ಬ್ರೇಕಿಂಗ್ ನ್ಯೂಸ್
01-11-22 07:32 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ನೋಕಿಯಾದ ಮೊಟ್ಟ ಮೊದಲ 5G ಸ್ಮಾರ್ಟ್‌ಫೋನ್ ದೇಶದಲ್ಲಿಂದು ಬಿಡುಗಡೆಯಾಗಿದೆ. ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆ ನೋಕಿಯಾ ತನ್ನ ವಿನೂತನ Nokia G60 5G ಸ್ಮಾರ್ಟ್‌ಫೋನನ್ನು ಮಧ್ಯಮ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದು, ಈ ಹೊಸ ಸ್ಮಾರ್ಟ್‌ಫೋನ್ Snapdragon 695 5G ಪ್ರೊಸೆಸರ್, 120Hz ರಿಫ್ರೆಶ್ ರೇಟ್ ಸಾಮರ್ಥ್ಯದ HD+ ಡಿಸ್‌ಪ್ಲೇ, 4,500mAh ಬ್ಯಾಟರಿ ಮತ್ತು Jio True 5G ಸೇವೆಗೆ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ Nokia G60 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Nokia G60 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Nokia G60 5G ಸ್ಮಾರ್ಟ್‌ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.58-ಇಂಚಿನ ಫುಲ್ HD+ (1,080x2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಈ ಡಿಸ್‌ಪ್ಲೇಯು 'ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5' ರಕ್ಷಣೆ ಪಡೆದಿದೆ. ಹುಡ್ ಅಡಿಯಲ್ಲಿ, 6GB RAM + 128GB ಮೆಮೊರಿ ಜೊತೆಗೆ ಜೋಡಿಲಾಗಿರುವ Snapdragon 695 5G ಪ್ರೊಸೆಸರ್ ಹೊಂದಿರುವ ಈ Nokia G60 5G ಸ್ಮಾರ್ಟ್‌ಫೋನ್ Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೂ ಮೂರು ಬಾರಿ OS ಅಪ್‌ಗ್ರೇಡ್‌ಗಳು ಮತ್ತು ಮೂರು ವರ್ಷಗಳವರೆಗೆ ಮಾಸಿಕ Android ಭದ್ರತಾ ನವೀಕರಣಗಳನ್ನು ಒದಗಿಸುವ ಭರವಸೆಯನ್ನು ಕಂಪೆನಿ ನೀಡಿದೆ.
Nokia G60 5G ಸ್ಮಾರ್ಟ್‌ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ತರಲಾಗಿದ್ದು, ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ಕ್ ಕ್ಯಾಮೆರಾಗಳನ್ನು ಹೊಂದಿದೆ. ಈ ಕ್ಯಾಮೆರಾವು ನೈಟ್ ಮೋಡ್ 2.0, ಡಾರ್ಕ್ ವಿಷನ್ ಮತ್ತು AI ಪೋರ್ಟ್ರೇಟ್‌ನಂತಹ ಇಮೇಜಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಳನ್ನು ಮಾಡಲು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮರಾ ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ 4,500mAh ಸಾಮರ್ಥ್ಯದ ದೊಡ್ಡದಾದ ಬ್ಯಾಟರಿಯಿಂದ ಶಕ್ತವಾಗಿದೆ.
Nokia G60 5G ಸ್ಮಾರ್ಟ್‌ಫೋನ್ ಡ್ಯುಯಲ್-ಸಿಮ್ (ನ್ಯಾನೋ) 5G ಸ್ಮಾರ್ಟ್‌ಫೋನ್ ಆಗಿದ್ದು eSIMಗೆ ಬೆಂಬಲ ಹೊಂದಿದೆ. ಭಾರತದ ಟೆಲಿಕಾಂ ಕಂಪೆನಿಗಳು ಬಳಸುವ 5G NSA ಆರ್ಕಿಟೆಕ್ಚರ್ ಜೊತೆಗೆ Jio True 5G ಹೊಂದಾಣಿಕೆಗಾಗಿ 5G SA ತಂತ್ರಜ್ಞಾನವನ್ನು ಹೊಂದಿದೆ ಮತ್ತು ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.1, ಮತ್ತು NFC ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇಷ್ಟೇ ಅಲ್ಲದೇ, Nokia G60 5G ಸ್ಮಾರ್ಟ್‌ಫೋನಿನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP52 ರೇಟಿಂಗ್ ನೀರು ಮತ್ತು ಧೂಳು ನಿರೋಧಕ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ನಂತಹ ಗಮನಸೆಳೆಯುವಂತಹ ವೈಶಿಷ್ಟ್ಯಗಳನ್ನು ನೋಡಬಹುದು.
ಭಾರತದಲ್ಲಿ Nokia G60 5G ಸ್ಮಾರ್ಟ್‌ಫೋನಿನ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Nokia G60 5G ಸ್ಮಾರ್ಟ್‌ಫೋನಿನ ಏಕೈಕ 6GB RAM + 128GB ಸ್ಟೋರೇಜ್ ಮಾದರಿ ಫೋನ್ 29,999 ರೂ.ಬೆಲೆಯಲ್ಲಿ ಬಿಡುಗಡೆಯಾಗಿದೆ. ಅಧಿಕೃತ Nokia ಸ್ಟೋರ್‌ನಿಂದ ನವೆಂಬರ್ 7 ರವರೆಗೆ ಮುಂಗಡವಾಗಿ ಆರ್ಡರ್ ಮಾಡಲು ಲಭ್ಯವಿರುವ ಈ ಸಾಧನದ ಜೊತೆಗೆ 3,599 ರೂ. ಬೆಲೆಯ Nokia Power Earbuds Lite ಸಾಧನ ಉಚಿತವಾಗಿ ದೊರೆಯಲಿದೆ ಮತ್ತು ನವೆಂಬರ್ 8 ರಂದು Nokia.com ಮತ್ತು ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ.
Nokia G60 5g With 120hz Display Launched In India Price, Specifications.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm