ಜಿಯೋ 5G ಸೇವೆ ಪಡೆಯಲು ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಬೆಲೆ ಬಹಿರಂಗ!

10-10-22 07:37 pm       Source: Vijayakarnataka   ಡಿಜಿಟಲ್ ಟೆಕ್

ಜಿಯೋ ಆರಂಭಿಸಿರುವ ಈ ಪ್ರಾಯೋಗಿಕ 5ಜಿ ಸೇವೆಯಲ್ಲಿ ತನ್ನ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅಥವಾ ಮೊಬೈಲ್ ಬದಲಿಸದೆಯೇ ಈ 5ಜಿ ನೆಟ್‌ವರ್ಕ್ ಬಳಸಬಹುದು.

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದೆ. 2022 ರ ವಿಜಯದಶಮಿ ಹಬ್ಬದ ಶುಭ ದಿನದಂದೇ ಜಿಯೋ ತನ್ನ 'ವೆಲ್ಕಮ್ ಆಫರ್' ಘೋಷಣೆ ಜೊತೆಗೆ ದೇಶದಲ್ಲಿ ಮೊದಲು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಾಲ್ಕು ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಪ್ರಸ್ತುತಪಡಿಸಿದೆ. ಇದೀಗ ಈ ಸೇವೆಯು ಯಾವ ಕನಿಷ್ಠ ಬೆಲೆಯಲ್ಲಿ ದೊರೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಸಹ ಲಭ್ಯವಾಗಿದೆ.

ಹೌದು, ರಿಲಯನ್ಸ್ ಜಿಯೋ ಗ್ರಾಹಕರು 1 Gbps ವೇಗದಲ್ಲಿ 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಆಗಿರಬೇಕೆಂದು ತಿಳಿದುಬಂದಿದೆ. ಜಿಯೋವಿನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು 5G ವೆಲ್‌ಕಮ್ ಆಫರ್ ಪಡೆಯಲು ಕನಿಷ್ಠ 239 ಅಥವಾ ಹೆಚ್ಚಿನ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿಸಿರಬೇಕು ಎಂದು ಜಿಯೋ ಹೇಳಿದೆ. ಆದರೆ, ಇದು ಜಿಯೋ 5G ಸೇವೆಗಳನ್ನು ಪಡೆಯಲು ಪಾವತಿಸಬೇಕಾದ ನಿರ್ಧಿಷ್ಟ ಬೆಲೆಯಲ್ಲ ಎಂದು ಹೇಳಲಾಗಿದೆ.

Jio 5G recharge plan prices will be affordable, no need to change SIM card:  report

ಇದನ್ನು ಸುಲಭವಾಗಿ ಹೇಳಬೇಕೆಂದರೆ, ಪ್ರಸ್ತುತ ಜಿಯೋ 4G ಸೇವೆಯನ್ನು ಬಳಸುತ್ತಿರುವ ಗ್ರಾಹಕರು 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿರಬೇಕು. 5G ಸಾಮರ್ಥ್ಯದ ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ 4G ಗ್ರಾಹಕರು 5G ಸೇವೆ ಪಡೆಯಲು ಕಂಪೆನಿಯಿಂದ ಆಹ್ವಾನವನ್ನು ಸ್ವೀಕರಿಸುತ್ತಾರೆ. ಈ ವೇಳೆ ಅವರು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗೆ ಗ್ರಾಹಕರಾಗಿದ್ದರೆ ಮಾತ್ರ ಜಿಯೋ 5G ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ.

Jio True 5G Welcome Offer revealed! Dussehra launch, unlimited data, 1Gbps  speed and more | Tech News

ಜಿಯೋ ಆರಂಭಿಸಿರುವ ಈ ಪ್ರಾಯೋಗಿಕ 5ಜಿ ಸೇವೆಯಲ್ಲಿ ತನ್ನ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಅಥವಾ ಮೊಬೈಲ್ ಬದಲಿಸದೆಯೇ ಈ 5ಜಿ ನೆಟ್‌ವರ್ಕ್ ಬಳಸಬಹುದು. ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ಜಿಯೋ MyJio ಅಪ್ಲಿಕೇಶನ್‌ನ್ ಮೂಲಕ ಜಿಯೋದ 5G ಸೇವೆಯನ್ನು ಪಡೆಯುವಂತೆ ಆಹ್ವಾನವನ್ನು ಕಳುಹಿಸುತ್ತಿದೆ. ಇದನ್ನು ಕ್ಲಿಕ್ ಮಾಡುವ ಮೂಲಕ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಲು ಅವಕಾಶ ಸಿಗಲಿದೆ.

ನಿಮ್ಮ 4G ಡೇಟಾ ಏನಾಗುತ್ತದೆ?
ನೀವು ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿ 4G ಸೇವೆಯನ್ನು ಬಳಸುತ್ತಿದ್ದೀರಾ ಎಂದುಕೊಳ್ಳಿ. ಇದೀಗ ನೀವು ಜಿಯೋ 5G ಸೇವೆ ಪಡೆಯಲು ಅರ್ಹರಾಗುತ್ತೀರಾ. ನೀವು ಜಿಯೋವಿನ ಆಹ್ವಾನವನ್ನು ಪಡೆದು 5G ಗೆ ಬದಲಾಯಿಸಿದಾಗ, ಈ ಯೋಜನೆಯು ಅನಿಯಮಿತ 5G ಡೇಟಾವನ್ನು ನೀಡುವ ಯೋಜನೆಯಾಗಿ ಬದಲಾಗುತ್ತದೆ. ಅಂದರೆ, ನೀವು ನಿಮ್ಮ ಪ್ರಸ್ತುತ ಯೋಜನೆಯು ಹೊಂದಿರುವ ವ್ಯಾಲಿಡಿಟಿವರೆಗೂ ಅನ್‌ಲಿಮಿಟೆಡ್ 5G ಡೇಟಾವನ್ನು ಬಳಸಬಹುದು. ಅದು ಕೂಡ 1Gbps + ವೇಗದಲ್ಲಿ.!

Reliance Jio 5g Will Only Work If You Recharge With This Plan.