ಬ್ರೇಕಿಂಗ್ ನ್ಯೂಸ್
14-10-22 07:30 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ದೇಶೀಯ ಟೆಕ್ ಬ್ರ್ಯಾಂಡ್ ಫೈರ್-ಬೋಲ್ಟ್ (Fire-Boltt) ತನ್ನ ಮತ್ತೊಂದು ವಿನೂತನ Dazzle Plus ಸ್ಮಾರ್ಟ್‌ವಾಚ್ ಸಾಧನವನ್ನು ದೇಶದಲ್ಲಿ ಪರಿಚಯಿಸಿದೆ. ಧರಿಸಬಹುದಾದ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗುತ್ತಿರುವ ಫೈರ್-ಬೋಲ್ಟ್ ಕಂಪೆನಿಯ ಈ ಸ್ಮಾರ್ಟ್‌ವಾಚ್ ಸಾಧನವನ್ನು ವಿಶೇಷವಾದ 'ಸ್ಕ್ವೇರ್ ಡೈಲ್' ವಿನ್ಯಾಸದಲ್ಲಿ ಬಿಡುಗಡೆಗೊಳಿಸಿದ್ದು, ಈ ಸಾಧನವು 1.83-ಇಂಚಿನ ಕರ್ವ್ ಡಿಸ್‌ಪ್ಲೇ, SpO2 ಮಾನಿಟರಿಂಗ್ ಮತ್ತು ಬ್ಲೂಟೂತ್ ಕಾಲ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ.
ಈ ಹೊಸ Dazzle Plus ಸ್ಮಾರ್ಟ್‌ವಾಚ್‌ನಲ್ಲಿ ಅಳವಡಿಸಲಾಗಿರುವ 1.83-ಇಂಚಿನ ಕರ್ವ್ ಡಿಸ್‌ಪ್ಲೇಯು ಕಂಪೆನಿಯ ಇತರೆ ಸಾಧನಗಳಿಗಿಂತ ದೊಡ್ಡದಾಗಿದೆ ಮತ್ತು ಬಹು ವೈಶಿಷ್ಟ್ಯಗಳನ್ನು ನ್ಯಾವಿಗೇಟ್ ಮಾಡಲು ಇದು ತಿರುಗುವ ಬಟನ್ ಸಹ ಹೊಂದಿದೆ. ಈ ಸಾಧನವು 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್‌ಗಳನ್ನು ಹಾಗೂ 60 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ ಎಂದು ಫೈರ್-ಬೋಲ್ಟ್ ಕಂಪೆನಿ ತಿಳಿಸಿದೆ. ಆದರೆ, ಈ ಸ್ಪೋರ್ಟ್ಸ್ ಮೋಡ್‌ಗಳು ಯಾವುವು ಎಂಬುದನ್ನು ಮಾತ್ರ ಕಂಪನಿಯು ಈ ವರೆಗೂ ಬಹಿರಂಗಪಡಿಸಿಲ್ಲ.
ಧೂಳು ಮತ್ತು ಬೆವರು ಪ್ರತಿರೋಧದ IP68 ಪ್ರಮಾಣೀಕರಣವನ್ನು ಸಹ ಹೊಂದಿರುವ ಈ Dazzle Plus ಸ್ಮಾರ್ಟ್‌ವಾಚ್ ಸಾಧನವನ್ನು ಈಜುವಾಗ ಅಥವಾ ಸ್ನಾನ ಮಾಡುವಾಗಲೂ ಬಳಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ, SpO2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆ ವೈಶಿಷ್ಟ್ಯಗಳ ಜೊತೆಗೆ ಅಲಾರಾಂ, ಟೈಮರ್, ಕ್ಯಾಮರಾ ಮತ್ತು ಸಂಗೀತ ನಿಯಂತ್ರಣಗಳನ್ನು ಸಹ ಈ ಸಾಧನವು ಸಕ್ರಿಯಗೊಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ವಿಶೇಷವಾಗಿ, ಬ್ಲೂಟೂತ್ ಕಾಲ್ ಮತ್ತು ಸ್ಮಾರ್ಟ್ ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸಾಧನವು ಸಾಮಾನ್ಯ ಬಳಕೆಯಲ್ಲಿ 5-8 ದಿನಗಳು ಮತ್ತು ಸ್ಟ್ಯಾಂಡ್‌ಬೈನಲ್ಲಿ 30 ದಿನಗಳ ಬಲವಾದ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಸ್ಟೈಲ್ ಹಾಗೂ ಫಿಟ್‌ನೆಸ್ ಕಾಪಾಡಿಕೊಡಿಕೊಳ್ಳಲು ಇಚ್ಚಿಸುವ ಯುವಕರಿಗಾಗಿ Dazzle Plus ಸ್ಮಾರ್ಟ್‌ವಾಚ್ ಸಾಧನವನ್ನು ನಿರ್ಮಿಸಿರುವುದಾಗಿ ಫೈರ್-ಬೋಲ್ಟ್‌ನ ಸಹ-ಸಂಸ್ಥಾಪಕರಾದ ಆಯುಷಿ ಕಿಶೋರ್ ಮತ್ತು ಅರ್ನವ್ ಕಿಶೋರ್ ಅವರು ಹೇಳಿದ್ದಾರೆ.
Dazzle Plus ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ.
ದೇಶದಲ್ಲಿ Dazzle Plus ಸ್ಮಾರ್ಟ್‌ವಾಚ್ ಸಾಧನವನ್ನು 1,599 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಚಿನ್ನ, ಬೆಳ್ಳಿ ಮತ್ತು ಕಪ್ಪು ಚಿನ್ನದ ಬಣ್ಣಗಳಲ್ಲಿ Amazon ನಲ್ಲಿ ಮಾರಾಟಕ್ಕೆ ಬರಲಿದೆ ಎಂದು ಫೈರ್-ಬೋಲ್ಟ್ ಕಂಪೆನಿಯ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ.
Fire-Boltt Dazzle Plus Smartwatch Launched In India At Rs 1,599.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm