4000ಕ್ಕೂ ಹೆಚ್ಚು ಟ್ವಿಟ್ಟರ್ ಉದ್ಯೋಗಿಗಳು ವಜಾ!..ಇದರಲ್ಲಿಯೂ ಎಲಾನ್ ಮಸ್ಕ್ ಸ್ಟೈಲ್ ನೋಡ್ರಿ!

04-11-22 07:28 pm       Source: Vijayakarnataka   ಡಿಜಿಟಲ್ ಟೆಕ್

ಟ್ವಿಟ್ಟರ್ ಸಂಸ್ಥೆಯನ್ನು ಸ್ವಾಧೀನಪಡಿಸಕೊಂಡ ನಂತರ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಸೇರಿದಂತೆ ಹಲವು ಉನ್ನತ ಉದ್ಯೋಗಿಗಳನ್ನು ಎಲಾನ್ ಮಸ್ಕ್ ಅವರು ವಜಾಗೊಳಿಸಿದ್ದರು.

'ನೀವು ಕಚೇರಿಯಲ್ಲಿ ಇದ್ದರೆ ಅಥವಾ ಕಚೇರಿಗೆ ಬರುವ ದಾರಿಯಲ್ಲಿ ಇದ್ದರೆ ದಯಮಾಡಿ ಮನೆಗೆ ಮರಳಿ' ಎಂದು ಟ್ವಿಟ್ಟರ್ ತನ್ನ ಸಾವಿರಾರು ಉದ್ಯೋಗಿಗಳಿಗೆ ಮೇಲ್ ಮೂಲಕ ವಜಾಗೊಳಿಸುವ ಸಂದೇಶವನ್ನು ಕಳುಹಿಸಿದೆ.! ಟ್ವಿಟ್ಟರ್ ಸಂಸ್ಥೆಯು ಎಲಾನ್ ಮಸ್ಕ್ ಅವರ ಕೈಸೇರಿದ ನಂತರ ಹಲವು ಉದ್ಯೋಗಿಗಳು ವಜಾಗೊಳ್ಳುವ ಆತಂಕವನ್ನು ಎದುರಿಸುತ್ತಿದ್ದರು. ಇದೀಗ ಅವರ ಆಂತಕ ನಿಜವಾಗಿದ್ದು, ಎಲಾನ್ ಮಸ್ಕ್ ಅವರು ಇಂದಿನಿಂದ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್ ಸಂಸ್ಥೆಯನ್ನು ಸ್ವಾಧೀನಪಡಿಸಕೊಂಡ ನಂತರ ಸಿಇಒ ಪರಾಗ್ ಅಗರ್‌ವಾಲ್ ಅವರನ್ನು ಸೇರಿದಂತೆ ಹಲವು ಉನ್ನತ ಉದ್ಯೋಗಿಗಳನ್ನು ಎಲಾನ್ ಮಸ್ಕ್ ಅವರು ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ಸಂಸ್ಥೆ ಆಡಳಿತ ಮಂಡಳಿಯನ್ನು ಸಹ ವಿಸರ್ಜಿಸಿ ಟ್ವಿಟ್ಟರ್ ಕಂಪೆನಿಗೆ ಏಕೈಕ ನಿರ್ದೇಶಕರಾಗಿ ಉಳಿದಿದ್ದರು. ಇದೀಗ ಸಂಸ್ಥೆಯ ವೆಚ್ಚಕಡಿತ ಹಾಗೂ ಕೆಲಸದ ಸಂಸ್ಕೃತಿಯನ್ನು ಬದಲಾವಣೆ ತರುವ ನಿಟ್ಟಿನಲ್ಲಿ 4000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಎಲಾನ್ ಮಸ್ಕ್ ಅವರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Twitter doesn't believe in free speech... like we're all commie': secret  recording reveals - The Economic Times

ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸುವ ಉದ್ದೇಶದಿಂದಲೇ ಶುಕ್ರವಾರದಿಂದ ವಿಶ್ವದಾದ್ಯಂತ ಟ್ವಿಟ್ಟರ್ ಸಂಸ್ಥೆಯ ಎಲ್ಲಾ ಕಚೇರಿಗಳನ್ನು ಮುಚ್ಚಲಾಗಿದೆ ಮತ್ತು ಕಚೇರಿಗಳಿಗೆ ಉದ್ಯೋಗಿಗಳ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ. ಟ್ವಿಟ್ಟರ್ ಬಳಕೆದಾರರ ಮಾಹಿತಿ ಸಂರಕ್ಷಣೆ, ಉದ್ಯೋಗಿಗಳ ಸುರಕ್ಷತೆ ಹಾಗೂ ಸಂಸ್ಥೆಯ ಸೊತ್ತುಗಳ ಸುರಕ್ಷತೆಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದ್ದು, ಟ್ವಿಟ್ಟರ್ ಕಚೇರಿಗಳ ಎಲ್ಲಾ ಆಕ್ಸಿಸ್ ಬ್ಯಾಡ್ಜ್‌ಗಳನ್ನು ಸಹ ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.

ಟ್ವಿಟರ್ ಉದ್ಯೋಗಿಗಳಿಗೆ ಕಳುಹಿಸಲಾಗಿರುವ ಆಂತರಿಕ ಇಮೇಲ್ ಮೂಲಕ ಜಗತ್ತಿನಾದ್ಯಂತ ಹಲವಾರು ಸ್ಥಳಗಳಲ್ಲಿ ಸಾವಿರಾರು ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ರಾಯಿಟರ್ಸ್ ವರದಿಯ ಪ್ರಕಾರ, ವಜಾಗೊಂಡಿರುವ ಉದ್ಯೋಗಿಗಳಿಗೆ ಕಳುಹಿಸಲಾದ ಮೇಲ್‌ನಲ್ಲಿ, 'ಟ್ವಿಟ್ಟರ್ ಸಂಸ್ಥೆಯನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುವ ಪ್ರಯತ್ನದಲ್ಲಿ, ನಾವು ಶುಕ್ರವಾರ ನಮ್ಮ ಜಾಗತಿಕ ಉದ್ಯೋಗಿಗಳನ್ನು ಕಡಿಮೆ ಮಾಡುವ ಕಷ್ಟಕರ ಪ್ರಕ್ರಿಯೆಯ ಮೂಲಕ ಹೋಗುತ್ತೇವೆ" ಎಂದು ಟ್ವಿಟ್ಟರ್ ಉಲ್ಲೇಖಿಸಿದೆ ಎನ್ನಲಾಗಿದೆ.

If You re On Way To Office, Please Return Twitter.