ಭಾರತದಲ್ಲಿ ಬಹುನಿರೀಕ್ಷಿತ 'ಪಿಕ್ಸೆಲ್ 7 ಸರಣಿ' ಫೋನ್‌ಗಳ ಮಾರಾಟ ಆರಂಭ!

13-10-22 07:44 pm       Source: Vijayakarnataka   ಡಿಜಿಟಲ್ ಟೆಕ್

ದೇಶದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಪೋನ್ 59,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಸ್ನೋ, ಅಬ್ಸಿಡಿಯನ್ ಮತ್ತು ಲೆಮೊನ್ಗ್ರಾಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಬಂದಿದೆ.

ಭಾರತದಲ್ಲಿ ಕಳೆದವಾರವಷ್ಟೇ ಬಿಡುಗಡೆಗೊಂಡಿರುವ ಗೂಗಲ್ ಕಂಪೆನಿಯ ಬಹುನಿರೀಕ್ಷಿತ 'ಪಿಕ್ಸೆಲ್ 7 ಸರಣಿ' ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಇಂದಿನಿಂದ (ಅಕ್ಟೋಬರ್ 13) ಮಾರಾಟಕ್ಕೆ ಬಂದಿವೆ. ಗೂಗಲ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಅತ್ಯದ್ಬುತ ಕೊಡುಗೆಗಳೊಂದಿಗೆ ಮಾರಾಟಕ್ಕಿಡಲಾಗಿದ್ದು, ಉಡಾವಣಾ ಕೊಡುಗೆಯಾಗಿ ಸೀಮಿತ ಅವಧಿಯವರೆಗೆ Pixel 7 ಸಾಧನದ ಮೇಲೆ 6,000 ರೂ. ಮತ್ತು Pixel 7 Pro ಸಾಧನದ ಮೇಲೆ 8,500 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ ಎಂದು ಕಂಪೆನಿ ತಿಳಿಸಿದೆ.

ದೇಶದಲ್ಲಿ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಪೋನ್ 59,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಸ್ನೋ, ಅಬ್ಸಿಡಿಯನ್ ಮತ್ತು ಲೆಮೊನ್ಗ್ರಾಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟಕ್ಕೆ ಬಂದಿದೆ. ಮತ್ತೊಂದೆಡೆ, Google Pixel 7 Pro ಸಾಧನವು 84,999 ರೂ.ಗಳ ಬೆಲೆಯಲ್ಲಿ ಬಿಡುಗಡೆಗೊಂಡಿದ್ದು, ಇದು ಹ್ಯಾಝೆಲ್, ಅಬ್ಸಿಡಿಯನ್ ಮತ್ತು ಸ್ನೋ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ, ಹೊಸ ಗೂಗಲ್ 'ಪಿಕ್ಸೆಲ್ 7 ಸರಣಿ' ಸ್ಮಾರ್ಟ್‌ಫೋನ್‌ಗಳು ಹೇಗಿವೆ ಮತ್ತು ಈ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬ ಮಾಹಿತಿಯನ್ನು ಓದಿ ತಿಳಿಯೋಣ ಬನ್ನಿ.

Google Pixel 7 and Pixel 7 Pro go on sale; Price, Offers, Specifications

  • 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.32-ಇಂಚಿನ ಫುಲ್‌ HD+ (2,400 x 1,080 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇಯನ್ನು ನೀಡಲಾಗಿದೆ.
  • ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ನಿಂದ ಚಾಲಿತವಾಗಿರುವ ಈ ಫೋನನ್ನು 8GB RAM ನೊಂದಿಗೆ ಜೋಡಿಸಲಾಗಿದೆ.
  • 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 12-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ.
  • ಹಿಂಬದಿಯ ಕ್ಯಾಮೆರಾವು ವೀಡಿಯೊಗಳನ್ನು ರೆಕಾರ್ಡ್ ಮಾಡುವಾಗ 'ಸಿನಿಮ್ಯಾಟಿಕ್ ಬ್ಲರ್' ಎಂಬ ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ.
  • ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಗೂಗಲ್ ಪಿಕ್ಸೆಲ್ 7 ಫೋನ್ 10.8-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ
  • ಡ್ಯುಯಲ್-ಸಿಮ್ (ನ್ಯಾನೋ + eSIM) ಸಾಮರ್ಥ್ಯದ ಈ ಗೂಗಲ್ ಪಿಕ್ಸೆಲ್ 7 ಫೋನ್ ಆಂಡ್ರಾಯ್ಡ್ 13 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
  • 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ನೋಡಬಹುದು.
  • ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಬೆಂಬಲವನ್ನು ಹೊಂದಿದೆ.
  • Pixel 7 ಸಾಧನವು ವೇಗದ ವೈರ್ಡ್ ಚಾರ್ಜಿಂಗ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.
  • ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಸಕ್ರಿಯಗೊಳಿಸಿದರೆ 72 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
  • ಇತರ ಪಿಕ್ಸೆಲ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಂತೆ, ಪಿಕ್ಸೆಲ್ 7 ಸಾಧನವು ಕೂಡ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತದೆ.

