1,299 ರೂ.ಗೆ boAt ಕಂಪೆನಿಯ ಹೊಸ 'Airdopes 100' ಇಯರ್‌ಬಡ್ಸ್ ಲಾಂಚ್!

15-11-22 08:00 pm       Source: Vijayakarnataka   ಡಿಜಿಟಲ್ ಟೆಕ್

Airdopes 100 ಸಾಧನವು ಬ್ಲೂಟೂತ್ v5.2 ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಾಧನದ ವಾಯರ್‌ಲೆಸ್‌ ಶ್ರೇಣಿಯು 10 ಮೀಟರ್‌ ಎಂದು ಕಂಪೆನಿ ತಿಳಿಸಿದೆ. Airdopes 100 ಸಾಧನದ ಬಡ್ಸ್‌ಗಳಲ್ಲಿ ಟಚ್ ಕಂಟ್ರೋಲ್‌ ಫೀಚರ್ಸ್ ನೀಡಲಾಗಿದೆ.

ದೇಶದ ಜನಪ್ರಿಯ ಆಡಿಯೋ ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ boAt ಕಂಪೆನಿಯು ಇಂದು ತನ್ನ ವಿನೂತನ 'Airdopes 100' ಇಯರ್‌ಬಡ್ ಸಾಧನವನ್ನು ಬಿಡುಗಡೆಗೊಳಿಸಿದೆ. ದೇಶದ ಸಂಗೀತ ಪ್ರಿಯರನ್ನು ಸೆಳೆಯುವ ಸಲುವಾಗಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುವ boAt ಕಂಪೆನಿಯು, ಹೊಸ Airdopes 100 ಇಯರ್‌ಬಡ್ ಸಾಧನದಲ್ಲಿ ENx, ಬೀಸ್ಟ್‌, IWP ಹಾಗೂ ASAP ಸೇರಿದಂತೆ ಇನ್ನಿತರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ತಂದಿದೆ. ಹಾಗಾದರೆ, ಈ ಹೊಸ Airdopes 100 ಇಯರ್‌ಬಡ್ ಸಾಧನ ಹೇಗಿದೆ ಮತ್ತು ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

'Airdopes 100' ಇಯರ್‌ಬಡ್ ಸಾಧನ ಹೇಗಿದೆ?

Boat Airdopes 100 TWS earbuds with ENx Technology enabled quad mics  launched at Rs 1,299 - Times of India

 

boAt ಪರಿಚಯಿಸಿರುವ ಹೊಸ Airdopes 100 ಸಾಧನವು ಅತ್ಯುತ್ತಮ ವಿನ್ಯಾಸ ಹಾಗೂ ಆಕರ್ಷಕ ಚಾರ್ಜಿಂಗ್ ಕೇಸ್‌ನೊಂದಿಗೆ ಬಿಡುಗಡೆಯಾಗಿದೆ. IPX4 ರೇಟ್‌ ವಾಟರ್‌ ಹಾಗೂ ಡಸ್ಟ್ ರೆಸಿಸ್ಟೆಂಟ್ ಸಾಮರ್ಥ್ಯವನ್ನು ಹೊಂದಿರುವ ಈ ಸಾಧನವು 10mm ಡೈನಾಮಿಕ್ ಡ್ರೈವರ್‌ ಈ ಬಡ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿರುವ ಬೀಸ್ಟ್‌ ಮೋಡ್ 50ms ನಲ್ಲಿ ಯಾವುದೇ ವಿಳಂಬವಿಲ್ಲದೆ ಬ್ಲೂಟೂತ್ ಮೂಲಕ ಅಲ್ಟ್ರಾ ಲೋ ಲೇಟೆನ್ಸಿ ಆಡಿಯೊ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ

ಟಚ್ ಕಂಟ್ರೋಲ್‌ ಫೀಚರ್ಸ್ ತರಲಾಗಿದೆ.

