ಹಬ್ಬದ ಖುಷಿಯ ನಡುವೆ ಮನೆಗೆ ಲ್ಯಾಪ್‌ಟಾಪ್‌ ತರಲು ಬಯಸುತ್ತಿರುವಿರೇ? ಇಲ್ಲಿದೆ ಪವರ್‌ಫುಲ್ Intel 12th Gen ಲ್ಯಾಪ್‌ಟಾಪ್‌

24-10-22 09:00 pm       Source: Vijayakarnataka   ಡಿಜಿಟಲ್ ಟೆಕ್

ತಂತ್ರಜ್ಞಾನವು ಅತ್ಯಂತ ಕ್ಲಿಷ್ಟಕರ ಅಥವಾ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸ್ಟ್ರೀಮಿಂಗ್ ಮಾಡುವ ವೇಳೆ, ಇಮೇಜ್ ರೆಂಡರಿಂಗ್, ಗೇಮಿಂಗ್ ಇತ್ಯಾದಿ ಟಾಸ್ಕ್‌ಗಳ ವೇಳೆ ಕಾರ್ಯಕ್ಷಮತೆಯಲ್ಲಿ ಯಾವುದೇ ಅಡೆಚಣೆಯಾಗುವುದಿಲ್ಲ.

ಹಬ್ಬದ ಖುಷಿ ಎಲ್ಲೆಡೆ ಪಸರಿಸುತ್ತಿರುವುದು ಒಂದೆಡೆಯಾದರೆ, ನಮ್ಮ ಜೀವನವನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿನ ಅನೇಕ ಕಾರ್ಯಯೋಜನೆಗಳೂ ಇನ್ನೊಂದೆಡೆ. ಹಬ್ಬದ ವಾತಾವರಣ ಇದೇ ಹೊತ್ತಲ್ಲಿ ಹೊಸತನವನ್ನು ಜೀವನದಲ್ಲಿ ಅಳವಡಿಸುವ ಅವಕಾಶಗಳು ನಮ್ಮೆದುರಿವೆ. ಅಂತೆಯೇ ನಮ್ಮ ದೈನಂದಿನ ಜೀವನದ ಅವಿಭಾಜ್ಯವಾಗಿ ಲ್ಯಾಪ್‌ಟಾಪ್‌ಗಳೂ ಸೇರಿಕೊಂಡಿವೆ. ಉದ್ಯೋಗ, ಗೇಮಿಂಗ್ ಇತ್ಯಾದಿ ಅನೇಕವುಗಳಲ್ಲಿ ಲ್ಯಾಪ್‌ಟಾಪ್‌ ಅನಿವಾರ್ಯತೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಹಬ್ಬದ ಸಂದರ್ಭದಲ್ಲಿ ಅತ್ಯುತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು, ಕೈಗೆಟುಕುವ ದರಗಳಲ್ಲಿ, ಆಫರ್‌ಗಳ ಮೂಲಕ ಲಭ್ಯವಾಗುತ್ತದೆ. ಹಾಗೆಂದು ಸರಿಯಾದ ಹಾಗೂ ತಮ್ಮ ತಮ್ಮ ಕೆಲಸ ಅಥವಾ ಅವಶ್ಯಕತೆಗೆ ತಕ್ಕುದಾದ ಲ್ಯಾಪ್‌ಟಾಪ್‌ಗಳನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಅವುಗಳ ಪ್ರೊಸೆಸರ್, ಸ್ಪೆಸಿಫಿಕೇಶನ್ಸ್, ಫಿಚರ್ಸ್‌ ಇತ್ಯಾದಿ ವಿವರಗಳನ್ನು ನೋಡಿ ಕೊಳ್ಳುವುದು ಸೂಕ್ತವಾಗಿರುತ್ತದೆ. ಹೊಸ ಲ್ಯಾಪ್‌ಟಾಪ್‌ಗಳು ಹೊಸ ಬಗೆಯ ಕೌಶಲ್ಯಗಳನ್ನು, ಹೊಸ ರೀತಿಯ ಮನಸ್ಥಿತಿ ಹಾಗೂ ಕೆಲಸದಲ್ಲಿನ ವಿಧಾನಗಳನ್ನು ಕಲಿಸುತ್ತದೆ. ಲ್ಯಾಪ್‌ಟಾಪ್‌ಗಳು ನಿಮಗೆ ಯಾವುದೇ ವಿಧವಾದ ತಡೆ ಇಲ್ಲದ ಕೆಲಸದ ವಾತಾವರಣವನ್ನು ಒದಗಿಸುತ್ತದೆ ಮಾತ್ರವಲ್ಲದೆ, ಇಂಟರ್ನೆಟ್ ಸೇವೆ, ಗೇಮಿಂಗ್ ಹಾಗೂ ಇನ್ನೂ ಅನೇಕ ಕೆಲಸಗಳಿಗೆ ಸಲೀಸಾದ ದಾರಿ ಒದಗಿಸುತ್ತದೆ.

ಹಾಗಿದ್ದಲ್ಲಿ ನೀವು ಖರೀದಿಸಬೇಕಾದ ಲ್ಯಾಪ್‌ಟಾಪ್‌ ಯಾವುದು?
ನೀವು ಬರವಣಿಗೆ ಅಥವಾ ಇದಕ್ಕೆ ಸಂಬಂಧಿತ ಕೆಲಸಗಳಲ್ಲಿ ತೊಡುಗಿಕೊಳ್ಳುವವರು ಎಂದಾದಲ್ಲಿ, ಅಥವಾ ದಿನ ನಿತ್ಯ ಲ್ಯಾಪ್‌ಟಾಪ್‌ ಬಳಕೆದಾದರರು ಎಂದಾದಲ್ಲಿ, ಇತ್ತೀಚಿನ ಪ್ರೊಸೆಸರ್: 12th Generation Intel Core Processors ಗಳ ಲ್ಯಾಪ್‌ಟಾಪ್‌ ಆಯ್ಕೆ ಅತ್ಯುತ್ತಮ ಎನ್ನಬಹುದು. ಇದು ನಿಮ್ಮ ನಿತ್ಯದ ಕೆಲಸದ ಒತ್ತಡವನ್ನು ಸುಲಭವಾಗಿ ತಡೆದುಕೊಳ್ಳುವುದು. ಅದೇ ರೀತಿ ನೀವು ಗೇಮಿಂಗ್, ಸ್ಟ್ರೀಮಿಂಗ್ ಅಥವಾ ಪ್ರೊಫೆಷನಲ್ಸ್‌ ಆಗಿದ್ದಲ್ಲಿಯೂ ನಿಮ್ಮ ಅವಶ್ಯಕತೆ ಪೂರೈಸಲು ಇದು ಸಹಕಾರಿ. ಇದರಲ್ಲಿನ Performance and Efficient-cores (P-core and E-core) ತಂತ್ರಜ್ಞಾನವು ಅತ್ಯಂತ ಕ್ಲಿಷ್ಟಕರ ಅಥವಾ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಸ್ಟ್ರೀಮಿಂಗ್ ಮಾಡುವ ವೇಳೆ, ಇಮೇಜ್ ರೆಂಡರಿಂಗ್, ಗೇಮಿಂಗ್ ಇತ್ಯಾದಿ ಟಾಸ್ಕ್‌ಗಳ ವೇಳೆ ಕಾರ್ಯಕ್ಷಮತೆಯಲ್ಲಿ ಯಾವುದೇ ಅಡೆಚಣೆಯಾಗುವುದಿಲ್ಲ.

