತ್ತು ಪಟ್ಟಣಗಳಿಗೆ ಸೇವೆಗಳು ತಲುಪಲಿವೆ ಎಂದು ತಿಳಿಸಿದ್ದರು. ಇಷ್ಟೇ ಅಲ್ಲದೇ, ಭಾರತದ ಟೆಲಿಕಾಂ ಕ್ಷೇತ್ರವು ವಿಶ್ವದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯನ್ನು 5G ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ಇದೇ ಟ್ರೆಂಡ್ 5G ಬಳಿಕವೂ ಉಳಿಯಲಿದೆ ಎಂದು ನಾನು ಆಶಿಸುತ್ತೇನೆ' ಎಂದು ಸಹ ಹೇಳಿದ್ದರು. ಇದೀಗ ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಏಳು ನಗರಗಳಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐನಿಂದ 5 ಜಿ ಸೇವೆಗಳು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.

PM Narendra Modi Set To Launch Most-Awaited High Speed 5G Services In India  At India Mobile Congress 2022 - Tech

ದೇಶದಲ್ಲಿ 5G ದೇಶದಾದ್ಯಂತ 5G ಉಪಕರಣಗಳನ್ನು ಸ್ಥಾಪಿಸುವ ಪ್ರಕ್ರಿಯೆಗಾಗಿ ಪ್ರತಿ ಟೆಲಿಕಾಂ ಸಂಸ್ಥೆಯು 30 ರಿಂದ 40 ಸಾವಿರ ಕೋಟಿಯಷ್ಟು ಖರ್ಚು ಮಾಡಬೇಕಾಗಿರುವದರಿಂದ ದೇಶದಲ್ಲಿ 4G ಸೇವೆಗಿಂತ 5G ಸೇವೆ ಬಳಕೆಯು ದುಬಾರಿಯಾಗಬಹುದು ಎನ್ನಲಾಗಿದೆ. ದೇಶದಲ್ಲಿ 4G ಸೇವೆಗಿಂತ 5G ಸೇವೆ ಬಳಕೆಯು ದುಬಾರಿಯಾಗಬಹುದು. ಆದರೆ, ಇದು ಶೇ.25 ರಷ್ಟು ಮೀರುವುದಿಲ್ಲ ಎಂದು ಟೆಲಿಕಾಂ ತಜ್ಞರು ಅಂದಾಜಿಸಿದ್ದಾರೆ. ಅದಂದರೆ, ಪ್ರಸ್ತುತ 4G ಸೇವೆಗೆ ಪಾವತಿಸುತ್ತಿರುವ ಬೆಲೆಗಳಿಗೆ ಹೆಚ್ಚುವರಿಯಾಗಿ ಶೇ.25 ರಷ್ಟು ಹಣವನ್ನು ಪಾವತಿ ಮಾಡಬೇಕಾಗಬಹುದು ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಒಂದು ಜಿಬಿ 4G ಡೇಟಾ ಬೆಲೆ ಹತ್ತು ರೂಪಾಯಿಗಳು ಎಂದುಕೊಂಡರೆ, ಒಂದು ಜಿಬಿ 5G ಡೇಟಾವನ್ನು 14 ರಿಂದ 15 ರೂಪಾಯಿಗಳ ಆಸುಪಾಸಿನಲ್ಲಿ ಒದಗಿಸಬಹುದು.

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಡೇಟಾ ನೆಟ್‌ವರ್ಕ್‌ ಸೇರಿದಂತೆ ಒಟ್ಟು ನಾಲ್ಕು ಟೆಲಿಕಾಂ ಕಂಪನಿಗಳು 1.50 ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ 5G ಸ್ಪೆಕ್ಟ್ರಮ್ಗಳನ್ನು ಖರೀದಿಸಿವೆ.

5g Services Set To Launch In India On October 1st.