ಬ್ರೇಕಿಂಗ್ ನ್ಯೂಸ್
10-11-22 07:44 pm Source: Vijayakarnataka ಡಿಜಿಟಲ್ ಟೆಕ್
ಭಾರತ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ ತನ್ನ 5G ಸ್ಮಾರ್ಟ್‌ಫೋನ್ 'Lava Blaze 5G' ಸಾಧನದ ಬೆಲೆ ಹಾಗೂ ಮಾರಾಟದ ದಿನಾಂಕವನ್ನು ಘೋಷಿಸಿದೆ. ದೇಶದಲ್ಲಿ ಇತ್ತೀಚಿಗಷ್ಟೇ ʻಮೀಡಿಯಾಟೆಕ್ ಡೈಮೆನ್ಸಿಟಿ 700ʼ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ Lava Blaze 5G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿತ್ತು. ಇದೀಗ ಈ Lava Blaze 5G ಸ್ಮಾರ್ಟ್‌ಫೋನ್ ನವೆಂಬರ್ 15ರ ಮಧ್ಯಾಹ್ನ 12 ಗಂಟೆಯಿಂದ ಪ್ರಮುಖ ಇ-ಕಾಮರ್ಸ್ ತಾಣ Amazon.in ನಲ್ಲಿ 9,999 ರೂ.ಗಳ ವಿಶೇಷ ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ಲಾವಾ ಕಂಪೆನಿ ತಿಳಿಸಿದೆ. ಇನ್ನು ಈ ಕೊಡುಗೆಯ ಬೆಲೆಯು ಸೀಮಿತ ಸ್ಟಾಕ್‌ಗೆ ಮಾತ್ರ ಇರಲಿದೆ ಎಂದು ಕಂಪೆನಿ ಹೇಳಿದೆ.
Lava Blaze 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
ನೂತನ Lava Blaze 5G ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.51-ಇಂಚಿನ HD+ (720x1,600 ಪಿಕ್ಸೆಲ್‌ಗಳು) LCD IPS 2.5D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ನಲ್ಲಿ ಚಾಲಿತವಾಗಿರುವ Lava Blaze 5G ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ Android 12 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 4GB ಆನ್‌ಬೋರ್ಡ್ RAM ಮತ್ತು 128GB ಆಂತರಿಕ ಮೆಮೊರಿ ಹೊಂದಿದ್ದು, 3GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳುವ 'RAM ಪ್ಲಸ್' ವೈಶಿಷ್ಟ್ಯವಿದೆ.
Lava Blaze 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಸೆಟಪ್ ಹೊಂದಿರುವ 50-ಮೆಗಾಪಿಕ್ಸೆಲ್ AI ಪ್ರಾಥಮಿಕ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ 5G ಬಹು 5G ಬ್ಯಾಂಡ್‌ಗಳು, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ವೈರ್‌ಲೆಸ್ ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ . 5,000mAh ಬ್ಯಾಟರಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.
ʻಲಾವಾ ಬ್ಲೇಜ್ 5Gʼ ವಿಶೇಷ ವೈಶಿಷ್ಟ್ಯದೊಂದಿಗೆ ಬರುತ್ತಿದ್ದು, ಇದರಲ್ಲಿ ʻಯೂಟ್ಯೂಬ್ʼ ಅಪ್ಲಿಕೇಶನ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರರಿಗೆ ಮಲ್ಟಿ-ಟಾಸ್ಕಿಂಗ್ ಮಾಡುವಾಗ ತಮ್ಮ ನೆಚ್ಚಿನ ವೀಡಿಯೊಗಳನ್ನು ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ. ಇಷ್ಟೇ ಅಲ್ಲದೇ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಅನ್‌ಲಾಕ್‌ನೊಂದಿಗೆ ಭದ್ರತಾ ವೈಶಿಷ್ಟ್ಯ, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಎಲ್ಲಾ ಪ್ರಮುಖ ʻ1/3/5/8/28/41/77/78ʼ 5G ಬ್ಯಾಂಡ್ ಬೆಂಬಲ ಸೇರಿದಂತಹ ಹಲವು ಪ್ರಮುಖ ವೈಶಿಷ್ಟ್ಯಗಳಿವೆ.
'ಮನೆಯಲ್ಲೇ ಉಚಿತ ಸೇವೆ' ದೊರೆಯಲಿದೆ!
ನವೆಂಬರ್ 15 ರಿಂದ ಆರಂವಾಗುತ್ತಿರುವ Lava Blaze 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗಾಗಿ 'ಮನೆಯಲ್ಲೇ ಉಚಿತ ಸೇವೆ' ಒದಗಿಸಲಾಗುವುದು ಎಂದು ಲಾವಾ ಕಂಪೆನಿ ತಿಳಿಸಿದೆ. ಗ್ರಾಹಕರು Lava Blaze 5G ಸ್ಮಾರ್ಟ್‌ಫೋನ್‌ನ ವಾರಂಟಿ ಅವಧಿಯೊಳಗೆ ಉಚಿತವಾಗಿ ಮನೆಯಲ್ಲೇ ಕುಳಿತು ಸರ್ವಿಸ್ ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ʻಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼನ ಉತ್ಪನ್ನ ವಿಭಾಗದ ಮುಖ್ಯಸ್ಥರಾದ ತೇಜಿಂದರ್ ಸಿಂಗ್ ಅವರು, "ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ ಮುಂದಿನ ಪೀಳಿಗೆಯ 5G ತಂತ್ರಜ್ಞಾನವನ್ನು ಭಾರತೀಯರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಲಿದೆ'' ಎಂದು ಹೇಳಿದ್ದಾರೆ.
Lava 5g Smartphone Blaze 5g To Go On Sale Starting November 15 On Amazon In.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm