ಭಾರತದಲ್ಲಿ 'ಟ್ವಿಟರ್ ಬ್ಲೂ' ಸೇವೆ ಆರಂಭದ ಸಮಯ ಫಿಕ್ಸ್!..ಬೆಲೆ ಎಷ್ಟು ಗೊತ್ತಾ?

08-11-22 07:39 pm       Source: Vijayakarnataka   ಡಿಜಿಟಲ್ ಟೆಕ್

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಹೊಂದಿರುವ ಹೊಸ ಆವೃತ್ತಿಯನ್ನು ಇಂದು iOS ಸಾಧನಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯ ಆರಂಭಿಕ ಉಡಾವಣೆಯನ್ನು ಒಳಗೊಂಡಿದ್ದು, ಇದೀಗ ಸೈನ್ ಅಪ್ ಮಾಡುವ ಬಳಕೆದಾರರು "ಬ್ಲೂ ಚೆಕ್" ಪರಿಶೀಲನೆಯನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಮಾಲೀಕತ್ವ ವಹಿಸಿದ ಬಳಿಕ ಘೋಷಿಸಲಾಗಿದ್ದ 'ಟ್ವಿಟ್ಟರ್ ಬ್ಲೂ ಚಂದಾದಾರಿಕೆ' ಸೇವೆಯನ್ನು ಇಂದು ಅಧಿಕೃತವಾಗಿ ಹೊರತಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು $8 ಬೆಲೆಯಲ್ಲಿ ಪರಿಶೀಲನಾ ಸೇವೆಯನ್ನು ಒದಗಿಸಲಾಗುವುದು ಎಂದು ಘೋಷಿಸಿದ್ದರು. ಟ್ವಿಟ್ಟರ್ ಇಂದು ಈ ಹೊಸ ಸೇವೆಯನ್ನು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್ ನಂತಹ ಆಯ್ದ ದೇಶಗಳಲ್ಲಿ ಈ ಹೊಸ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಗಾದರೆ, 'ಟ್ವಿಟ್ಟರ್ ಬ್ಲೂ ಚಂದಾದಾರಿಕೆ' ಸೇವೆ ಹೇಗಿದೆ?, ಭಾರತೀಯರಿಗೆ ಈ ಹೊಸ ಸೇವೆ ಲಭ್ಯವಾಗುವುದು ಯಾವಾಗ?, ದೇಶದಲ್ಲಿ 'ಟ್ವಿಟ್ಟರ್ ಬ್ಲೂ ಚಂದಾದಾರಿಕೆ'ಯ ಬೆಲೆ ಎಷ್ಟಿರಬಹುದು ಮತ್ತು ಇದರಿಂದ ಸಿಗುವ ಲಾಭಗಳು ಯಾವುವು ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೋಡೋಣ ಬನ್ನಿ.

ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಸೌಲಭ್ಯ ಹೇಗಿದೆ?
ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಹೊಂದಿರುವ ಹೊಸ ಆವೃತ್ತಿಯನ್ನು ಇಂದು iOS ಸಾಧನಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯ ಆರಂಭಿಕ ಉಡಾವಣೆಯನ್ನು ಒಳಗೊಂಡಿದ್ದು, ಇದೀಗ ಸೈನ್ ಅಪ್ ಮಾಡುವ ಬಳಕೆದಾರರು "ಬ್ಲೂ ಚೆಕ್" ಪರಿಶೀಲನೆಯನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮತ್ತು ಇತರ ಹೊಸ ವೈಶಿಷ್ಟ್ಯಗಳನ್ನು "ಶೀಘ್ರದಲ್ಲೇ ಬರಲಿದೆ" ಎಂದು ಸೂಚಿಸಲಾಗಿದೆ.

How To Create A Twitter Account For Your Brand |

ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಯಾವಾಗ ಆರಂಭವಾಗುತ್ತದೆ ಮತ್ತು ಭಾರತೀಯರು ಎಷ್ಟು ಪಾವತಿಸಬೇಕಾಗುತ್ತದೆ?
ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯು ನವೆಂಬರ್ ಅಂತ್ಯದ ವೇಳೆಗೆ ಆರಂಭವಾಗಲಿದೆ. ಮುಂದಿನ ಒಂದು ತಿಂಗಳಿನ ಒಂಗಾಗಿ ಭಾರತದಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ತರುವುದಾಗಿ ಎಲಾನ್ ಮಸ್ಕ್ ಅವರೇ ಖಚಿತಪಡಿಸಿದ್ದಾರೆ. ಭಾರತೀಯ ಬಳಕೆದಾರರ "ಖರೀದಿ ಸಾಮರ್ಥ್ಯ"ವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಒದಗಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾರು ಬೇಕಾದರೂ ಖರೀದಿಸಬಹುದೇ?..ಎಲ್ಲರಿಗೂ ಬ್ಲೂ ಟಿಕ್ ಬಿಹ್ನೆಯು ದೊರೆಯುತ್ತದೆಯೇ?
ಹೌದು, ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಯಾರು ಬೇಕಾದರೂ ಖರೀದಿಸಬಹುದು. ಸೆಲೆಬ್ರಿಟಿಗಳು, ಕಂಪನಿಗಳು ಮತ್ತು ರಾಜಕಾರಣಿಗಳಂತೆ ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವರು ಅವಕಾಶ ನೀಡಲಿದ್ದಾರೆ. ಹೀಗೆ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗೆ ಗ್ರಾಹಕರಾದ ಪ್ರತಿಯೋರ್ವರಿಗೂ 'ಬ್ಲೂ ಟಿಕ್' ಚಿಹ್ನೆಯ ಜೊತೆಗೆ ಕೆಲವು ಪ್ರಿಮೀಯಂ ವೈಶಿಷ್ಟ್ಯಗಳು ಲಭ್ಯವಾಗುತ್ತದೆ. ಇದನ್ನೇ ಎಲಾನ್ ಮಸ್ಕ್ ಅವರು 'ಪವರ್ ಟು ಪೀಪಲ್' ಎಂದು ಕರೆದಿದ್ದಾರೆ.

Twitter begins edit button feature testing - E247MAG

ನೀವು ಈಗಾಗಲೇ ದೃಢೀಕರಿಸಿದ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದರೆ ಬ್ಲೂ ಟಿಕ್ ಉಳಿಸಿಕೊಳ್ಳಲು ಹಣ ಪಾವತಿಸಬೇಕೇ?
ಹೌದು. ಹೊಸ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಆರಂಭವಾದ ನಂತರ ಪ್ರತಿಯೋರ್ವರೂ ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದು ಟ್ವಿಟ್ಟರ್ ಖಚಿತಪಡಿಸಿದೆ. ನೀವು ಹೊಸದಾಗಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಯನ್ನು ಪಡೆಯದಿದ್ದರೆ ಈಗಾಗಲೇ ಪರಿಶೀಲಿಸಲಾದ ಟ್ವಿಟ್ಟರ್ 'ಬ್ಲೂ ಟಿಕ್' ಚಿಹ್ನೆಯನ್ನು ಕಳೆದುಕೊಳ್ಳುತ್ತೀರಾ. ಆದರೆ, ಈಗಾಗಲೇ ಬ್ಲೂ ಟಿಕ್ ಚಿಹ್ನೆಯನ್ನು ಹೊಂದಿರುವ ಗ್ರಾಹಕರಿಗೆ 90 ದಿನಗಳ ಕಾಲ ವಿನಾಯಿತಿ ಇರಲಿದೆ.

ಟ್ವಿಟ್ಟರ್ ಬ್ಲೂ ಚಂದಾದಾರಿಕೆಯಲ್ಲಿ 'ಬ್ಲೂ ಟಿಕ್' ಚಿಹ್ನೆಯ ಜೊತೆಗೆ ಲಭ್ಯವಾಗುವಂತಹ ಪ್ರೀಮಿಯಂ ವೈಶಿಷ್ಟ್ಯಗಳು ಯಾವುವು?
ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಖರೀದಿಸಿದ ಗ್ರಾಹಕರು 'ಬ್ಲೂ ಟಿಕ್' ಚಿಹ್ನೆ ಮಾತ್ರವಲ್ಲದೇ, 42 ನಿಮಿಷಗಳವರೆಗೆ ದೊಡ್ಡ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಟ್ವಿಟ್ಟರ್ ಬ್ಲೂ ಚಂದಾದಾರಿಕೆ ಪಡೆದ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರಲಿದೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೇ, ಟ್ವಿಟ್ಟರ್ ತರುವ ಎಲ್ಲಾ ಹೊಸ ಅಪ್‌ಡೇಟ್‌ಗಳು ಟ್ವಿಟ್ಟರ್ ಬ್ಲೂ ಗ್ರಾಹಕರಿಗೆ ಮೊದಲು ಲಭ್ಯವಿರುತ್ತವೆ.

Twitter Blue By November-End In India 5 Questions And Answers.