ಇನ್ಮುಂದೆ ನೀವು WhatsApp ನಲ್ಲಿ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವು!

19-10-22 07:41 pm       Source: Vijayakarnataka   ಡಿಜಿಟಲ್ ಟೆಕ್

ವಾಟ್ಸಪ್ ಸಂಸ್ಥೆ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದ್ದು, ನಿಷೇಧಿತ ಖಾತೆಗಳ ದೊಡ್ಡ ಸಂಖ್ಯೆಯ ಹೊರತಾಗಿಯೂ, ವಾಟ್ಸಪ್ ಮೂಲಕ ನಕಲಿ ಸಂದೇಶಗಳನ್ನು ಹರಡುವ ಕಳವಳವನ್ನು ಮುಂದುವರೆಸಿದೆ.

ನಿಮ್ಮ ವಾಟ್ಸಪ್ ಖಾತೆಯು ಅನಿರೀಕ್ಷಿತವಾಗಿ ಬ್ಯಾನ್ ಆಗಿದೆ ಎಂದಾದರೆ ನೀವು ಯಾವುದಾದರೂ ಒಂದು ತಪ್ಪನ್ನು ಮಾಡಿದ್ದೀರಿ ಎಂದರ್ಥ. ಏಕೆಂದರೆ, ಮೆಟಾ-ಮಾಲೀಕತ್ವದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ತನ್ನ ಅಪ್ಲಿಕೇಷನ್ ಮೂಲಕ ದ್ವೇಷದ ಸಂದೇಶಗಳು, ಬಾಟ್‌ಗಳು, ನಕಲಿ ಸುದ್ದಿಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೋಟ್ಯಾಂತರ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸುತ್ತಿದೆ. ಕಳೆದ ಆಗಸ್ಟ್ ಒಂದೇ ತಿಂಗಳಲ್ಲೇ ವಾಟ್ಸಪ್ ತನ್ನ ಪ್ಲಾಟ್‌ಫಾರ್ಮ್‌ನಿಂದ 23 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದ್ದು, ಒಟ್ಟಾರೆ ಕಳೆದ ಎರಡು ವರ್ಷಗಳಲ್ಲಿ 3 ಕೋಟಿಗೂ ಅಧಿಕ ಖಾತೆಗಳಳನ್ನು ಬ್ಲಾಕ್ ಮಾಡಿದೆ.!

ವಾಟ್ಸಪ್ ಸಂಸ್ಥೆ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ನಿಷೇಧಿಸುತ್ತಿದ್ದು, ನಿಷೇಧಿತ ಖಾತೆಗಳ ದೊಡ್ಡ ಸಂಖ್ಯೆಯ ಹೊರತಾಗಿಯೂ, ವಾಟ್ಸಪ್ ಮೂಲಕ ನಕಲಿ ಸಂದೇಶಗಳನ್ನು ಹರಡುವ ಕಳವಳವನ್ನು ಮುಂದುವರೆಸಿದೆ. ಇದರಿಂದ ವಾಟ್ಸಪ್ ಬಳಕೆದಾರರು ತಮ್ಮ ಖಾತೆ ನಿಷೇಧವಾಗುವುದನ್ನು ತಡೆಯಲು ಅನುಸರಿಸಬೇಕಾದ ಕೆಲವು ಪ್ರೋಟೋಕಾಲ್‌ಗಳನ್ನು ಅಧಿಕೃತವಾಗಿ ಘೋಷಿಸಿದೆ. ವಾಟ್ಸಪ್ ತನ್ನ "ಮಾಸಿಕ ಬಳಕೆದಾರ ಸುರಕ್ಷತಾ ವರದಿ"ಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವ ರೀತಿಯ ಖಾತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಬ್ಯಾನ್ ಮಾಡಲಾಗಿದೆ ಎಂಬುದರ ಕುರಿತು ವಿವರಗಳನ್ನು ಒದಗಿಸಿದೆ.

Eleven reasons why WhatsApp can ban or remove your account | Marca

ವಾಟ್ಸಪ್ ಸಂಸ್ಥೆ ಹೇಳುವಂತೆ, "ಉದ್ದೇಶಪೂರ್ವಕವಾಗಿ, ಕಂಪನಿಯ ನಿಯಮಗಳನ್ನು ಉಲ್ಲಂಘಿಸುವ ಚಟುವಟಿಕೆಯನ್ನು ಒಳಗೊಂಡಿರುವ ಖಾತೆಗಳನ್ನು ನಿಷೇಧಿಸುವ ಅಪಾಯವಿದೆ. ಅಸಹಜ ನಡವಳಿಕೆಯಲ್ಲಿ ತೊಡಗಿರುವ ವಾಟ್ಸಪ್ ಖಾತೆಗಳನ್ನು ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ವಾಟ್ಸಪ್ ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಆದ್ದರಿಂದ, ನೀವು ಹಲವಾರು "ಗುಡ್ ಮಾರ್ನಿಂಗ್" ಸಂದೇಶಗಳನ್ನು ಫಾರ್ವರ್ಡ್ ಮಾಡಿದರೂ ಸಹ, ನಿಮ್ಮ ವಾಟ್ಸಪ್ ಖಾತೆಯನ್ನು ಬ್ಯಾನ್ ಮಾಡುವ ಅಪಾಯವಿದೆ. ಹಾಗಾದರೆ, ನಿಮ್ಮ ವಾಟ್ಸಪ್ ಖಾತೆಯನ್ನು ಬ್ಯಾನ್ ಆಗದಂತೆ ತಡೆಯಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.