Google Pixel 7 series is coming to India -

Google Pixel 7 Pro ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು

  • ಈ ಸಾಧನವು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7-ಇಂಚಿನ ಕ್ವಾಡ್-ಎಚ್‌ಡಿ (3,120 x 1,440 ಪಿಕ್ಸೆಲ್‌ಗಳು) LTPO OLED ಡಿಸ್‌ಪ್ಲೇಯನ್ನು ಹೊಂದಿದೆ.
  • ಪಿಕ್ಸೆಲ್ 7 ಮಾದರಿಯಲ್ಲಿ ಕಂಡುಬರುವ ಅದೇ ಟೆನ್ಸರ್ ಜಿ 2 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ ಫೋನನ್ನು 12 ಜಿಬಿ RAM ನೊಂದಿಗೆ ಜೋಡಿಸಲಾಗಿದೆ.
  • ಪಿಕ್ಸೆಲ್ 7 ನಂತೆ, ಪಿಕ್ಸೆಲ್ 7 ಪ್ರೊ ಫೋನ್ ಕೂಡ 50-ಮೆಗಾಪಿಕ್ಸೆಲ್ ಮತ್ತು 12-ಮೆಗಾಪಿಕ್ಸೆಲ್ ಸಾಮರ್ಥ್ಯದ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
  • ಹಿಂಬದಿಯ ಕ್ಯಾಮೆರಾ 30x ಸೂಪರ್ ರೆಸಲ್ಯೂಶನ್ ಜೂಮ್ ಮತ್ತು 5x ಆಪ್ಟಿಕಲ್ ಜೂಮ್‌ಗೆ ಬೆಂಬಲದೊಂದಿಗೆ 48-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ.
  • ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಗೂಗಲ್ ಪಿಕ್ಸೆಲ್ 7 ಪ್ರೊ ಫೋನ್ ಕೂಡ 10.8-ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
  • ಪಿಕ್ಸೆಲ್ 7 ಪ್ರೊ ಹೊಸ 'ಮ್ಯಾಕ್ರೋ ಫೋಕಸ್' ವೈಶಿಷ್ಟ್ಯವನ್ನು ಒಳಗೊಂಡಿದ್ದು, ಅತ್ಯುತ್ತಮ ಕ್ಲೋಸ್-ಅಪ್ ಫೋಟೋಗಳನ್ನು ಚಿತ್ರಿಸಲಿದೆ ಎಂದು ಕಂಪೆನಿ ತಿಳಿಸಿದೆ.
  • ಡ್ಯುಯಲ್-ಸಿಮ್ (ನ್ಯಾನೋ + eSIM) ಸಾಮರ್ಥ್ಯದ ಈ ಗೂಗಲ್ ಪಿಕ್ಸೆಲ್ 7 ಪ್ರೊ ಫೋನ್ ಫೋನ್ ಆಂಡ್ರಾಯ್ಡ್ 13 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
  • 5G, 4G LTE, Wi-Fi 6E, ಬ್ಲೂಟೂತ್ 5.2, GPS, NFC, ಮತ್ತು USB ಟೈಪ್-C ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ನೋಡಬಹುದು.
  • ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಬೆಂಬಲವನ್ನು ಹೊಂದಿದೆ.
  • Pixel 7 ಪ್ರೊ ಸಾಧನವು ಸಹ ವೇಗದ ವೈರ್ಡ್ ಚಾರ್ಜಿಂಗ್ ಜೊತೆಗೆ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.
  • ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಸಕ್ರಿಯಗೊಳಿಸಿದರೆ ಈ ಸಾಧನವು 72 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
  • ಇತರ ಪಿಕ್ಸೆಲ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಂತೆ, ಪಿಕ್ಸೆಲ್ 7 ಪ್ರೊ ಸಾಧನವು ಕೂಡ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತದೆ.

Google Pixel 7 Series Goes On Sale In India.