ಭಾರತದ ಅತ್ಯಂತ ಕಡಿಮೆ ಬೆಲೆಯ 5G ಫೋನ್ ಮಾರಾಟ ನಾಳೆಯಿಂದ ಆರಂಭ!

14-11-22 07:27 pm       Source: Vijayakarnataka   ಡಿಜಿಟಲ್ ಟೆಕ್

ನಾಳೆ ಮಧ್ಯಾಹ್ನ 12 ಗಂಟೆಯಿಂದ ಲಾವಾದ ಅಧಿಕೃತ ವೆಬ್‌ಸೈಟ್ ಪ್ರಮುಖ ಇ-ಕಾಮರ್ಸ್ ತಾಣ Amazon.in ನಲ್ಲಿ 9,999 ರೂ.ಗಳ ವಿಶೇಷ ಬೆಲೆಯಲ್ಲಿ 'Lava Blaze 5G' ಸ್ಮಾರ್ಟ್‌ಫೋನ್ ಮಾರಾಟವಾವಾಗಲಿದ್ದು, ಈ ಕೊಡುಗೆಯ ಬೆಲೆಯು ಸೀಮಿತ ಸ್ಟಾಕ್‌ಗೆ ಮಾತ್ರ ಇರಲಿದೆ ಎಂದು ಲಾವಾ ಕಂಪೆನಿ ತಿಳಿಸಿದೆ.

ಭಾರತದಲ್ಲೇ ಅತ್ಯಂತ ಕಡಿಮೆ ಬೆಲೆಯ 5G ಫೋನ್ ಎಂದು ಹೇಳಲಾಗಿರುವ 'Lava Blaze 5G' ಸ್ಮಾರ್ಟ್‌ಫೋನ್ ದೇಶದಲ್ಲಿ ನಾಳೆಯಿಂದ (ನವೆಂಬರ್ 15) ಮಾರಾಟಕ್ಕೆ ಬರುತ್ತಿದೆ. ನಾಳೆ ಮಧ್ಯಾಹ್ನ 12 ಗಂಟೆಯಿಂದ ಲಾವಾದ ಅಧಿಕೃತ ವೆಬ್‌ಸೈಟ್ ಪ್ರಮುಖ ಇ-ಕಾಮರ್ಸ್ ತಾಣ Amazon.in ನಲ್ಲಿ 9,999 ರೂ.ಗಳ ವಿಶೇಷ ಬೆಲೆಯಲ್ಲಿ 'Lava Blaze 5G' ಸ್ಮಾರ್ಟ್‌ಫೋನ್ ಮಾರಾಟವಾವಾಗಲಿದ್ದು, ಈ ಕೊಡುಗೆಯ ಬೆಲೆಯು ಸೀಮಿತ ಸ್ಟಾಕ್‌ಗೆ ಮಾತ್ರ ಇರಲಿದೆ ಎಂದು ಲಾವಾ ಕಂಪೆನಿ ತಿಳಿಸಿದೆ. ಕಳೆದ ವಾರವಷ್ಟೇ ದೇಶದಲ್ಲಿ Lava Blaze 5G ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್‌ಫೋನ್ ದೇಶದ ಎಲ್ಲಾ ಪ್ರಮುಖ 5G ಬ್ಯಾಂಡ್‌ಗಳಿಗೆ ಬಂಬಲ ನೀಡಲಿದೆ ಎಂದು ಲಾವಾ ಕಂಪೆನಿ ಹೇಳಿದೆ. ಹಾಗಾದರೆ, ಹೊಸ Lava Blaze 5G ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

'ಮನೆಯಲ್ಲೇ ಉಚಿತ ಸೇವೆ' ದೊರೆಯಲಿದೆ!