ಈ high-end processorsನ ಸಹಾಯದಿಂದ discrete graphics cards ಹಾಗೂ storage cards ಗಳ ಕಾರ್ಯಕ್ಷಮತೆಯನ್ನು ಶಕ್ತಿಶಾಲಿಗೊಳಿಸಿ, ಬೆಂಬಲಿಸುತ್ತದೆ. PCIe 5.0 ಹಾಗೂ ಅತವೇಗದ DDR5 ಮೆಮೊರಿ ಅಥವಾ Intel® Wi-Fi 6E (Gig+) ನಿಂದ 3 ಪಟ್ಟು ಅಧಿಕ ವೇಗವಾದ ಕನೆಕ್ಟಿವಿಟಿ ಯಾವುದೇ ಸಮಸ್ಯೆ ಇಲ್ಲದೇ ಸಾಧ್ಯವಿದೆ. ಅದೇರೀತಿ ಎಕ್ಸ್‌ಟರ್ನಲ್ 4K ಮಾನಿಟರ್ ಡಿಸ್‌ಪ್ಲೇ ಕನೆಕ್ಟ್ ಮಾಡಲು ಅನುಕೂಲವಾಗುವಂತೆ Thunderbolt™ 4 ನೀಡಲಾಗಿದೆ. ಈ ಲ್ಯಾಪ್‌ಟಾಪ್ ಒಟ್ಟಿನಲ್ಲಿ ಪವರ್‌ ಪ್ಯಾಕ್‌ ಆಗಿದ್ದು, Noise suppression, auto-framing, ಹಾಗೂ optimization bandwidth ಮತ್ತು ಗೇಮಿಂಗ್ ಹಾಗೂ ಇತರೆ ಹೆವಿ ಲೋಡ್ ಆಕ್ಟಿವಿಟಿಯ ವೇಳೆ ಅನುಕೂಲಕರಕ್ಕಾಗಿ video resolution ನಲ್ಲಿ ಆಪ್ಟಿಮೈಸೇಷನ್ ಮಾಡಲಾಗಿದೆ.

Acer Aspire 3

Acer Aspire 3

Acer Aspire 3 ನ ಆಯ್ಕೆ ಎಂದಿಗೂ ತಪ್ಪಾಗಲಾರದು. 12th Generation Intel Core i5-1235U processor ಹೊಂದಿರುವ ಈ ಲ್ಯಾಪ್‌ಟಾಪ್‌, ಅತ್ಯಂತ ವೇಗವಾದ ಕಾರ್ಯಕ್ಷಮತೆಗೆ ಅತ್ಯುತ್ತಮ ಎನಿಸಿಕೊಳ್ಳುತ್ತದೆ. 10 cores, 3.30 GHz SPEED, ಹಾಗೂ 12MB Intel Smart Cache ತಂತ್ರಜ್ಞಾನವು ನಿಮ್ಮ ಎಲ್ಲಾ ಬಗೆಯ ಆನ್‌ಲೈನ್‌ ಚಟುವಟಿಕೆಗಳನ್ನು ಹೈಸ್ಪೀಡ್‌ನಲ್ಲಿ ಇಡುತ್ತದೆ.12th Generation Intel Core Processors ನಿಮಗೆ ಹೊಸ ಬಗೆಯ ಕಾಂಬಿನೇಷನ್‌ನಲ್ಲಿ ಕಾರ್ಯಕ್ಷಮತೆಯನ್ನು ನೀಡಲಿದ್ದು, Performance ಹಾಗೂ Efficient-cores (P-core and E-core) ಇದರಿಂದ ಮಲ್ಟಿಟಾಸ್ಕಿಂಗ್, ಫೋಟೋ ಹಾಗೂ ವಿಡಿಯೋ ಶೇರಿಂಗ್ ಇತ್ಯಾದಿ ಚಟುವಟಿಕೆಗಳನ್ನು ಒಂದೇ ಬಾರಿಗೆ ಕಾರ್ಯಗತಗೊಳಿಸಲು ಸಹಕಾರಿ.

