ಭಾರತದಲ್ಲಿ ಜಿಯೋವಿನ ಮೊಟ್ಟ ಮೊದಲ ಲ್ಯಾಪ್‌ಟಾಪ್ 'ಜಿಯೋಬುಕ್' ಮಾರಾಟ ಆರಂಭ!

21-10-22 08:04 pm       Source: Vijayakarnataka   ಡಿಜಿಟಲ್ ಟೆಕ್

ರಿಲಯನ್ಸ್ ಡಿಜಿಟಲ್‌ನ ವೆಬ್‌ಸೈಟ್ ಮೂಲಕ ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಜಿಯೋಬುಕ್ ಸಾಧನವನ್ನು ಲೈವ್‌ನಲ್ಲಿ ಇಡಲಾಗಿದ್ದು, 19,500 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಈ ಲ್ಯಾಪ್‌ಟಾಪ್ ಅನ್ನು ಗ್ರಾಹಕರು ಇದೀಗ 15,799 ರೂ.

ಭಾರತದ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಕಾತುರವಾಗಿರುವ ಜಿಯೋವಿನ ಮೊಟ್ಟ ಮೊದಲ ಲ್ಯಾಪ್‌ಟಾಪ್ 'ಜಿಯೋಬುಕ್' (JioBook) ದೇಶದಲ್ಲಿ ಇಂದಿನಿಂದ ಮಾರಾಟಕ್ಕೆ ಬಂದಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾದ ರಿಲಯನ್ಸ್ ಡಿಜಿಟಲ್‌ ವೆಬ್‌ಸೈಟ್‌ನಲ್ಲಿ ಜಿಯೋಬುಕ್ ಲ್ಯಾಪ್‌ಟಾಪನ್ನು ಮಾರಾಟಕ್ಕಿಡಲಾಗಿದ್ದು, 15,000 ರೂ. ಬೆಲೆಯಲ್ಲಿ ಜಿಯೋಬುಕ್ ಸಾಧನವನ್ನು ಖರೀದಿಸಬಹುದು ಎಂದು ರಿಲಯನ್ಸ್ ಜಿಯೋ ಸಂಸ್ಥೆ ತಿಳಿಸಿದೆ.

ಇದೇ ತಿಂಗಳ ಆರಂಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಜಿಯೋ ತನ್ನ ಮೊಟ್ಟ ಮೊದಲ ಲ್ಯಾಪ್‌ಟಾಪ್ ಜಿಯೋಬುಕ್ ಸಾಧನವನ್ನು ಬಿಡುಗಡೆಗೊಳಿಸಿತ್ತು. ಇದೀಗ ರಿಲಯನ್ಸ್ ಡಿಜಿಟಲ್‌ನ ವೆಬ್‌ಸೈಟ್ ಮೂಲಕ ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಜಿಯೋಬುಕ್ ಸಾಧನವನ್ನು ಲೈವ್‌ನಲ್ಲಿ ಇಡಲಾಗಿದ್ದು, 19,500 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಈ ಲ್ಯಾಪ್‌ಟಾಪ್ ಅನ್ನು ಗ್ರಾಹಕರು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Reliance Jio launches its first JioBook laptop: How to buy it for as low as  Rs 13,299 - BusinessToday

ಜಿಯೋಬುಕ್ ಲ್ಯಾಪ್‌ಟಾಪ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎನಿಸುವ ಬಜೆಟ್ ಪ್ರೈಸ್‌ನ ಒಂದು ಲ್ಯಾಪ್‌ಟಾಪ್‌ ಆಗಿದ್ದು, ಜಾಗತಿಕ ಟೆಕ್ ದೈತ್ಯ ಕಂಪೆನಿಗಳಾದ Qualcomm ಮತ್ತು Microsoft ಸಹಭಾಗಿತ್ವದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯು ಈ ಜಿಯೋ ಲ್ಯಾಪ್‌ಟಾಪ್‌ ಅನ್ನು ಅಭಿವೃದ್ಧಿಪಡಿಸಿದೆ. ಹಾಗಾದರೆ ನೂತನ ಜಿಯೋ ಲ್ಯಾಪ್‌ಟಾಪ್ ಹೇಗಿದೆ?, ಈ ಲ್ಯಾಪ್‌ಟಾಪ್ ಮೇಲೆ ಏನೆಲ್ಲಾ ಕೊಡುಗೆಗಳನ್ನು ನೀಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

Reliance JioBook budget Android laptop launched in India for Rs 13,299 in a  Diwali sale!