ನವೆಂಬರ್‌ 15 ರಿಂದ ಆರಂವಾಗುತ್ತಿರುವ Lava Blaze 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗಾಗಿ 'ಮನೆಯಲ್ಲೇ ಉಚಿತ ಸೇವೆ' ಒದಗಿಸಲಾಗುವುದು ಎಂದು ಲಾವಾ ಕಂಪೆನಿ ತಿಳಿಸಿದೆ. ಗ್ರಾಹಕರು Lava Blaze 5G ಸ್ಮಾರ್ಟ್‌ಫೋನ್‌ನ ವಾರಂಟಿ ಅವಧಿಯೊಳಗೆ ಉಚಿತವಾಗಿ ಮನೆಯಲ್ಲೇ ಕುಳಿತು ಸರ್ವಿಸ್ ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ನವೆಂಬರ್‌ 15 ರಿಂದ ಆರಂವಾಗುತ್ತಿರುವ Lava Blaze 5G ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗಾಗಿ 'ಮನೆಯಲ್ಲೇ ಉಚಿತ ಸೇವೆ' ಒದಗಿಸಲಾಗುವುದು ಎಂದು ಲಾವಾ ಕಂಪೆನಿ ತಿಳಿಸಿದೆ. ಗ್ರಾಹಕರು Lava Blaze 5G ಸ್ಮಾರ್ಟ್‌ಫೋನ್‌ನ ವಾರಂಟಿ ಅವಧಿಯೊಳಗೆ ಉಚಿತವಾಗಿ ಮನೆಯಲ್ಲೇ ಕುಳಿತು ಸರ್ವಿಸ್ ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

Lava Blaze 5G: ಡಿಸ್‌ಪ್ಲೇ ಮತ್ತು ಪ್ರೊಸೆಸರ್

Lava Blaze 5G to go on sale for first time in India: Details on offer | Mint

ನೂತನ Lava Blaze 5G ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.51-ಇಂಚಿನ HD+ (720x1,600 ಪಿಕ್ಸೆಲ್‌ಗಳು) LCD IPS 2.5D ಕರ್ವ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ನಲ್ಲಿ ಚಾಲಿತವಾಗಿರುವ Lava Blaze 5G ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ Android 12 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು 4GB ಆನ್‌ಬೋರ್ಡ್ RAM ಮತ್ತು 128GB ಆಂತರಿಕ ಮೆಮೊರಿ ಹೊಂದಿದ್ದು, 3GB ವರೆಗೆ ವರ್ಚುವಲ್ RAM ಹೆಚ್ಚಿಸಿಕೊಳ್ಳುವ 'RAM ಪ್ಲಸ್' ವೈಶಿಷ್ಟ್ಯವಿದೆ.

Lava Blaze 5G: ಕ್ಯಾಮೆರಾ ಮತ್ತು ಬ್ಯಾಟರಿ

Lava Blaze 5G - Price in India, Specifications & Features | Mobile Phones

Lava Blaze 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ AI ಪ್ರಾಥಮಿಕ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ. 5G ಬಹು 5G ಬ್ಯಾಂಡ್‌ಗಳು, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ವೈರ್‌ಲೆಸ್ ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುವ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.

Lava Blaze 5G: ಇತರೆ ವೈಶಿಷ್ಟ್ಯಗಳು

Lava Blaze 5G with 4 GB RAM, 50 MP triple camera setup unveiled; to be  priced around Rs 10,000

ʻLava Blaze 5Gʼ ಒಂದು ವಿಶೇಷ ವೈಶಿಷ್ಟ್ಯದೊಂದಿಗೆ ಬರುತ್ತಿದ್ದು, ಇದರಲ್ಲಿ ʻಯೂಟ್ಯೂಬ್ʼ ಅಪ್ಲಿಕೇಶನ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಲ್ಟಿ-ಟಾಸ್ಕಿಂಗ್ ಕಾರ್ಯಗಳಲ್ಲಿಯೂ ತಮ್ಮ ನೆಚ್ಚಿನ ವೀಡಿಯೊಗಳನ್ನು ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ. ಇಷ್ಟೇ ಅಲ್ಲದೇ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ನೊಂದಿಗೆ ಭದ್ರತಾ ವೈಶಿಷ್ಟ್ಯ, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಎಲ್ಲಾ ಪ್ರಮುಖ ʻ1/3/5/8/28/41/77/78ʼ 5G ಬ್ಯಾಂಡ್ ಬೆಂಬಲ ಸೇರಿದಂತಹ ಹಲವು ಪ್ರಮುಖ ವೈಶಿಷ್ಟ್ಯಗಳಿವೆ.

Lava Blaze 5g Set To Go On First Sale Starting November 15 Check Details.