Airdopes 100 ಸಾಧನವು ಬ್ಲೂಟೂತ್ v5.2 ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಾಧನದ ವಾಯರ್‌ಲೆಸ್‌ ಶ್ರೇಣಿಯು 10 ಮೀಟರ್‌ ಎಂದು ಕಂಪೆನಿ ತಿಳಿಸಿದೆ. Airdopes 100 ಸಾಧನದ ಬಡ್ಸ್‌ಗಳಲ್ಲಿ ಟಚ್ ಕಂಟ್ರೋಲ್‌ ಫೀಚರ್ಸ್ ನೀಡಲಾಗಿದೆ. ಇದು ಕರೆಗಳಿಗೆ ಪ್ರತಿಕ್ರಿಯಿಸಲು ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಮಾಡಲು ಸಹಾಯ ಮಾಡಲಿದೆ. ಇಷ್ಟೇ ಅಲ್ಲದೇ, ಇದರಲ್ಲಿರುವ ಇನ್‌ಬಿಲ್ಟ್‌ ಒನ್ ಟಚ್ ಫೀಚರ್ ಮೂಲಕ ಹವಾಮಾನ ವರದಿ, ಸುದ್ದಿ ಹಾಗೂ ಕ್ರಿಕೆಟ್‌ ಸಂಬಂಧಿತ ಮಾಹಿತಿಗಳನ್ನು ಪಡೆಯಬಹುದು.

5 ನಿಮಿಷ ಚಾರ್ಜ್ ಮಾಡಿದರೆ ಗಂಟೆಯ ಬಳಕೆ!

boAt Airdopes 100 with up to 50h total playback, fast charge launched for Rs.  1299

Airdopes 100 ಸಾಧನದಲ್ಲಿ 'ಬೋಟ್ ಸಿಗ್ನೇಚರ್ ಸೌಂಡ್' ವೈಶಿಷ್ಟ್ಯವಿದೆ. ಇದರಲ್ಲಿರುವ ಕ್ವಾಡ್ ಮೈಕ್ರೊಫೋನ್‌ಗಳು ಕರೆಗಳನ್ನು ಸೂಕ್ತವಾಗಿ ನಿರ್ವಹಿಸಲಿವೆ ಎಂದು ಕಂಪೆನಿ ತಿಳಿಸಿದೆ. ಈ Airdopes 100 ಸಾಧನದ ವಿಶೇಷತೆ ಎಂದರೆ, ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದರೆ 50 ಗಂಟೆಗಳವರೆಗೆ ಕಾರ್ಯನಿರ್ವಹಿಸಲಿದೆ. ASAP ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಇದರ ಇಯರ್‌ಬಡ್‌ಗಳನ್ನು ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಗಂಟೆಯವರೆಗೆ ಬಳಕೆ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

'Airdopes 100' ಸಾಧನದ ಬೆಲೆ ಹಾಗೂ ಲಭ್ಯತೆ

airdopes-100-

ಹೊಸ Airdopes 100 ಸಾಧನವನ್ನು ಕೇವಲ 1,299 ಬೆಲೆಯಲ್ಲಿ ಪರಿಚಯಿಸಲಾಗಿದೆ. ಸಫೈರ್ ಬ್ಲೂ, ಓಪಲ್ ಬ್ಲ್ಯಾಕ್ ಮತ್ತು ಎಮರಾಲ್ಡ್ ಗ್ರೀನ್‌ ಮೂರು ಬಣ್ಣಗಳಲ್ಲಿ ಲಭ್ಯವಿರುವ ಈ ಸಾಧನವನ್ನು ಇಂದಿನಿಂದಲೇ ಬೋಟ್‌ನ ಅಧಿಕೃತ ಜಾಲತಾಣ (boat-lifestyle.com) ಹಾಗೂ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಕ್ಕಿಡಲಾಗಿದೆ. ಇನ್ನು 1,299 ರೂ. ಕೊಡುಗೆಯ ಬೆಲೆಯಲ್ಲಿ ಕೇವಲ ಸೀಮಿತ ಸ್ಟಾಕ್ Airdopes 100 ಸಾಧನಗಳನ್ನು ಮಾರಾಟ ಮಾಡುವುದಾಗಿ ಕಂಪೆನಿ ತಿಳಿಸಿದೆ.

Boat Airdopes 100 Tws Earbuds Will Be Available For Rs 1,299.