आपने भी ऑन रखी है WhatsApp की ये सेटिंग, हैक हो सकता है फोन, तुरंत करें ऑफ  - WhatsApp Auto Media Download Setting Hackers May Hack your Phone ttec -  AajTak

ಅಕ್ರಮ, ಅಶ್ಲೀಲ, ಮಾನಹಾನಿಕರ ಮತ್ತು ಬೆದರಿಕೆ ಸಂದೇಶ ಕಳುಹಿಸಬೇಡಿ!
ವಾಟ್ಸಪ್ ನಿಯಮದ ಪ್ರಕಾರ, ನೀವು ಅಶ್ಲೀಲ, ಅಕ್ರಮ, ಅನಗತ್ಯ, ಬೆದರಿಕೆ ಮತ್ತು ಮಾನಹಾನಿಕಾರಕ ಸಂದೇಶಗಳನ್ನು ಕಳುಹಿಸುವಂತಿಲ್ಲ.

ಹಿಂಸೆಗೆ ಪ್ರಚೋದನೆ ನಿಡುವಂತಿಲ್ಲ.
ಯಾವುದೇ ರೀತಿಯ ಹಿಂಸಾಕೃತ್ಯಗಳಿಗೆ ಪ್ರಚೋದನೆ ನೀಡುವ ಪೋಸ್ಟ್ ಅನ್ನು ನೀವು ಸೃಷ್ಟಿಸಿದರೆ, ಹಂಚಿಕೊಂಡರೆ ಮತ್ತು ಪ್ರಸರಿಸಲು ವಾಟ್ಸಪ್ ಬಳಕೆ ಮಾಡಿಕೊಂಡರೆ, ನಿಮ್ಮ ಖಾತೆ ಬ್ಲಾಕ್ ಆಗಬಹುದು.

ನಕಲಿ ಖಾತೆ ಸೃಷ್ಟಿಸಬೇಡಿ.
ಇನ್ನೊಬ್ಬರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಬೇಡಿ. ಯಾರದೋ ಫೋಟೋ ವಾಟ್ಸಪ್ ಡಿಪಿ, ಹೆಸರು ಬಳಸಿಕೊಂಡು ಇನ್ನೊಬ್ಬರ ಹೆಸರಿನಲ್ಲಿ ನೀವು ವಾಟ್ಸಪ್ ಬಳಸುವುದು ನಿಯಮಬಾಹಿರವಾಗಿದೆ. ಇದಕ್ಕೆ ಸೂಕ್ತ ಕ್ರಮವನ್ನು ವಾಟ್ಸಪ್ ಕೈಗೊಳ್ಳುತ್ತದೆ.

ಗುರುತು ಪರಿಚಯ ಇಲ್ಲದವರಿಗೆ ಸಂದೇಶ.
ನಿಮ್ಮ ಕಾಂಟಾಕ್ಟ್‌ನಲ್ಲಿ ಇಲ್ಲದೇ ಇರುವವರಿಗೆ, ಯಾವುದೇ ಗುರುತು ಪರಿಚಯವೇ ಇಲ್ಲದ ವ್ಯಕ್ತಿಗೆ ನೀವು ಅನಗತ್ಯವಾಗಿ ವಾಟ್ಸಪ್ ಮೂಲಕ ಮೆಸೇಜ್ ಕಳುಹಿಸುವುದು, ಕಿರಿಕಿರಿ ಉಂಟುಮಾಡುವುದು, ಪದೇಪದೇ ಮೆಸೇಜ್, ವಾಟ್ಸಪ್ ಕಾಲ್ ಮಾಡುವುದು ಕೂಡ ನಿಮಗೆ ಸಮಸ್ಯೆ ತರುತ್ತದೆ.

ವಾಟ್ಸಪ್ ಪ್ಲಸ್ ಬಳಕೆ
ವಾಟ್ಸಪ್ ಪ್ಲಸ್ ಎನ್ನುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ, ವಾಟ್ಸಪ್ ಗೋಲ್ಡ್, ವಾಟ್ಸಪ್ ಪ್ರೊ ಎನ್ನುವ ಅಪ್ಲಿಕೇಶನ್ ಬಳಕೆ ಕೂಡ ನಿಯಮಕ್ಕೆ ವಿರುದ್ಧವಾಗಿದೆ. ವಾಟ್ಸಪ್ ಮತ್ತು ವಾಟ್ಸಪ್ ಬಿಜಿನೆಸ್ ಎನ್ನುವ ಎರಡು ಅಪ್ಲಿಕೇಶನ್ ಹೊರತುಪಡಿಸಿ, ಬೇರಾವುದೇ ಅಪ್ಲಿಕೇಶನ್ ಅನ್ನು ವಾಟ್ಸಪ್ ಹೊಂದಿಲ್ಲ. ಈ ಬಗ್ಗೆ ಕಂಪನಿ ಕೂಡ ಅಧಿಕೃತವಾಗಿ ಪ್ರಕಟಿಸಿದೆ. ಹೀಗಾಗಿ ವಾಟ್ಸಪ್ ಹೆಸರಿನ ನಕಲಿ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ ಸಮಸ್ಯೆ ಸೃಷ್ಟಿಸಬಹುದು.