ಜಿಯೋಬುಕ್ ಲ್ಯಾಪ್‌ಟಾಪ್‌ನ ವೈಶಿಷ್ಟ್ಯಗಳು

  • ಜಿಯೋಬುಕ್ ಲ್ಯಾಪ್‌ಟಾಪ್‌ ವಿಶಾಲವಾದ ಬೆಜೆಲ್‌ಗಳನ್ನು ಹೊಂದಿರುವ 1366×768 ಪಿಕ್ಸೆಲ್ಗಳ ರೆಸಲ್ಯೂಶನ್ ಸಾಮರ್ಥ್ಯ 11.6 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ.
  • ಜಿಯೋಬುಕ್ ಲ್ಯಾಪ್‌ಟಾಪ್‌ Qualcomm Snapdragon 665 SoC ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಅಡ್ರಿನೊ 610 GPU ಸಪೋರ್ಟ್ ಪಡೆದಿದೆ.
  • ಜಿಯೋಬುಕ್ ಲ್ಯಾಪ್‌ಟಾಪ್‌ ತನ್ನದೇ ಆದ JioOS ನಲ್ಲಿ ಕಾರ್ಯನಿರ್ವಹಿಸುತ್ತದೆ, ಈ JioOS ಅನ್ನು ಉತ್ತಮ ಕಾರ್ಯಕ್ಷಮತೆಗಾಗಿ ಹಗುರವಾಗಿ ಆಪ್ಟಿಮೈಸ್ ಮಾಡಲಾಗಿದೆಯಂತೆ.
  • ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡಲು ಜಿಯೋಬುಕ್ ಲ್ಯಾಪ್‌ಟಾಪ್ ನಲ್ಲಿ JioStore ಅನ್ನು ಮೊದಲೇ ಲೋಡ್ ಮಾಡಲಾಗಿದೆ.
  • ಜಿಯೋಬುಕ್ ಲ್ಯಾಪ್‌ಟಾಪ್‌ನಲ್ಲಿ 2GB RAM ಮತ್ತು 32GB eMMC ಸಂಗ್ರಹಣೆ ಇದ್ದು, ಮೈಕ್ರೋ SD ಕಾರ್ಡ್ ಮೂಲಕ 128GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು.
  • ಜಿಯೋಬುಕ್ ಲ್ಯಾಪ್‌ಟಾಪ್‌ 4G ಸಿಮ್ ಕಾರ್ಡ್‌ ಸಪೋರ್ಟ್ ಹೊಂದಿದೆ. ಮತ್ತು ಬ್ಲೂಟೂತ್ 5.0, HDMI ಮಿನಿ ಪೋರ್ಟ್ ಮತ್ತು ವೈ-ಫೈ ಸಂಪರ್ಕ ಆಯ್ಕೆಗಳನ್ನು ನೀಡಲಿದೆ.
  • ಜಿಯೋಬುಕ್ ಲ್ಯಾಪ್‌ಟಾಪ್‌ನಲ್ಲಿ .ಡ್ಯುಯಲ್ 1.0W ಸ್ಟಿರಿಯೊ ಸ್ಪೀಕರ್‌ಗಳು, 3.5mm ಆಡಿಯೊ ಜ್ಯಾಕ್ ಮತ್ತು ವೀಡಿಯೊ ಕರೆಗಾಗಿ 2-ಮೆಗಾಪಿಕ್ಸೆಲ್ ವೆಬ್ ಕ್ಯಾಮೆರಾ ಇದೆ.
  • ಜಿಯೋಬುಕ್ ಲ್ಯಾಪ್‌ಟಾಪ್‌ನಲ್ಲಿ 5,000mAh ಬ್ಯಾಟರಿ ಇದೆ. ಈ ಲ್ಯಾಪ್ ಒಂದೇ ಚಾರ್ಜ್‌ನಲ್ಲಿ 8 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಜಿಯೋಬುಕ್ ಸಾಧನದ ಬೆಲೆ ಮತ್ತು ಲಭ್ಯತೆ

ಮೊದಲೇ ಹೇಳಿದಂತೆ, ದೇಶದಲ್ಲಿ ಜಿಯೋಬುಕ್ ಲ್ಯಾಪ್‌ಟಾಪ್‌ ಅನ್ನು ಇದೀಗ 15,799 ರೂ. ಗಳ ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಈ ಸಾಧನದ ಮೇಲೆ Axis, Kotak, ICICI, HDFC, AU, INDUSIND, DB ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಸಹ ಒದಗಿಸಲಾಗಿದೆ. ಗ್ರಾಹಕರು ರಿಲಯನ್ಸ್ ಡಿಜಿಟಲ್ ಸ್ಟೋರ್ ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಜಿಯೋಬುಕ್ ಲ್ಯಾಪ್‌ಟಾಪ್‌ ಅನ್ನು ಖರೀದಿಸಬಹುದು. ನಂತರ ಹತ್ತಿರದ Jio ಸ್ಟೋರ್‌ಗೆ ಭೇಟಿ ನೀಡಿ, ಜಿಯೋಬುಕ್ ಲ್ಯಾಪ್‌ಟಾಪ್‌ನಲ್ಲಿ ಇರುವ ಅಂತರ್ಗತ SIM ಕಾರ್ಡ್ ಅನ್ನು ಸಕ್ರಿಯಗೊಳಿಸಿಕೊಳ್ಳಬೇಕು ಎಂದು ಜಿಯೋ ಸಂಸ್ಥೆ ತಿಳಿಸಿದೆ.

Jiobook Laptop Now Available For Sale In India All Details Here.