2. Lenovo Ideapad Slim 3

lenovo2


ಕೊಂಡೊಯ್ಯಲು ಸುಲಭ ಹಾಗೂ ಹಗುರವಾದ ಲ್ಯಾಪ್‌ಟಾಪ್‌ ನಿಮ್ಮ ಆದ್ಯತೆಯಾಗಿದ್ದಲ್ಲಿ, Ideapad Slim 3 ನಿಮ್ಮ ಅತ್ಯುತ್ತಮ ಆಯ್ಕೆ ಎಂದೇ ಪರಿಗಣಿಸಬಹುದು. ಅತ್ಯುತ್ತಮ ವಿನ್ಯಾಸ ಹಾಗೂ 12th Gen Intel Core i5-1235U7 ಕಾಂಬಿನೇಷನ್‌ ದಿನ ನಿತ್ಯದ ಬಳಕೆಗೆ ಬೆಸ್ಟ್ ಫಲಿತಾಂಶ ನೀಡುತ್ತದೆ. ಇದರಲ್ಲಿನ Intel Dynamic Tuning technology (DTT) ಪ್ರೊಸಸರ್ ತಂತ್ರಜ್ಞಾನವು ದೀರ್ಘಕಾಲದ ಸ್ಟ್ರೀಮಿಂಗ್ ಹಾಗೂ ಬ್ರೌಸಿಂಗ್‌ನಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸುತ್ತದೆ. ಬ್ಯಾಟರಿ ಬಳಕೆಯ ಪರ್ಫಾಮೆನ್ಸ್‌ನಲ್ಲಿ ಆಪ್ಟಿಮೈಸೇಷನ್‌ ನಿರ್ವಹಿಸುವುದರ ಜತೆಗೆ ದೀರ್ಘಕಾಲಕ್ಕೆ ಬ್ಯಾಟರಿ ನೀಡುತ್ತದೆ.
ಖರೀದಿಸಿ

3. HP Pavilion 15-eg2009TU

hp3


ದೊಡ್ಡದಾದ ಡಿಸ್‌ಪ್ಲೇ ಇಷ್ಟಪಡುವವರಿಗೆ HP Pavilion ಅತ್ಯುತ್ತಮ ಆಯ್ಕೆ. ಕೈಗೆಟುಕುವ ಹಾಗೂ ಗುಣಮಟ್ಟದ ಲ್ಯಾಪ್‌ಟಾಪ್‌ ವಿಭಾಗದಲ್ಲಿರುವ ಇದರಲ್ಲಿ 15.6 display ನೀಡಲಾಗಿದೆ.Intel Core i5 12th Gen variant 1240P processor ಜತೆಗೆ clock speed of Max Turbo frequency up to 4.4 GHz ಈ ಲ್ಯಾಪ್‌ಟಾಪ್‌ನ ವಿಶೇಷತೆ.ಅಲ್ಲದೆ Intel Integrated Iris Xe Graphic Processor ಎಚ್‌ಡಿ ವಿಡಿಯೋ ಸ್ಟ್ರೀಮಿಂಗ್ ಹಾಗೂ ಎಡಿಟಿಂಗ್ ಅನುಭವವನ್ನು ನೀಡಲಿದೆ. ಗೇಮಿಂಗ್, ಗ್ರಾಫಿಕ್ಸ್‌ ಹಾಗೂ ಆಡ್ಆನ್‌ಗಳ ಸಹಿತ ಮಾಡಬಹುದಾದ ಟಾಸ್ಕ್‌, ಕ್ರಿಯೇಟಿವ್‌ ಗೇಮ್ ಇತ್ಯಾದಿ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ನಿಮ್ಮನ್ನು ಮಲ್ಟಿಟಾಸ್ಕಿಂಗ್‌ ಪ್ರೊ ಎಂದು ಗುರುತಿಸಿಕೊಳ್ಳುವಂತೆ ಮಾಡಲು ಸಹಕಾರಿ

4. ASUS Zenbook 14 Flip OLED

asus4

ಒಂದು ವೇಳೆ ನೀವು convertible laptop ಯೋಚಿಸುತ್ತಿದ್ದಲ್ಲಿ ASUS Zenbook 14 Flip OLED ಅತ್ಯುತ್ತಮ ಆಯ್ಕೆ ಎನ್ನಬಹುದು.Intel Core i7-1165G7 processor ಹಾಗೂ 14-inch OLED display with a refresh rate of 90HZ ಈ ಲ್ಯಾಪ್‌ಟಾಪ್‌ ವಿಶೇಷತೆ. ಲ್ಯಾಪ್‌ಟಾಪ್‌ ಕಾರ್ಯಕ್ಷಮತೆ ಹಾಗೂ ಡಿಸ್‌ಪ್ಲೇ ಅತ್ಯುತ್ತಮವೆಂದೆನಿಸಿಕೊಂಡಿದೆ.
ಖರೀದಿಸಿ