ಹಲವರಿಂದ ಬ್ಲಾಕ್ ಆಗಿದ್ದರೆ!
ನಿಮ್ಮ ವಾಟ್ಸಪ್ ಖಾತೆ ಕುರಿತು ಹಲವರು ರಿಪೋರ್ಟ್‌ ಮಾಡಿದ್ದರೆ, ಅಥವಾ ಬಹಳಷ್ಟು ಮಂದಿ ನಿಮ್ಮನ್ನು ವಾಟ್ಸಪ್‌ನಲ್ಲೊ ಬ್ಲಾಕ್ ಮಾಡಿದ್ದರೆ, ನಿಮ್ಮ ಖಾತೆಯ ವಿರುದ್ಧ ವಾಟ್ಸಪ್ ಸೂಕ್ತ ಕ್ರಮ ಕೈಗೊಳ್ಳಬಹುದು. ನಿಮ್ಮ ಖಾತೆಯನ್ನೇ ಬ್ಯಾನ್ ಮಾಡುವ ಅಧಿಕಾರ ವಾಟ್ಸಪ್‌ಗಿದೆ.

ನಿಮ್ಮ ವಿರುದ್ಧ ದೂರು ಬಂದರೆ!
ವಾಟ್ಸಪ್ ಖಾತೆಯ ಮೂಲಕ ನೀವು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದರೆ, ಅಥವಾ ನಿಮ್ಮ ವಿರುದ್ಧ ವಾಟ್ಸಪ್ ಬಳಕೆದಾರರು ದೂರು ದಾಖಲಿಸಿದ್ದರೆ, ಅಂತಹ ದೂರನ್ನು ವಾಟ್ಸಪ್ ಪರಿಶೀಲಿಸುತ್ತದೆ. ನಿಮ್ಮ ಖಾತೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ.

ವಾಟ್ಸಪ್ ಕೋಡ್ ತಿದ್ದುವುದು
ವಾಟ್ಸಪ್‌ ಕೋಡ್ ಅನ್ನು ತಿರುಚುವ, ಬದಲಾಯಿಸುವ, ಕೋಡ್ ತೆಗೆದು ಅದನ್ನು ದುರುದ್ದೇಶಕ್ಕೆ ಬಳಸುವ, ರಿವರ್ಸ್ ಇಂಜಿನಿಯರ್ ಹೀಗೆ ಸಮ್ಮತವಲ್ಲದ ಕೆಲಸ ಮಾಡಿದರೆ, ವಾಟ್ಸಪ್ ನಿಯಮಕ್ಕೆ ವಿರುದ್ಧವಾಗಿದ್ದು, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.

ವೈರಸ್, ಮಾಲ್ವೇರ್ ಹರಡಲು ಬಳಸಿದರೆ
ವಾಟ್ಸಪ್ ಮೂಲಕ ವೈರಸ್ ಹರಡುವ ಮತ್ತು ಮಾಲ್ವೇರ್ ಸೃಷ್ಟಿಸುವ ಸಂದೇಶ ಹರಿಯಬಿಡುವುದು, ಅಪ್ಲಿಕೇಶನ್ ಕಳುಹಿಸುವುದು, ಎಪಿಕೆ ಫೈಲ್ ಕಳುಹಿಸಿ ಸ್ಮಾರ್ಟ್‌ಫೋನ್ ಕಾರ್ಯಾಚರಣೆಗೆ ಧಕ್ಕೆಯುಂಟುಮಾಡಿದರೆ ಅಂತಹ ಖಾತೆಯನ್ನು ಬ್ಯಾನ್ ಮಾಡಲಾಗುತ್ತದೆ.

ವಾಟ್ಸಪ್ ಸರ್ವರ್ ಹ್ಯಾಕ್ ಮಾಡಲು ಯತ್ನಿಸಿದರೆ.
ವಾಟ್ಸಪ್‌ನ ಸರ್ವರ್‌ ಅನ್ನು ಹ್ಯಾಕ್ ಮಾಡಲು ಯತ್ನಿಸಿದರೆ, ಅಥವಾ ಮತ್ಯಾರದೋ ಖಾತೆಯನ್ನು ಹ್ಯಾಕ್ ಮಾಡಿ ಅವರ ಮಾಹಿತಿಯನ್ನು ದೋಚಿದರೆ ನಿಮಗೆ ವಾಟ್ಸಪ್ ನಿಯಮದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

Tata Play To Now Offer Its Binge Ott Service To Everyone Check Details.