5. ASUS Vivobook Flip

asus5


Sturdy Hinge Design ಹೊಂದಿರುವ ASUS Vivobook ಲ್ಯಾಪ್‌ಟಾಪ್‌ಗಳು, tent, stand, tablet and laptop ವಿಧಗಳಲ್ಲಿ ಬಳಕೆ ಮಾಡಬಹುದು. optimal performance ಹಾಗೂ smooth multitasking ಅನುಭವವನ್ನು ನೀಡುತ್ತದೆ.Intel Gaussian and Neural Accelerator 3.0 processes ಹೊಂದಿದ್ದು, AI speech ಹಾಗೂ audio applications ಗಳಾದ neural noise cancellation CPU ರಿಸೋರ್ಸ್‌ಗಳನ್ನು ಅತ್ಯುತ್ತಮ ಕಾರ್ಯಕ್ಷಮತೆಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ.
ಖರೀದಿಸಿ

6. ASUS Vivobook S15

ASUS6


ASUS ಸಂಸ್ಥೆಯ ಇನ್ನೊಂದು ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ಪಟ್ಟಿಯಲ್ಲಿ Vivobook S15 ಸೇರಿಕೊಳ್ಳುತ್ತದೆ. 12th Gen Intel EVO Core H-Series processor ಅಲ್ಲದೆ ಪ್ರತ್ಯೇಕ ಗ್ರಾಫಿಕ್ಸ್‌ ಕಾರ್ಡ್‌ಗಳು ಗೇಮಿಂಗ್ ಹಾಗೂ ಎಡಿಟಿಂಗ್ ಅನುಭವ ಅತ್ಯುತ್ತಮಗೊಳಿಸುತ್ತದೆ. ಅಲ್ಲದೆ 2 Thunderbolt 4 USB-C ಪೋರ್ಟ್ಸ್‌ಗಳು ಲಭ್ಯವಿದ್ದು, 40Gbps ವರೆಗಿನ ವೇಗ ಹಾಗೂ ಮಲ್ಟಿಪಲ್ 4K ಮಾನಿಟರ್‌ಗಳ ಕನೆಕ್ಟಿವಿಟಿಗೆ ಸಹಕಾರಿಯಾಗಿರುತ್ತದೆ.

7. Dell Vostro 5620

DELL7


ಈ ಲ್ಯಾಪ್‌ಟಾಪ್‌ನಿಂದ ನಿಮ್ಮ ಪ್ರೊಡಕ್ಟಿವಿಟಿ ಬೆಸ್ಟ್ ಎಂದೆನಿಸುವುದು ಖಚಿತವೇ! ಇದಕ್ಕೆ ಪ್ರಮುಖ ಕಾರಣ ಎಂದರೆ 12th Gen Intel Core i5-1240P processor. ಟೆಕ್ಕಿ ಜನರಿಗೆ ಹೆಚ್ಚು ಅಪ್ಯಾಯಮಾನವಾಗಿರುವ Dell Vostro 5620, ಅತ್ಯುತ್ತಮ ಸ್ಪೆಸಿಫಿಕೇಶನ್ ಹೊಂದಿದ್ದು, ದಿನವಿಡೀ ಅತ್ಯುತ್ತಮ ಕಾರ್ಯಕ್ಷಮತೆ ನೀಡಲು ಶಕ್ತವಾಗಿದೆ.

8. Dell Inspiron 7620

DELL8


Intel Core i5 12th Gen ಜತೆಗೆ 16-inch ಸ್ಕ್ರೀನ್ ಹೊಂದಿರುವ Dell Inspiron 7620 ಅತ್ಯುತ್ತಮ ವ್ಯೂವಿಂಗ್ ಅನುಭವವನ್ನು ನೀಡುತ್ತದೆ. ಗೇಮಿಂಗ್ ಹಾಗೂ ದಿನನಿತ್ಯದ ಕೆಲಸಕ್ಕೆ ಹೆಚ್ಚು ಒಗ್ಗಿಕೊಳ್ಳುವ ಮಾಡೆಲ್‌ಗಳಲ್ಲಿ ಈ ಲ್ಯಾಪ್‌ಟಾಪ್‌ ಸ್ಥಾನಪಡೆದುಕೊಂಡಿದೆ. ಅಷ್ಟೇ ಅಲ್ಲದೆ ntel Iris Xe Graphics ಇದರಲ್ಲಿನ ಇನ್ನೊಂದು ಪ್ಲಸ್‌ಪಾಯಿಂಟ್. ಇದರಿಂದ ವ್ಯೂವಿಂಗ್, ಎಡಿಟಿಂಗ್ ಹಾಗೂ ಮಲ್ಟಿಮೀಡಿಯಾ ಸಂಬಂಧಿತ ಕೆಲಸಗಳು ಸುಗಮವಾಗುತ್ತದೆ.

9. Samsung Galaxy Book2

SAMSUNG9


ಮಲ್ಟಿಟಾಸ್ಕ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಡಿವೈಸ್ ಎಂದರೆ ಅತಿಶಯೋಕ್ತಿಯಾಗದು. 12th Generation Intel Core i5-1235U processor ಸಹಾಯದಿಂದ ನೀವು ವಿಡಿಯೋ ಕಾಲ್ ಜತೆಗೆ 10-12 ಟ್ಯಾಬ್ ನಲ್ಲಿ ಬ್ರೌಸಿಂಗ್ ಸಹ ಒಂದೇ ಸಲಕ್ಕೆ ಮಾಡಬಹುದು. ಯಾವುದೇ ರೀತಿಯ ಸಮಸ್ಯೆ ಕಾಣದು. ಉದ್ಯೋಗಿಗಳ ಫೇವರೆಟ್‌ ಲಿಸ್ಟ್‌ನಲ್ಲಿರುವ ಲ್ಯಾಪ್‌ಟಾಪ್‌ ಇದಾಗಿದೆ.

10. Samsung Galaxy Book2 360

samsung10

Intel Iris Xe graphics, 16GB of RAM, 512GB of storage space, stereo speakers ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಹೊಂದಿದೆ. Samsung Galaxy Book2 360. ಅಲ್ಲದೆ Bluetooth v5.1 and WiFi 6E ಯ host of connectivity ಆಯ್ಕೆಗಳೂ ಲಭ್ಯ. ಡಿಸ್‌ಪ್ಲೇಯನ್ನು 360-degree ಬಳಸಲು ಸಾಧ್ಯವಿರುವುದರಿಂದ ಇದು ನಿಮ್ಮ 13.3-inch ಟ್ಯಾಬ್ಲೆಟ್ ಆಗಿಯೂ ಕೆಲಸ ಮಾಡುತ್ತದೆ. ಬ್ಯಾಟರಿಯೂ ದಿನ ಪೂರ್ತಿ ಲಭ್ಯವಾಗುತ್ತದೆ!

ಈ ಹಬ್ಬದ ಸೀಸನ್‌ನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್, ಬ್ಯಾಟರಿ ಬಾಳಿಕೆ ಹಾಗೂ ದರಕ್ಕೆ ಯೋಗ್ಯವಾದ ಲ್ಯಾಪ್‌ಟಾಪ್‌ ಖರೀದಿಸಿ. 12th Generation Intel Core ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಲಾಭವನ್ನು ನಿಮ್ಮ ನಿತ್ಯ ಜೀವನದಲ್ಲಿ ಹಾಗೂ ಉದ್ಯೋಗ ಕ್ಷೇತ್ರದಲ್ಲೂ ಪಡೆಯಬಹುದು.

Bring Best Intel 12th Generation Laptop In This Festive Season.